Advertisement

ರಾಬಿನ್‌ ಉತ್ತಪ್ಪಗೆ ಧನ್ಯವಾದ ಸಲ್ಲಿಸಿದ ಧೋನಿ ಪತ್ನಿ

06:35 AM Nov 23, 2018 | Team Udayavani |

ಮುಂಬೈ: ಎಂ.ಎಸ್‌.ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಒಂದಾಗಿದ್ದರ ಹಿಂದೆ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಪಾತ್ರವಿದೆಯೆ? ಹೀಗೆ ಅನುಮಾನ ಮೂಡಿಸುವ ಹೇಳಿಕೆಯೊಂದನ್ನು ಸ್ವತಃ ಸಾಕ್ಷಿ ಧೋನಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. 

Advertisement

ಇತ್ತೀಚೆಗೆ ಸಾಕ್ಷಿ ತಮ್ಮ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಮುಂಬೈನಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರೆಲ್ಲ ಆಗಮಿಸಿದ್ದರು. ಈ ವೇಳೆ ಕರ್ನಾಟಕದ ರಾಬಿನ್‌ ಉತ್ತಪ್ಪ – ಶೀತಲ್‌ ಕೂಡ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸಾಕ್ಷಿ ಟ್ವೀಟರ್‌ನಲ್ಲಿ ಫೋಟೊ ಸಹಿತ ಪ್ರಕಟಣೆ ಹಾಕಿದ್ದಾರೆ. ನನ್ನನ್ನು ಧೋನಿಯನ್ನು ಒಂದು ಮಾಡಿದ ರಾಬಿನ್‌ ಉತ್ತಪ್ಪಗೆ ವಿಶೇಷ ಧನ್ಯವಾದಗಳು. ರಾಬಿನ್‌-ಶೀತಲ್‌ ಒಟ್ಟಿಗೆ ಆಗಮಿಸಿರುವುದರಿಂದ ತುಂಬಾ ಸಂತಸವಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next