Advertisement
ಧೋನಿ ಆಗಿನ್ನೂ ನಾಯಕರಾಗಿದ್ದಷ್ಟೇ. ಕೊಹ್ಲಿಯಂತೂ ಭಾರತ ತಂಡವನ್ನೇ ಪ್ರವೇಶಿಸಿರಲಿಲ್ಲ. ಅಂತಹ ಹೊತ್ತಿನಲ್ಲಿ ಭಾರತ ವಿಶ್ವಕಪ್ಪನ್ನೇ ಗೆದ್ದುಬಿಟ್ಟಿತು. ಇದೀಗ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿ ಬಹಳ ಕಾಲವೇ ಸಂದಿದೆ. ಟಿ20 ವಿಶ್ವಕಪ್ ನಿಗದಿಯಂತೆ ಕಳೆದ ವರ್ಷವೇ ನಡೆದಿದ್ದರೆ ಧೋನಿ ಅದನ್ನು ಆಡಿಯೇ ನಿವೃತ್ತರಾಗುವ ಸಾಧ್ಯತೆಯೊಂದಿತ್ತು. ಕೊರೊನಾ ಕಾರಣ ಟಿ20 ವಿಶ್ವಕಪ್ ಈ ವರ್ಷಕ್ಕೆ ಮುಂದೂ ಡಿಕೆಯಾಗಿದ್ದರಿಂದ ಧೋನಿ ದಿಢೀರ್ ವಿದಾಯ ಘೋಷಿಸಿದರು. ಅಷ್ಟಾದರೂ ಧೋನಿಗೂ ಭಾರತ ತಂಡಕ್ಕೂ ಇರುವ ನಂಟು ಮುಗಿದಿಲ್ಲ.
Related Articles
Advertisement
ನಾಯಕನಾಗಿ ಕೊಹ್ಲಿಗೊಂದು ದೊಡ್ಡ ಕಳಂಕವಿದೆ. ಅವರು ದ್ವಿಪಕ್ಷೀಯ ಸರಣಿಗಳನ್ನು ಅದ್ಭುತ ದಾಖಲೆಯಲ್ಲೇ ಗೆದ್ದಿದ್ದಾರೆ. ವಿಶ್ವಕೂಟಗಳಲ್ಲಿ ಮಾತ್ರ ಸೆಮಿಫೈನಲ್, ಫೈನಲ್‌ಗಳಲ್ಲಿ ಎಡವಿದ್ದಾರೆ. ಅದೇ ಧೋನಿ ಟಿ20, ಏಕದಿನಗಳಲ್ಲಿ ವಿಶ್ವಕಪ್ ಗೆದ್ದು, ಚಾಂಪಿಯನ್ಸ್ ಟ್ರೋಫಿಯ ಮೇಲೂ ಹಕ್ಕು ಚಲಾಯಿಸಿದ್ದಾರೆ. ಧೋನಿ ತಮ್ಮ ಚಾಕಚಕ್ಯತೆಯಿಂದ ಕೊಹ್ಲಿ ಪಡೆಯಿಂದಲೂ ಅಂತಹದ್ದೊಂದು ಸಾಧನೆ ಮಾಡಿಸ ಬೇಕೆನ್ನುವುದು ಬಿಸಿಸಿಐ ಬಯಕೆ. ಕೊಹ್ಲಿಗೂ ದೊಡ್ಡದೊಡ್ಡ ಕಪ್‌ಗ್ಳಲ್ಲಿ ಸತತವಾಗಿ ಕೈಚೆಲ್ಲಿದ ನೋವಿದೆ. ಅದನ್ನು ಹಲವರು ಟೀಕೆಗೆ ವಿಷಯ ವನ್ನಾಗಿ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆಯಿಂದ ಧೋನಿಗೆ ತನಗೆ ಟಿ20 ವಿಶ್ವಕಪ್ ಆಡಲಾಗದಿದ್ದರೂ, ತೆರೆಮರೆಯಲ್ಲಾದರೂ ನಿಲ್ಲುವ ಅವಕಾಶ ಸಿಕ್ಕ ಸಂತೋಷವಿದೆ. ಈ ಇಬ್ಬರೂ ಒಂದಾಗಿ, ಸಮನ್ವಯತೆ ತೋರಿದರೆ ಭಾರತಕ್ಕೆ ಕಪ್ ಗೆಲ್ಲುವುದು ಕಷ್ಟವೇನಲ್ಲ, ಒಂದೇ ಮಾತಿನಲ್ಲಿ ಹೇಳುವುದಾದರೆ ಹೂವೆತ್ತಿದಷ್ಟೇ ಸರಳ.