Advertisement

“2019ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಧೋನಿ ಕನಸು’

06:00 AM Nov 18, 2018 | Team Udayavani |

ರಾಂಚಿ: ಭಾರತ ಕ್ರಿಕೆಟ್‌ನ ದಂತಕಥೆ ಎಂ.ಎಸ್‌.ಧೋನಿ 2014ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2017ರಲ್ಲಿ ಎಲ್ಲ ಮಾದರಿಯ ನಾಯಕತ್ವವನ್ನೂ ಬಿಟ್ಟಿದ್ದರು. ಇತ್ತೀಚೆಗೆ ಭಾರತ ಟಿ20 ತಂಡದಿಂದಲೂ ಅವರನ್ನು ಕೈಬಿಡಲಾಗಿದೆ. 

Advertisement

ಮುಂದಿನ ವರ್ಷ ಮೇ 30ರಿಂದ ಆರಂಭವಾಗುವ ಏಕದಿನ ವಿಶ್ವಕಪ್‌ನಲ್ಲೂ ಅವರು ಆಡುತ್ತಾರಾ ಎಂಬ ಅನುಮಾನ ಇದೀಗ
ಶುರುವಾಗಿದೆ. ಕಾರಣ ಅವರ ಕಳಪೆ ಬ್ಯಾಟಿಂಗ್‌ ಫಾರ್ಮ್. ಆದರೆ ಧೋನಿ ವ್ಯವಸ್ಥಾಪಕ ಅರುಣ್‌ ಪಾಂಡೆ ವಿಶ್ವಕಪ್‌ನಲ್ಲಿ
ಆಡುವುದು ಧೋನಿ ಕನಸು, ಅದರಿಂದ ಅವರು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅವರು ತಂಡದ ನಾಯಕತ್ವ
ಬಿಟ್ಟಾಗಿನಿಂದಲೂ ವಿಶ್ವಕಪ್‌ನಲ್ಲಿ ಆಡಬೇಕು ಎಂಬ ಆಸೆಯಿಟ್ಟುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಒಂದೆರಡು ವರ್ಷದಿಂದ ಧೋನಿ ಬ್ಯಾಟಿಂಗ್‌ ಫಾರ್ಮ್ ಸತತವಾಗಿ ಕುಸಿದಿದೆ. ಬಹಳ ನಿಧಾನಗತಿಯಲ್ಲಿ ರನ್‌ ಗಳಿಸುತ್ತಿದ್ದಾರೆ. ಗ್ರೇಟ್‌ ಫಿನಿಶರ್‌ ಎಂಬ ಹೆಗ್ಗಳಿಕೆಯೂ ಅವರ ಪಾಲಿಗೆ ಉಳಿದಿಲ್ಲ. ಇದು ಬಿಸಿಸಿಐ ಆಯ್ಕೆಮಂಡಳಿಗೆ ಚಿಂತೆಯುಂಟು ಮಾಡಿದೆ. ಆದ್ದರಿಂದ 2019ರ ಏಕದಿನ ವಿಶ್ವಕಪ್‌ನಲ್ಲಿ ಅವರು ಸ್ಥಾನ ಪಡೆಯುತ್ತಾರಾ ಎಂಬ ಪ್ರಶ್ನೆ ಶುರುವಾಗಿದೆ. ಧೋನಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಆಸ್ಟ್ರೇಲಿಯ ಪ್ರವಾಸದಲ್ಲಿ ಉತ್ತಮವಾಗಿ ಆಡಲೇಬೇಕಾದ ಒತ್ತಡದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next