Advertisement

ಧ್ರುವ ಶರ್ಮಾರದ್ದು ಆತ್ಮಹತ್ಯೆ!; ದಿವ್ಯಾಂಗ ಸಾಧಕನ ದುರಂತ ಅಂತ್ಯ 

11:03 AM Aug 01, 2017 | Team Udayavani |

ಬೆಂಗಳೂರು: ದಿವ್ಯಾಂಗ ಬಹುಮುಖ ಪ್ರತಿಭೆ, ನಟ ಮತ್ತು ಸಿಸಿಎಲ್‌ ಆಟಗಾರಧ್ರುವಾ ಶರ್ಮಾ ಅನಾರೋಗ್ಯದಿಂದ ಸಾವನ್ನಪ್ಪಿಲ್ಲ, ಬದಲಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ. 

Advertisement

ಧ್ರುವಶರ್ಮಾ ಆನಾರೋಗ್ಯದಿಂದ ಸೋಮವಾರ ರಾತ್ರಿ  ಮೃತಪಟ್ಟಿದ್ದರು ಎಂದು ಮೊದಲು ವರದಿಯಾಗಿತ್ತು. ಆದರೆ ಧ್ರುವ ಶರ್ಮಾ ತಂದೆ ಸುರೇಶ್‌ ಶರ್ಮಾ ಅವರು ರಾಜಾನುಕುಂಟೆ ಪೊಲೀಸ್‌ ಠಾಣೆಗೆ ದೂರು ನೀಡಿದ ಬಳಿಕ ಆತ್ಮಹತ್ಯೆ ಎಂದು ತಿಳಿದು ಬಂದಿದೆ. 

ಕೌಟುಂಬಿಕ ಕಲಹ, ಕಂಪೆನಿಯಲ್ಲಿ ನಷ್ಟ ಮತ್ತು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಂಡಿರುವ ಬಗ್ಗೆ ವರದಿಯಾಗಿದೆ. 

ಮಾನಸಿಕವಾಗಿ ತೀವ್ರವಾಗಿ ನೊಂದ ಧ್ರುವ ಜುಲೈ 29 ರಂದು ಅಲುಮ್ಯೂನಿಯಂ ಪಾಸ್ಟೇಟ್‌ ಅಂಶ ಇರುವ ವಿಷದ ಇಂಜೆಕ್ಷನ್‌ ಚುಚ್ಚಿಕೊಂಡಿದ್ದರು. ಆ ಬಳಿಕ ಹೆಬ್ಬಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ರಾತ್ರಿ ಇಹಲೋಕ ತ್ಯಜಿಸಿರುವುದಾಗಿ ವರದಿಯಾಗಿದೆ.

ಮೃತ ದೇಹ ಸಂಪೂರ್ಣವಾಗಿ ನೀಲಿ ಬಣ್ಣಕ್ಕೆ ತಿರುಗಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.  

Advertisement

ವಾಕ್‌ ಮತ್ತು ಶ್ರವಣ ಸಾಮರ್ಥ್ಯ ಹೊಂದಿರದ ಧ್ರುವ ಶರ್ಮಾ ಬಾಲ್ಯದಿಂದ ಸವಾಲುಗಳನ್ನು ಮೆಟ್ಟಿ ನಿಂತು ಸಾಧಕನಾಗಿ ಗುರುತಿಸಿಕೊಂಡಿದ್ದರು. 

2005 ರಲ್ಲಿ ಕಿವುಡರ ವಿಶ್ವ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಪರ ಉತ್ತಮ ಆಟಗಾರರಾಗಿದ್ದ ಅವರು ಕಿಚ್ಚ ಸುದೀಪ್‌ ಅವರ ಮೆಚ್ಚಿನ ಆಟಗಾರರಾಗಿದ್ದರು. 

ಆಕರ್ಷಕ ರೂಪ ಹೊಂದಿದ್ದ ಅವರು ಕೆಲ ಚಿತ್ರಗಳಲ್ಲಿ ನಾಯಕನಾಗಿ ಚಿತ್ರರಂಗದವರು ಹುಬ್ಬೇರಿಸುವಂತೆ ಮಾಡಿದ್ದರು. ಸ್ನೇಹಾಂಜಲಿ,ತಿಪ್ಪಾಜಿ ಸರ್ಕಲ್‌ ,ನೀನಂದ್ರೆ ನನಗಿಷ್ಟ ಅವರು ನಟಿಸಿದ ಪ್ರಮುಖ ಚಿತ್ರಗಳು. 

ವಿವಾಹಿತರಾಗಿದ್ದ 35 ರಹರೆಯದ ಧ್ರುವ ಶರ್ಮಾಗೆ ಇಬ್ಬರು ಮಕ್ಕಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next