Advertisement

ಮುನ್ನೆಚ್ಚರಿಕೆ ವಹಿಸಿದರೆ ಮಧುಮೇಹ ನಿಯಂತ್ರಣ ಸಾಧ್ಯ

06:44 PM Jul 08, 2021 | Team Udayavani |

ದೊಡ್ಡಬಳ್ಳಾಪುರ: ಲಯನ್ಸ್‌ ಕ್ಲಬ್‌ನಿಂದ ನಗರದ ಲಯನ್ಸ್‌ ಭವನದಲ್ಲಿ ಉಚಿತ ಮಧುಮೇಹ ತಪಾಸಣೆ ಹಾಗೂ ಮಧುಮೇಹಿಗಳ ರೆಟಿನೋಪತಿ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

Advertisement

ವೈದ್ಯೆ ಡಾ.ಪ್ರಿಯಾಂಕ ಮಾತನಾಡಿ, ಮಧುಮೇಹ ಬರೀ ರಕ್ತ ಮೂತ್ರದಲ್ಲಿ ಕಾಣಿಸಿಕೊಂಡುದೇಹವನ್ನು ನಿಶ್ಚಕ್ತಿ ಮಾಡುವುದಷ್ಟೇ ಅಲ್ಲದೇ,ಮಧುಮೇಹದಿಂದ ಹೃದಯ ಸಂಬಂಧ ಕಾಯಿಲೆಗಳು, ಮೂತ್ರಪಿಂಡಕ್ಕೆ ಹಾನಿ,ಕಣ್ಣಿನ ತೊಂದರೆ,ನರಗಳ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ.

ಅನಿಯಮಿತ ಆಹಾರ ಪದ್ಧತಿ ಮೊದಲಾದಕಾರಣಗಳು ಮಧುಮೇಹಕ್ಕೆ ಕಾರಣವಾಗಿವೆ.ಆಹಾರದಲ್ಲಿ ನಿಯಂತ್ರಣ, ದೈಹಿಕ ಚಟುವಟಿಕೆಗಳಮೂಲಕ ಮುನ್ನೆಚ್ಚರಿಕೆ ವಹಿಸಿದರೆ ಮಧುಮೇಹನಿಯಂತ್ರಣದಲ್ಲಿಡಬಹುದು ಎಂದರು.

ಲಯನ್ಸ್‌ ಕ್ಲಬ್‌ ಅಧ್ಯಕ್ಷ ಕೆ.ಜಿ.ಗೋಪಾಲ್‌ಅಧ್ಯಕ್ಷತೆ ವಹಿಸಿದ್ದರು.ಶಂಕರಮ್ಮ ಲಕ್ಕೂರುನಾಗಣ್ಣ ಸ್ಮರಣಾರ್ಥ, ಲಯನ್‌ ಪ್ರದೀಪ್‌ಕುಮಾರ್‌ ಹಾಗೂ ಲಕ್ಷಿ ¾à ಜನಾರ್ಧನ್‌ಕುಟುಂಬದವರು ಶಿಬಿರವನ್ನು ಪ್ರಾಯೋಜಿಸಿದ್ದರು. ಮಧುಮೇಹ ಕಾರ್ಯಕ್ರಮ ಜಿಲ್ಲಾಸಂಯೋಜಕ ಲಯನ್‌ ಸಿ.ಎಂ.ನಾರಾಯಣಸ್ವಾಮಿ, ಡಯಾಬಿಟಿಕ್‌ಕಮಿಟಿ ಅಧ್ಯಕ್ಷ ಎಲ್‌.ಎನ್‌.ಪ್ರದೀಪ್‌ ಕುಮಾರ್‌, ಲಯನ್ಸ್‌ ಕ್ಲಬ್‌ಕಾಯದರ್ಶಿ ಕೆ.ಶಿವಶಂಕರ್‌, ಖಜಾಂಚಿಮಂಗಳಗೌರಿ ಪರ್ವತಯ್ಯ, ಸಹ ಕಾರ್ಯದರ್ಶಿರೇಖಾ ವೆಂಕಟೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next