Advertisement

ಬಿಜೆಪಿಗೆ ದಲಿತರ ಬಗ್ಗೆ ಧೃತರಾಷ್ಟ್ರ ಪ್ರೇಮ: ಧ್ರುವನಾರಾಯಣ

12:22 AM Jan 11, 2023 | Team Udayavani |

ಮೈಸೂರು: ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಡಾ| ಬಿ.ಆರ್‌.ಅಂಬೇಡ್ಕರ್‌ ಹಾಗೂ ದಲಿತರ ಸ್ಮರಣೆ ಮಾಡುತ್ತಾರೆ. ಅಧಿಕಾರಕ್ಕೆ ಬಂದಾಗ ಅವರನ್ನು ಶೋಷಿಸುವುದು ಅವರ ಸಂಸ್ಕೃತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಲೇವಡಿ ಮಾಡಿದರು.

Advertisement

ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಬಿಜೆಪಿಗೆ ದಲಿತರ ಬಗ್ಗೆ ಧೃತರಾಷ್ಟ್ರ ಪ್ರೇಮವಿದೆ. ಮಹಾಭಾರತದಲ್ಲಿ ಧೃತರಾಷ್ಟ್ರನು ಭೀಮನನ್ನು ನಾಶ ಮಾಡುವ ಉದ್ದೇಶದಿಂದ ಮನದೊಳಗೆ ದ್ವೇಷವನ್ನು ಇಟ್ಟು, ಮೇಲ್ನೋಟಕ್ಕೆ ಪ್ರೀತಿ ತೋರಿಸುತ್ತಾನೆ. ದಲಿತರ ಬಗ್ಗೆ ಬಜೆಪಿಯ ಉದ್ದೇಶವೂ ಇದೇ ಆಗಿದೆ ಎಂದು ದೂರಿದರು.

ದಲಿತರು ಎಚ್ಚರವಹಿಸಲಿ
ದಲಿತರನ್ನು ಅಪ್ಪಿಕೊಳ್ಳುವ ಆಸೆ ತೋರುತ್ತಾ, ಅವರನ್ನು ನಾಶ ಮಾಡಲು ಸಂಚು ರೂಪಿಸುತ್ತಿದೆ. ಚುನಾವಣೆ ಬಂದಾಗ ದಲಿತರನ್ನು ಸ್ಮರಿಸೋದು, ಅಧಿಕಾರಕ್ಕೆ ಬಂದ ಮೇಲೆ ಅವರನ್ನು ಶೋಷಿಸುವುದು ಬಿಜೆಪಿ ಸಂಸ್ಕೃತಿ. ಈ ಬಗ್ಗೆ ದಲಿತರು ಎಚ್ಚರ ವಹಿಸಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಅಥವಾ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ದಲಿತರ ಏಳಿಗೆಗಾಗಿ ಅತಿ ಹೆಚ್ಚು ಕಾರ್ಯಕ್ರಮ ನೀಡಿದ ಹಾಗೂ ಅತಿ ಹೆಚ್ಚು ರಾಜಕೀಯ ಸ್ಥಾನಮಾನ ನೀಡಿದ ಪಕ್ಷ ಕಾಂಗ್ರೆಸ್‌. ಹೀಗಾಗಿ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಅವರುನಾನೊಬ್ಬ ಅಂಬೇಡ್ಕರ್‌ ವಾದಿ ಎಂದು ಹೇಳಿಕೊಂಡಿದ್ದಾರೆ. ಆದರೆ, ಅಂಬೇಡ್ಕರ್‌ ಆಶಯಗಳನ್ನು ನಿಮ್ಮ ಆಡಳಿತದಲ್ಲಿ ಈಡೇರಿಸಿದ್ದೀರಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕುಟುಕಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next