Advertisement

ಆಸ್ಟ್ರೇಲಿಯಾ ದಶಕದ ಏಕದಿನ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕ!

10:02 AM Dec 25, 2019 | Team Udayavani |

ಮೆಲ್ಬೋರ್ನ್: ಕೂಲ್‌ ಕ್ಯಾಪ್ಟನ್‌ ಎಂದೇ ಖ್ಯಾತರಾದ ಎಂ.ಎಸ್‌.ಧೋನಿ ಅವರನ್ನು ದಶಕದ ಕ್ರಿಕೆಟ್‌ ಆಸ್ಟ್ರೇಲಿಯಾ ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಮಂಗಳವಾರ ಕ್ರಿಕೆಟ್‌ ಆಸ್ಟ್ರೇಲಿಯಾ ಘೋಷಿಸಿದ ಈ ತಂಡದಲ್ಲಿ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಇತರ ಇಬ್ಬರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.

Advertisement

ಎಂ.ಎಸ್‌ ಧೋನಿ ತಮ್ಮ ಬ್ಯಾಟಿಂಗ್‌ ಮೂಲಕ ಬೆಸ್ಟ್‌ ಮ್ಯಾಚ್‌ ಫಿನಿಶರ್‌ ಆಗಿ ಒಂದು ದಶಕದ ಕಾಲ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಭಾರತದ ಏಕದಿನದ ತಂಡಕ್ಕೆ ಸುವರ್ಣ ಅವಧಿಯಲ್ಲಿ ಪ್ರಬಲ ಶಕ್ತಿಯಾಗಿದ್ದರು. 2011ರಲ್ಲಿ ತವರು ನೆಲದಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದರು. ಉಳಿದಂತೆ ಧೋನಿ ನಾಯಕ್ವದಲ್ಲಿ ಭಾರತ ಮೂರು ಮಾದರಿಯಲ್ಲೂ ವಿಶ್ವ ಶ್ರೇಷ್ಠ ಎಂದು ಗುರುತಿಸಿಕೊಂಡಿತ್ತು ಎಂದು ಧೋನಿ ಬಗ್ಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಮೆಚ್ಚುಗೆಯ ಮಾತುಗಳನ್ನಾಡಿದೆ.

ಧೋನಿ ಏಕದಿನ ಮಾದರಿಯಲ್ಲಿ ಶೇ. 50 ರಷ್ಟು ಸರಾಸರಿ ಹೊಂದಿದ್ದು  49 ಇನಿಂಗ್ಸ್‌ನಲ್ಲಿ ಅಜೇಯರಾಗಿ ಉಳಿದಿದ್ದಾರೆ. ಒಂದು ದಶಕದಲ್ಲಿ 28 ಸ್ಥಳಗಳಲ್ಲಿ ರನ್‌ ಚೇಸ್‌ ಮಾಡುವಾಗ ಧೋನಿ ಅಜೇಯರಾಗಿ ಉಳಿದಿದ್ದಾರೆ. ಇದರಲ್ಲಿ ಕೇವಲ ಮೂರು ಬಾರಿ ಮಾತ್ರ ಭಾರತ ಸೋಲು ಅನುಭವಿಸಿತ್ತು. ವಿಶೇಷವಾಗಿ ಇವರು ವಿಕೆಟ್‌ ಹಿಂದೆ ಬೌಲರ್‌ಗಳಿಗೆ ಬಲವಾಗಿದ್ದರು. 38ರ ಪ್ರಾಯದ ಧೋನಿ 350 ಏಕದಿನ, 90 ಟೆಸ್ಟ್‌ ಹಾಗೂ 98 ಟಿ20ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದರ ನಡುವೆ ವಿಕೆಟ್‌ ಹಿಂದೆ ಒಟ್ಟು 829 ವಿಕೆಟ್‌ ಬಲಿ ಪಡೆದಿದ್ದಾರೆ.

ಎಂ.ಎಸ್‌ ಧೋನಿ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ ಹಾಗೂ ಏಕದಿನ ಐಸಿಸಿ ಏಕದಿನ ವಿಶ್ವಕಪ್‌ ಮತ್ತು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿತು. ಈ ಮೂರು ಮಾದರಿಯಲ್ಲಿ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ನಾಯಕ ಎಂಬ ಸಾಧನೆಗೆ ಧೋನಿ ಭಾಜನರಾಗಿದ್ದಾರೆ. 2019ರ ವಿಶ್ವಕಪ್‌ ಸೆಮಿಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ ಸೋಲು ಅನುಭವಿಸಿದ ಬಳಿಕ ಧೋನಿ, ಟೀಮ್‌ ಇಂಡಿಯಾದಿಂದ ದೂರ ಉಳಿದಿದ್ದಾರೆ. ಮಾಜಿ ನಾಯಕನ ಅಂತಾರಾಷ್ಟ್ರೀಯ ಕ್ರಿಕೆಟ್‌ ಭವಿಷ್ಯ ಇನ್ನು ಪ್ರಶ್ನೆಯಾಗಿ ಉಳಿದಿದೆ. ಇನ್ನು ಆಸ್ಟ್ರೇಲಿಯಾ ದಶಕದ ಏಕದಿನ ತಂಡದಲ್ಲಿ ಏಕೈಕ ಆಸೀಸ್‌ ಆಟಗಾರ ಮಾತ್ರ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ಏಕದಿನ ತಂಡ: ಎಂ.ಎಸ್‌. ಧೋನಿ (ನಾಯಕ), ರೋಹಿತ್‌ ಶರ್ಮ, ಹಾಶೀಂ ಆಮ್ಲ, ವಿರಾಟ್‌ ಕೊಹ್ಲಿ, ಎಬಿಡಿ ವಿಲಿಯರ್ಸ್‌, ಶಕಿಬ್‌ ಅಲ್‌ ಹಸನ್‌, ಜಾಸ್‌ ಬಟ್ಲರ್‌, ರಶೀದ್‌ ಖಾನ್‌, ಮಿಚೆಲ್‌ ಸ್ಟಾರ್ಕ್‌, ಟ್ರೆಂಟ್‌ ಬೌಲ್ಟ್, ಲಸಿತ ಮಾಲಿಂಗ.

Advertisement

ಟೆಸ್ಟ್‌ ತಂಡ: ವಿರಾಟ್‌ ಕೊಹ್ಲಿ (ನಾಯಕ), ಆಲೆಸ್ಟರ್‌ ಕುಕ್‌, ಡೇವಿಡ್‌ ವಾರ್ನರ್‌, ಕೇನ್‌ ವಿಲಿಯಮ್ಸನ್‌, ಸ್ಟಿವನ್‌ ಸ್ಮಿತ್‌, ಎಬಿಡಿ ವಿಲಿಯರ್ಸ್‌, ಬೆನ್‌ ಸ್ಟೋಕ್ಸ್‌, ಡೇಲ್‌ ಸ್ಟೇನ್‌, ನಥನ್‌ ಲಿಯಾನ್‌, ಜೇಮ್ಸ್‌ ಆ್ಯಂಡರ್ಸನ್‌. ಸ್ಟುವರ್ಟ್‌ ಬ್ರಾಡ್‌.

Advertisement

Udayavani is now on Telegram. Click here to join our channel and stay updated with the latest news.

Next