Advertisement

ಫಾರಿನ್‌ “ಧ್ವನಿ” ಮಾ.31ರಂದು ಅಮೇರಿಕಾದಲ್ಲಿ ಬಿಡುಗಡೆ

03:33 PM Mar 23, 2017 | Team Udayavani |

ಕಳೆದ ವಾರ ಬಿಡುಗಡೆಯಾದ “ಧ್ವನಿ’ ಚಿತ್ರವು ಫಾರಿನ್‌ಗೆ ಹೊರಟಿದೆ. ಮಾರ್ಚ್‌ 31ರಂದು ಚಿತ್ರವು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಅದಲ್ಲದೆ ಅಮೇರಿಕಾದ ಇನ್ನೊಂದೆರೆಡು ಪ್ರಮುಖ ನಗರಗಳಲ್ಲಿ ವೀಕೆಂಡ್‌ ಪ್ರದರ್ಶನ ಕಾಣಲಿವೆ.

Advertisement

“ಧ್ವನಿ’, ಸೆಬಾಸ್ಟಿಯನ್‌ ಡೇವಿಡ್‌ ನಿರ್ದೇಶನದ ಚಿತ್ರ. ಈ ಚಿತ್ರ 09ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೊದಲು ಪ್ರದರ್ಶನವಾಗಿತ್ತು. ಆ ನಂತರ ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಸಿಕ್ಕಿದ ಪ್ರತಿಕ್ರಿಯೆಯನ್ನು ಕೇಳಿದ ಅಮೇರಿಕನ್ನಡಿಗರು, ಚಿತ್ರವನ್ನು
ಅಮೇರಿಕಾದಲ್ಲಿ ಬಿಡುಗಡೆ ಮಾಡುವುದಕ್ಕೆ ಆಸಕ್ತಿ ತೋರಿಸಿದ್ದಾರಂತೆ. ಹಾಗಾಗಿ ಮಾರ್ಚ್‌ 31ರಿಂದ
ಚಿತ್ರವು ಕ್ಯಾಲಿಫೋರ್ನಿಯಾದಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ಸೆಬಾಸ್ಟಿಯನ್‌ ಡೇವಿಡ್‌. ಹೆಣ್ಣಿನಿಂದ
ದೌರ್ಜನ್ಯಕ್ಕೊಳಗಾದ ಶೋಷಿತ ಗಂಡಸರ ಕಥೆಯಿರುವ ಚಿತ್ರದಲ್ಲಿ ಚಂದನ್‌ ಶರ್ಮ, ರಮೇಶ್‌ ಭಟ್‌, ಇತಿ ಆಚಾರ್ಯ, ವಿನಯಾ ಪ್ರಸಾದ್‌ ಅಭಿನಯಿಸಿದ್ದಾರೆ.

ಕೃಷ್ಣೇಗೌಡ ಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಲಯನ್‌ ರಮೇಶ್‌ ಬಾಬು ನಿರ್ಮಿಸಿದ್ದಾರೆ. ರಾಜ್‌
ಭಾಸ್ಕರ್‌ ಸಂಗೀತ ,ಮತ್ತು ಆರ್‌. ಗಿರಿ ಅವರ ಛಾಯಾಗ್ರಹಣವಿದೆ. ಈ ಚಿತ್ರವು 40ಕ್ಕೂ ಹೆಚ್ಚು
ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next