Advertisement
ಧೋನಿ ಟ್ವೆಂಟಿ20ರಲ್ಲಿ 6,000 ರನ್ ಪೂರ್ತಿಗೊಳಿಸಿದ ಭಾರತದ ಐದನೇ ಆಟಗಾರರಾಗಿದ್ದಾರೆ. ಈ ಮೊದಲು ಸುರೇಶ್ ರೈನಾ (7,708), ವಿರಾಟ್ ಕೊಹ್ಲಿ (7,621), ರೋಹಿತ್ ಶರ್ಮ (7,303) ಮತ್ತು ಗೌತಮ್ ಗಂಭೀರ್ (6,402) ಈ ಸಾಧನೆ ಮಾಡಿದ್ದರು.ಡೆಲ್ಲಿ ವಿರುದ್ಧದ ಪಂದ್ಯ ಮೊದಲು ಧೋನಿಗೆ 6,000 ಕ್ಲಬ್ಗಸೇರಲು 10 ರನ್ ಬೇಕಿತ್ತು. ಟ್ರೆಂಟ್ ಬೌಲ್ಟ್ ದಾಳಿಗೆ ಔಟಾಗುವ ಮೊದಲು ಅವರು 17 ರನ್ ಗಳಿಸಿದ್ದರು. 36ರ ಹರೆಯದ ಧೋನಿ 290 ಟ್ವೆಂಟಿ20 ಪಂದ್ಯಗಳನ್ನಾಡಿದ್ದು 6,007 ರನ್ ಗಳಿಸಿದ್ದಾರೆ.
ವೆಸ್ಟ್‌ಇಂಡೀಸ್‌ನ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಟ್ವೆಂಟಿ20ಯಲ್ಲಿ ಗರಿಷ್ಠ ರನ್ ಗಳಿಸಿದವರಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದಾರೆ. ಟ್ವೆಂಟಿ20ಯಲ್ಲಿ ಜಮೈಕಾದ ಗೇಲ್ 21 ಶತಕ ಮತ್ತು 50 ಅರ್ಧಶತಕ ಸಹಿತ 11,436 ರನ್ ಗಳಿಸಿದ್ದಾರೆ. ನ್ಯೂಜಿಲ್ಯಾಂಡಿನ ಬ್ರೆಂಡನ್ ಮೆಕಲಮ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಅವರು 335 ಪಂದ್ಯಗಳನ್ನಾಡಿದ್ದು 30.70 ಸರಾಸರಿಯೊಂದಿಗೆ 9,119 ರನ್ ಪೇರಿಸಿದ್ದಾರೆ.