Advertisement
ಪೂರ್ಣ ಪ್ರಮಾಣದ ಸರಣಿವಿಂಡೀಸ್ ಪ್ರವಾಸದ ವೇಳೆ ಭಾರತೀಯ ತಂಡವು ಎರಡು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನಾಡಲಿದೆ. ಆ. 3ರಂದು ಮೂರು ಪಂದ್ಯಗಳ ಟ್ವೆಂಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ. ಮೊದಲೆರಡು ಪಂದ್ಯಗಳು ಫ್ಲೋರಿಡಾದಲ್ಲಿ ನಡೆಯಲಿದೆ. ಟಿ20 ಸರಣಿಯ ಬಳಿಕ ಏಕದಿನ ಮತ್ತು ಟೆಸ್ಟ್ ಸರಣಿ ನಡೆಯಲಿದೆ. ಕೊಹ್ಲಿ ಅವರಿಗೆ ದೀರ್ಘ ಅವಧಿಗೆ ವಿಶ್ರಾಂತಿ ನೀಡಿದರೆ ಟೆಸ್ಟ್ ಸರಣಿಗೆ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತ ಭಾರತೀಯ ತಂಡವು ಜೂ. 14ರಂದು ಭಾರತಕ್ಕೆ ಆಗಮಿಸಲಿದೆ. ಆಬಳಿಕ ವಿಂಡೀಸ್ ಸರಣಿಗೆ ಭಾರತೀಯ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ವಿಶ್ವಕಪ್ ಫೈನಲ್ ಮುಗಿದ ಬಳಿಕ ಎಲ್ಲ ಆಟಗಾರರು ಲಂಡನ್‌ನಿಂದ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ. ಕೊಹ್ಲಿ, ಬುಮ್ರಾಗೆ ವಿಶ್ರಾಂತಿ
ಕಳೆದ ಎರಡು ವರ್ಷಗಳಿಂದ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅವಿತರವಾಗಿ ಆಡಿದ ಕೊಹ್ಲಿ ಮತ್ತು ಜಸ್‌ಪ್ರೀತ್ ಬುಮ್ರಾ ಅವರಿಗೆ ಟಿ20 ಮತ್ತು ಏಕದಿನ ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಮೊದಲ ಎರಡು ಟೆಸ್ಟ್‌ಗೂ ಅವರಿಗೆ ವಿಶ್ರಾಂತಿ ನೀಡಲು ಚಿಂತನೆ ನಡೆಸಲಾಗುತ್ತಿದೆ. ಅವರಿಬ್ಬರು ತಂಡದ ಪ್ರಮುಖ ಆಟಗಾರರಾದ ಕಾರಣ ಮುಂದಿನ ತವರಿನ ಸರಣಿಗೆ ಸಿದ್ಧರಾಗಲು ವಿಶ್ರಾಂತಿಯ ಅಗತ್ಯ ಅವರಿಗಿದೆ ಎಂದು ತಂಡ ವ್ಯವಸ್ಥಾಪಕರು ಹೇಳಿದ್ದಾರೆ. ಆದರೆ ಧೋನಿ ಅವರ ಲಭ್ಯತೆ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಅವರು ವಿಂಡೀಸ್ ಸರಣಿಗೆ ಲಭ್ಯರಿರುತ್ತಾರೆಯೇ ಅಥವಾ ವಿಶ್ರಾಂತಿ ಪಡೆಯುತ್ತಾರೆಯೇ ಎಂಬುದು ಖಚಿತವಾಗಿಲ್ಲ.