Advertisement

Dhruva Meets Fans: ಪ್ರತಿ ಭಾನುವಾರ ಅಭಿಮಾನಿಗಳ ಜತೆ ಧ್ರುವ ಸರ್ಜಾ

01:15 PM Sep 30, 2024 | Team Udayavani |

ಧ್ರುವ ಸರ್ಜಾ ತಮ್ಮ ನೆಚ್ಚಿನ ಅಭಿಮಾನಿಗಳಿಗಾಗಿ ಪ್ರತಿ ಭಾನುವಾರವನ್ನು ಮೀಸಲಿಟ್ಟಿದ್ದಾರೆ. ತಮ್ಮನ್ನು ಭೇಟಿಯಾಗಬೇಕು, ಫೋಟೋ ತೆಗೆಸಿಕೊಳ್ಳಬೇಕು ಎಂದು ಆಸೆ ಪಡುವ ಅಭಿಮಾನಿಗಳನ್ನು ಪ್ರತಿ ಭಾನುವಾರ ತಮ್ಮ ಮನೆ ಬಳಿ ಭೇಟಿಯಾಗುತ್ತಾರೆ. ಅದರಂತೆ ನಿನ್ನೆ (ಸೆ.29) ಕೂಡಾ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಧ್ರುವ ಸರ್ಜಾ ಭೇಟಿಗೆ ಆಗಮಿಸಿದ್ದರು.

Advertisement

ಕೆ.ಆರ್. ರಸ್ತೆಯ ಮನೆಯ ಬಳಿ ಬಂದಿದ್ದ ನೂರಾರು ಅಭಿಮಾನಿಗಳನ್ನು ಭೇಟಿಯಾದರು. ತಮ್ಮ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕಿ.ಮೀ ಗಟ್ಟಲೆ ಸಾಲು ನಿಂತಿದ್ದರು. ಈ ಸಮಯದಲ್ಲಿ ಧ್ರುವ ಸರ್ಜಾ, ಸಮಾಧಾನ ದಿಂದ ಎಲ್ಲ ಅಭಿಮಾನಿಗಳಿಗೆ ಸೆಲ್ಫಿ ನೀಡಿದರು. ಈ ಮೂಲಕ ಅಭಿಮಾನಿಗಳ ಖುಷಿಗೆ ಧ್ರುವ ಕಾರಣರಾಗಿದ್ದಾರೆ.

ಅಂದಹಾಗೆ, ಧ್ರುವ ನಟನೆಯ “ಮಾರ್ಟಿನ್‌’ ಚಿತ್ರ ಅಕ್ಟೋಬರ್‌ 11ರಂದು ತೆರೆಕಾಣುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ಮೇಲೆ ಭರ್ಜರಿ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next