Advertisement

Haryana ಬೈಕ್‌ನಲ್ಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

05:06 PM Sep 26, 2023 | Team Udayavani |

ಕರ್ನಾಲ್: ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಇಂದು ಬೆಳಗ್ಗೆ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ರಸ್ತೆಗಳ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು.

Advertisement

ಕಾರ್‌ ಫ್ರೀ ಡೇ ಎಂದು ಸೆ. 2ರಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಘೋಷಿಸಿದ್ದರು. ಅದರ ಅನ್ವಯ ಪ್ರತಿ ಮಂಗಳವಾರದಂದು ಕಾರುಗಳನ್ನು ಬಳಸದಂತೆ ಕರ್ನಾಲ್‌ನಲ್ಲಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿ, ಸ್ವತಃ ಕಾರು ಬಿಟ್ಟು ಸಂಚರಿಸಲು ವಿನೂತನ ಪ್ರಯತ್ನ ನಡೆಸಿದ್ದಾರೆ.

ಲಾಲ್ ಖಟ್ಟರ್ ಅವರು ಪ್ರಯಾಣಿಸುತ್ತಿದ್ದುದನ್ನು ನೋಡಿದ ಕರ್ನಾಲ್ ನಿವಾಸಿಗಳು ಆಶ್ಚರ್ಯಚಕಿತರಾದರು. ಮುಖ್ಯಮಂತ್ರಿಯನ್ನು ಹಿಂಬಾಲಿಸಿ ಪೊಲೀಸರು ಹಾಗೂ ಅಧಿಕಾರಿಗಳು ಸಹ ಬೈಕ್‌ಗಳಲ್ಲಿ ಬಂದರು. ಮುಖ್ಯಮಂತ್ರಿ ಪ್ರಯಾಣಕ್ಕಾಗಿ ರಸ್ತೆಯಲ್ಲಿ ಇತರ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.


“ಕಾರ್-ಮುಕ್ತ ದಿನ” ಅಥವಾ “ವ್ಯಸನ ಮುಕ್ತ ಹರಿಯಾಣ”, ಸಾರ್ವಜನಿಕ ಬೆಂಬಲವಿಲ್ಲದೆ ಯಾವುದೇ ಗುರಿಯನ್ನು ತಲುಪಲು ಸಾಧ್ಯವಿಲ್ಲ. “ಕಾರ್-ಮುಕ್ತ ದಿನ” ದಲ್ಲಿ ನಾನು ವಿಮಾನ ನಿಲ್ದಾಣಕ್ಕೆ ಬೈಕ್‌ನಲ್ಲಿ ಪ್ರಯಾಣಿಸುವ ಮೂಲಕ, ನಾನು ಟ್ರಾಫಿಕ್ ನ್ನು ಕಡಿಮೆ ಮಾಡಲು ಸ್ವಲ್ಪ ಪ್ರಯತ್ನ ಮಾಡಿದೆ. ವಾರದಲ್ಲಿ ಕೇವಲ ಒಂದು ದಿನ ಕಾರುಗಳನ್ನು ತ್ಯಜಿಸಲು ಜನರನ್ನು ಪ್ರೋತ್ಸಾಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಮುಖ್ಯಮಂತ್ರಿ  ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಡ್ರಗ್ಸ್ ವಿರೋಧಿ ಅಭಿಯಾನದ ಭಾಗವಾಗಿ ಅವರ ಸರ್ಕಾರವು ಆಯೋಜಿಸಿದ್ದ ಸೈಕ್ಲೊಥಾನ್ ಡೇನಲ್ಲಿ ಖಟ್ಟರ್ ಅವರು ಇತ್ತೀಚೆಗೆ ಸೈಕಲ್‌ ತುಳಿದಿದ್ದರು. ಸೈಕ್ಲೋಥಾನ್ 25 ದಿನಗಳಲ್ಲಿ ಹರಿಯಾಣದ 22 ಜಿಲ್ಲೆಗಳಲ್ಲಿ ಸಂಚರಿಸಿತು.

Advertisement

Advertisement

Udayavani is now on Telegram. Click here to join our channel and stay updated with the latest news.

Next