Advertisement

ಆ್ಯಕ್ಷನ್ ಪ್ರಿನ್ಸ್ ಗೆ ಪ್ರೇಮ್ ಆ್ಯಕ್ಷನ್ ಕಟ್

05:37 PM Aug 24, 2021 | Team Udayavani |

ಬೆಂಗಳೂರು: ನಿರ್ದೇಶಕ ಪ್ರೇಮ್​ ‘ಏಕ್​ ಲವ್​ ಯಾ’ ನಂತರ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜೊತೆ ಸಿನಿಮಾ ಮಾಡುತ್ತಿರುವುದು ಇಂದು ಅಧಿಕೃತವಾಗಿ ಘೋಷಣೆಯಾಗಿದೆ.

Advertisement

ಇವರಿಬ್ಬರ ಕಾಂಬಿನೇಷನ್​ ಚಿತ್ರಕ್ಕೆ ಕೆವಿಎನ್​ ಪ್ರೊಡಕ್ಷನ್ಸ್​ ಬಂಡವಾಳ ಹಾಕ್ತಿದೆ..ವೆಂಕಟ್​ ಮತ್ತು ಸುಪ್ರೀತ್​​ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.. ಈಗಾಗ್ಲೇ ಸಖತ್, ಬೈಟುಲವ್, ಮತ್ತು ನಿಖಿಲ್​ ಅಭಿನಯದ ಹೊಸ ಚಿತ್ರಕ್ಕೆ ಬಂಡವಾಳ ಹಾಕಿರೋ ಕೆವಿನ್​ ಪ್ರೊಡಕ್ಷನ್ಸ್​ನ 4 ನೇ ಸಿನಿಮಾ ಇದಾಗಿದೆ.

ಸದ್ಯ ಪ್ರೇಮ್​ ಏಕ್​ಲವ್​ಯಾ ಸಿನಿಮಾ ರಿಲೀಸ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ..ಮತ್ತೊಂದೆಡೆ ಧ್ರುವ ಸರ್ಜಾ ಮಾರ್ಟಿನ್​ ಚಿತ್ರಕ್ಕೆ ಡೇಟ್​ ಕೊಟ್ಟಿದ್ದಾರೆ. ಹಾಗಾಗಿ ಡಿಸೆಂಬರ್​​ನಲ್ಲಿ ಧ್ರುವ ಮತ್ತು ಪ್ರೇಮ್​ ಕಾಂಬಿನೇಷನ್​ ಚಿತ್ರದ ಶೂಟಿಂಗ್​ ಶುರುವಾಗಲಿದೆ. ಅಂದ್ಹಾಗೆ ಇದೊಂದು ಔಟ್ ಅಂಡ್ ಔಟ್ ಆ್ಯಕ್ಷನ್​ ಸಿನಿಮಾ ಅಂತ ಹೇಳಲಾಗ್ತಿದ್ದು, ಟೈಟಲ್​ ಏನು? ಯಾವ ಜಾನರ್ ಸಿನಿಮಾ? ಈ ಚಿತ್ರದಲ್ಲಿ ಆಯಕ್ಷನ್​ ಪ್ರಿನ್ಸ್​ ಲುಕ್​ ಹೇಗಿರಲಿದೆ.?ಈ ಎಲ್ಲಾ ಕುತೂಹಲಕ್ಕೂ ಸದ್ಯದಲ್ಲೇ ತೆರೆ ಬೀಳಲಿದೆ.

ಕ್ರಿಯೇಟಿವ್ ನಿರ್ದೇಶಕ ಮತ್ತು ಲಕ್ಕಿ ನಾಯಕ ಜೊತೆಯಾಗಿರುವುದರಿಂದ ಹೊಸತನ್ನೇ ನಿರೀಕ್ಷೆ ಮಾಡಲಾಗುತ್ತಿದೆ. ಈ ಬಗ್ಗೆ ರಕ್ಷಿತಾ ಪ್ರೇಮ್ ಕೂಡಾ ಸುಳಿವು ಕೊಟ್ಟಿದ್ದು, ಇಬ್ಬರೂ ಇದುವರೆಗೆ ಮಾಡಿರದ ಹೊಸ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆ ಎಂದಿದ್ದಾರೆ. ಈ ಅದ್ಧೂರಿ ನಟ-ನಿರ್ದೇಶಕನ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next