Advertisement
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯ ಅವರು ಉದ್ಘಾಟಿಸಿ, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಶರೀರ ಹೊಂದುವುದು ಅತೀ ಅಗತ್ಯ. ಇಂದಿನ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವಾಯು, ನೀರು, ಕಲುಷಿತದಿಂದ ಕೂಡಿದ್ದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುತ್ತದೆ. ಇದರಿಂದ ನಮ್ಮ ಶರೀರದ ರಕ್ಷಣೆಯಲ್ಲಿ ವೈದ್ಯರ ಪಾತ್ರ ಅತೀ ಮುಖ್ಯವಾಗಿರುತ್ತದೆ. ಈ ಆಸ್ಪತ್ರೆಯಲ್ಲಿರುವ ಪರಿಣತ ವೈದ್ಯರ ತಂಡ ಹಾಗೂ ಇದೀಗ ಉದ್ಘಾಟನೆಗೊಂಡ ಡಯಾಬಿಟಿಸ್ ಚಿಕಿತ್ಸಾ ವಿಭಾಗ ಉತ್ತಮ ಸೇವೆ ನೀಡಲಿ ಎಂದು ಹಾರೈಸಿದರು.
ಪ್ರಸಿದ್ಧ ವೈದ್ಯರನ್ನು ಒಳಗೊಂಡ ಆಸ್ಪತ್ರೆಯು ಸ್ತ್ರೀರೋಗ, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಮಕ್ಕಳ ವಿಭಾಗ, ಎಲುಬು ಮತ್ತು ಮೂಳೆ ವಿಭಾಗ ಮುಂತಾದ ಹೊರರೋಗಿ ವಿಭಾಗ ಹಾಗೂ ಸುಸಜ್ಜಿತ ಸೌಲಭ್ಯಗಳ ಒಳರೋಗಿ ವಿಭಾಗ, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಡೊಪ್ಲರ್ ಸ್ಕಾ Âನ್, ಸುಸಜ್ಜಿತ ಆಪರೇಶನ್ ಥಿಯೇಟರ್, ನವೀನ ತಾಂತ್ರಿಕತೆಯ ಲ್ಯಾಬೋರೇಟರಿ, ಅತ್ಯುತ್ತಮ ನರ್ಸಿಂಗ್ ಕೇರ್, ಪರಿಣಾಮಕಾರಿ ಎಕ್ಸ್‌ರೇ ವಿಭಾಗ, ಅಪಘಾತ-ತುರ್ತು ಚಿಕಿತ್ಸಾ ಘಟಕ, ಐಎಫ್ ಸೆಂಟರ್ ಹಾಗೂ ಇನ್ನಿತರ ಆಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಟಿ.ಎಸ್. ರಾವ್ ಅವರು ಪ್ರಸ್ತಾವನೆಯಲ್ಲಿ ತಿಳಿಸಿದರು.