Advertisement

Dhoomam ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್:‌ ಈ ದಿನ ಸ್ಟ್ರೀಮ್‌ ಆಗಲಿದೆ ಪವನ್‌ ಸಿನಿಮಾ?

06:07 PM Jul 17, 2023 | Team Udayavani |

ಬೆಂಗಳೂರು: ʼಲೂಸಿಯಾʼ ಪವನ್‌ ಕುಮಾರ್‌ ಅವರ ʼಧೂಮಂʼ ಸಿನಿಮಾ ಥಿಯೇಟರ್‌ ನಲ್ಲಿ ಸದ್ದು ಮಾಡಿ ಹೋಗಿದೆ. ಸಿನಿಮಾ ರಿಲೀಸ್‌ ಆಗಿ ಬಹುತೇಕ ಒಂದು ತಿಂಗಳು ಆಗುತ್ತಾ ಬಂದಿದೆ. ಇದೀಗ ಸಿನಿಮಾ ಓಟಿಟಿಯಲ್ಲಿ ತೆರೆಗೆ ಬರಲು ಸಿದ್ದವಾಗಿದೆ.

Advertisement

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದಲ್ಲಿ ಮೂಡಿ ಬಂದ ʼಧೂಮಂʼ ಬಾಕ್ಸ್‌ ಆಫೀಸ್‌ ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಮಲಯಾಳಂ, ಕನ್ನಡ ಸೇರಿದಂತೆ ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ಸಿನಿಮಾ ತೆರೆಗೆ ಬಂದಿತ್ತು.

ತಂಬಾಕು ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಅವಿನಾಶ್ ಎನ್ನುವ ಸುತ್ತ ಸಾಗುವ ಕಥೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಒಂದೊಳ್ಳೆ ಸಂದೇಶವನ್ನೂ ನೀಡಿದ್ದರೂ ಸಿನಿಮಾಕ್ಕೆ ಅಂದುಕೊಂಡ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ.

ಫಾಹದ್‌ ಪಾಸಿಲ್‌ ನಟನೆ ಕನ್ನಡ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಸಿನಿಮಾ ಓಟಿಟಿ ರಿಲೀಸ್‌ ನತ್ತ ಸಾಗಿದೆ. ವರದಿಗಳ ಪ್ರಕಾರ ಜು.21 ರಂದು ಅಮೇಜಾನ್‌ ಪ್ರೈಮ್‌ ನಲ್ಲಿ ʼಧೂಮಂʼ ಸ್ಟ್ರೀಮ್‌ ಆಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಿನಿಮಾ ತಂಡ ಇದುವರಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಮಲಯಾಳಂ, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಜೂ.23 ರಂದು ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾದಲ್ಲಿ ಫಾಹದ್‌ ಪಾಸಿಲ್‌, ಅಪರ್ಣಾ ಬಾಲಮುರಳಿ ಮತ್ತು ರೋಷನ್ ಮ್ಯಾಥ್ಯೂ ಜೊತೆಗೆ ವಿನೀತ್, ಅನು ಮೋಹನ್ ಮತ್ತು ಅಚ್ಯುತ್ ಕುಮಾರ್ ನಟಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next