Advertisement

ವಿಮಾನ ನಿಲ್ದಾಣದಲ್ಲೇ ಧೋನಿ, ಸಾಕ್ಷಿಗೆ ನಿದ್ರೆ!

01:48 AM Apr 11, 2019 | sudhir |

ಚೆನ್ನೈ: ಮಹೇಂದ್ರ ಸಿಂಗ್‌ ಧೋನಿ ಸರಳ ವ್ಯಕ್ತಿ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಇದೀಗ ಅವರ ಪತ್ನಿ ಸಾಕ್ಷಿ ಕೂಡ ಅಷ್ಟೇ ಸರಳ‌ ಎನ್ನುವುದು ಬಹಿರಂಗಗೊಂಡಿದೆ. ಹೌದು ತವರಿನಲ್ಲಿ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಗೆದ್ದ ಅನಂತರ ಚೆನ್ನೈ ಆಟಗಾರರು ರಾಜಸ್ಥಾನ ವಿರುದದ್ಧ ಪಂದ್ಯಕ್ಕೆ ಜೈಪುರಕ್ಕೆ ತೆರಳಬೇಕಾಗಿತ್ತು. ಈ ನಡುವೆ ಸರಿಯಾದ ವಿಶ್ರಾಂತಿ ದೊರಕದೇ ಇದ್ದ ಸಮಯದಲ್ಲಿ ವಿಮಾನಕ್ಕೆ ಕಾಯುತ್ತಿದ್ದ ಧೋನಿ, ಸಾಕ್ಷಿ ವಿಮಾನ ನಿಲ್ದಾಣದಲ್ಲೇ ನಿದ್ದೆಗೆ ಜಾರಿದ್ದಾರೆ.

Advertisement

ವಿಮಾನ ನಿಲ್ದಾಣದಲ್ಲಿ ಬ್ಯಾಗ್‌ ಅನ್ನೇ ದಿಂಬು ಮಾಡಿಕೊಂಡು ಧೋನಿ ನೆಲದ ಮೇಲೆಯೇ ಮಲಗಿದ್ದಾರೆ. ಬ್ಯಾಗ್‌ನ ಮತ್ತೂಂದು ತುದಿಯಲ್ಲಿ ಅವರ ಪತ್ನಿ ಸಾಕ್ಷಿ ಕೂಡ ತಲೆಯಿಟ್ಟು ಮಲಗಿ ಧೋನಿಗೆ ಸಾಥ್‌ ನೀಡಿದ್ದಾರೆ. ಈ ಫೋಟೋವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ಅಧಿಕೃತ ಟ್ವೀಟರ್‌ನಲ್ಲಿ ಪ್ರಕಟಿಸಿದೆ.

“ಐಪಿಎಲ್‌ ಆರಂಭದ ಬಳಿಕ ಬೆಳಗ್ಗಿನ ಸಮಯದಲ್ಲಿ ಕ್ರಿಕೆಟಿಗರು ಹೀಗೆ ಇರುತ್ತಾರೆ’ ಎಂದು ಪ್ರಕಟಿಸಿ ಟ್ವೀಟ್‌ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next