Advertisement

SBI: ಧೋನಿ ಎಸ್‌ಬಿಐ ರಾಯಭಾರಿ

09:12 PM Oct 29, 2023 | Team Udayavani |

ಮುಂಬೈ: ಖ್ಯಾತ ಕ್ರಿಕೆಟರ್‌ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ(ಎಸ್‌ಬಿಐ) ತನ್ನ ರಾಯಭಾರಿಯಾಗಿ ನೇಮಿಸಿದೆ.

Advertisement

“ಎಸ್‌ಬಿಐನ ರಾಯಭಾರಿಯಾಗಿ ಧೋನಿ ಅವರು ವಿವಿಧ ಮಾರ್ಕೆಂಟಿಂಗ್‌ ಹಾಗೂ ಪ್ರಚಾರ ಅಭಿಯಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಸಮಚಿತ್ತವನ್ನು ಸಾಧಿಸುವ ಅವರ ಸಾಮರ್ಥ್ಯ, ಸ್ಪಷ್ಟವಾದ ಆಲೋಚನೆ ಮತ್ತು ಒತ್ತಡದ ನಡುವೆಯೂ ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಅವರು ಹೆಸರುವಾಸಿಯಗಿದ್ದು, ರಾಯಭಾರಿಯಾಗಿ ಅವರ ಆಯ್ಕೆಯು ಅತ್ಯುತ್ತಮವಾಗಿದೆ. ದೇಶಾದ್ಯಂತ ಇರುವ ನಮ್ಮ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಇದು ಸಹಕಾರಿಯಾಗಿದೆ” ಎಂದು ಎಸ್‌ಬಿಐ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next