Advertisement

ಐಸಿಯುನಲ್ಲಿ ಪುಟ್ಟ ಕಂದ: ಮಗು ಜನಿಸಿ 2 ತಿಂಗಳಾದ ಬಳಿಕ ಸತ್ಯ ಬಿಚ್ಚಿಟ್ಟ ನಟಿ ದಿಯಾ

05:25 PM Jul 14, 2021 | Team Udayavani |

ಮುಂಬೈ : ಬಾಲಿವುಡ್ ನಟಿ ದಿಯಾ ಮಿರ್ಜಾ ತಾವು ತಾಯಿಯಾದ ವಿಚಾರವನ್ನು ಎರಡು ತಿಂಗಳ ಬಳಿಕ ಎಲ್ಲರೆದರೂ ಹಂಚಿಕೊಂಡಿದ್ದಾರೆ. ಜೊತೆಗೆ ಈ ವಿಷಯ ಇಷ್ಟು ದಿನಗಳವರೆಗೆ ಗುಟ್ಟಾಗಿ ಇಟ್ಟಿರುವುದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.

Advertisement

ದಿಯಾ ಮಿರ್ಜಾ ಇಂದು (ಜುಲೈ 14) ಇನ್ಸ್ಟಾಗ್ರಾಂನಲ್ಲಿ ತನ್ನ ಮಗುವಿನ ಮೊದಲ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ “ತನ್ನ ಮಗ ಅವ್ಯಾನ್ ಆಜಾದ್ ರೇಖಿ ಮೇ 14 ರಂದು ಅವಧಿಪೂರ್ವವಾಗಿ ಜನಿಸಿದ ಮತ್ತು ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರ ಪ್ರೀತಿಯ ಆರೈಕೆಯಲ್ಲಿದ್ದ” ಎಂದು ಬರೆದಿದ್ದಾರೆ.

ದಿಯಾಗೆ ತುರ್ತು ಅಪೆಂಡೆಕ್ಟಮಿ ಮತ್ತು ತೀವ್ರವಾದ ಬ್ಯಾಕ್ಟೀರಿಯಾದ ಸೋಂಕು ಇದ್ದು ಅದು ಮಗುವಿಗೆ ಹಾನಿಯಾಗಬಹುದು ಮತ್ತು ಸಿ-ಸೆಕ್ಷನ್ ನಂತರ, ಮಗುವನ್ನು ನವಜಾತ ಶಿಶುಗಳ ಐಸಿಯುನಲ್ಲಿ ಇರಿಸಿ ಆರೈಕೆ ಮಾಡಲಾಗಿತ್ತು.

ಮಗು ತನ್ನ ಹೆತ್ತವರು, ಅಜ್ಜಿಯರು ಮತ್ತು ಸಹೋದರಿ ಸಮೈರಾ ಇರುವ ಮನೆಗೆ ಶೀಘ್ರವೇ ಬರುತ್ತಾನೆ ಎಂದು ದಿಯಾ ಹೇಳಿದ್ದಾರೆ.

ಈ ವರ್ಷ ಫೆಬ್ರವರಿಯಲ್ಲಿ ದಿಯಾ ಮಿರ್ಯಾ ಅವರು ಉದ್ಯಮಿ ವೈಭವ್​ ರೇಖಿ ಜೊತೆ ಮದುವೆ ಆಗಿದ್ದರು. ಇದು ಅವರಿಗೆ ಎರಡನೇ ವಿವಾಹ. ಅದಕ್ಕೂ ಮುನ್ನ 2014ರಲ್ಲಿ ಅವರು ಸಾಹಿಲ್​ ಸಂಘ ಜೊತೆ ಮದುವೆಯಾಗಿ, 2019ರಲ್ಲಿ ವಿಚ್ಛೇದನ ನೀಡಿದ್ದರು. ರೆಹ್ನಾ ಹೈ ತೇರೆ ದಿಲ್​ ಮೆ, ಲಗೇ ರಹೋ ಮುನ್ನಾ ಭಾಯ್​, ಸಂಜು ಮುಂತಾದ ಸಿನಿಮಾಗಳಿಂದ ದಿಯಾ ಮಿರ್ಜಾ ಹೆಚ್ಚು ಫೇಮಸ್​ ಆಗಿದ್ದಾರೆ.

Advertisement

ದಿಯಾ ಕೊನೆಯ ಬಾರಿಗೆ ಅನುಭವ್ ಸಿನ್ಹಾ ಅವರ “ಥಪ್ಪಡ್” ನಲ್ಲಿ ಕಾಣಿಸಿಕೊಂಡಿದ್ದಾರೆ. ತಾಪ್ಸಿ ಪನ್ನು ಅಭಿನಯದ ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಸಿನಿಮಾ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ನಾಗಾರ್ಜುನ ಮತ್ತು ಸೈಯಾಮಿ ಖೇರ್ ಜೊತೆಯಾಗಿ ನಟಿಸಿರುವ ತೆಲುಗು ಆಕ್ಷನ್ ಡ್ರಾಮಾ “ವೈಲ್ಡ್ ಡಾಗ್” ನಲ್ಲಿ ದಿಯಾ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next