Advertisement

ನಿಮ್ಮನ್ನು ಗೆಲ್ಲಿಸಲು ಒಬ್ಬ ಧೋನಿ ಸಾಕು!

02:49 PM May 22, 2017 | Harsha Rao |

ಮಹೇಂದ್ರ ಸಿಂಗ್‌ ಧೋನಿ ತಂತ್ರಗಾರಿಕೆ ಕ್ರಿಕೆಟ್‌ನಲ್ಲಿ ಸದಾ ಕ್ಲಿಕ್‌ ಆಗುತ್ತಲೇ ಇರುತ್ತೆ. ಹೂಡಿಕೆಯ ಕ್ಷೇತ್ರದ ವಿಚಾರದಲ್ಲೂ “ಧೋನಿ ಪಾಲಿಸಿ’ ಇದೆ! ನೀವೂ ಧೋನಿಯ ಮಾದರಿಯಲ್ಲಿಯೇ ಆಡಿದರೆ, ಯಶಸ್ಸು ನಿಶ್ಚಿತ ಎನ್ನುವುದನ್ನು ಈ 4 ಅಂಶಗಳು ಹೇಳುತ್ತವೆ…  

Advertisement

1. ಕ್ರೈಸಿಸ್‌ ಇದ್ದಾಗ ತಾಳ್ಮೆ ಮುಖ್ಯ
ಧೋನಿ ಎಷ್ಟು ಸಲ ತಂಡವನ್ನು ಮೇಲೆತ್ತಿ ನಿಲ್ಲಿಸಿಲ್ಲ? ಸ್ಕೋರ್‌ಬೋರ್ಡ್‌ನಲ್ಲಿ ತಂಡದ ಮೊತ್ತ 20/3, 30/4 ಇದ್ದಾಗಲೂ ಧೋನಿ ಹೆಗಲುಕೊಟ್ಟು, ತಾಳ್ಮೆಯಿಂದ ಆಡಿ ಅನೇಕ ಸಲ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದ್ದರು. ಸ್ಟಾಕ್‌ ಮಾರ್ಕೆಟಿನಲ್ಲಿ ದುಬಾರಿ ಬೆಲೆಯಲ್ಲಿ ಷೇರು ಖರೀದಿಸಿದಾಗಲೂ ಅಷ್ಟೇ. ಅವು ಬೆಲೆಯಲ್ಲಿ ಕುಸಿತ ಕಾಣಬಹುದು. ತಾಳ್ಮೆಗೆಟ್ಟು, ಕಡಿಮೆ ಬೆಲೆಯಲ್ಲಿ ಮಾರಿ “ವಿಕೆಟ್‌’ ಒಪ್ಪಿಸಬೇಡಿ. ಷೇರು ಬೆಲೆಗಳು ಏರುವುದು, ಬೀಳುವುದು ಸಾಮಾನ್ಯ. ನಿಮ್ಮ ಷೇರಿಗೆ ಬೆಲೆ ಬಂದೇ ಬರುತ್ತೆ.

2. ಸಣ್ಣ ಮೆಟ್ಟಿಲು, ದೊಡ್ಡ ಗುರಿ
ವಿಕೆಟ್‌ ಕೀಪಿಂಗ್‌ ಮಾಡೋವಾಗ ಧೋನಿ, ವಿಪರೀತ ಡೈ ಹೊಡೆಯುತ್ತಾರೆ. ಸಣ್ಣಪುಟ್ಟ ರನ್ನುಗಳ ಸೋರಿಕೆ ನಿಲ್ಲಿಸುತ್ತಾರೆ. ಬ್ಯಾಟಿಂಗ್‌ ಬಂದಾಗಲೂ ಒಂದೆರಡು ರನ್ನುಗಳನ್ನು ಕ್ವಿಕ್‌ ಆಗಿ ಸಂಪಾದಿಸುವ ವಿಶಿಷ್ಟ ಚಕ್ಯತೆ ಅವರಲ್ಲಿದೆ. ಅಂತೆಯೇ, ಇಕ್ವಿಟಿ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡುವವರಿಗೆ ಸಿಪ್‌ (ಎಸ್‌ಐಪಿ) ಅತ್ಯುತ್ತಮ ಆಯ್ಕೆ. ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲ್ರಾನ್‌ನಲ್ಲಿ ಒಂದು ಸಣ್ಣ ಮೊತ್ತವನ್ನು ಹೂಡಿ, ಪ್ರತಿ ತಿಂಗಳು ಅದಕ್ಕೆ ನಿಗದಿತ ಮೊತ್ತ ಕಟ್ಟಿ, ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಕೈಗೆತ್ತಿಕೊಳ್ಳಬಹುದು.

3. ಅರಿಯದೆ ಹೆಜ್ಜೆ ಇಡಬೇಡಿ
ಫ‌ುಟ್ಬಾಲ್‌ ಗೋಲ್‌ ಕೀಪರ್‌ ಆಗಿದ್ದ ಧೋನಿಗೆ ಕೋಚ್‌ ದಿಢೀರನೆ “ನಾಳೆಯಿಂದ ವಿಕೆಟ್‌ ಕೀಪಿಂಗ್‌ ಮಾಡು’ ಎಂದಾಗ, ಪುಟಾಣಿ ಧೋನಿ “ಅದರ ಸಾಧ್ಯತೆ ಬಗ್ಗೆ ಯೋಚಿಸಿ ಹೇಳ್ತೀನಿ’ ಎಂದಿದ್ದ. ವಿಕೆಟ್‌ ಕೀಪಿಂಗ್‌ ಕೂಡ ಗೋಲ್‌ ಕೀಪರ್‌ ರೀತಿಯೇ ಕೆಲಸ ಎಂದು ಗೊತ್ತಾದ ಮೇಲಷ್ಟೇ ಒಪ್ಪಿಕೊಂಡ. ಲೈಫ್ ಇನ್ಷೊರೆನ್ಸ್‌, ಹೆಲ್ತ್‌ ಇನ್ಷೊರೆನ್ಸ್‌, ವಾಹನ ವಿಮೆ- ಈ ಬಗ್ಗೆ ಅರಿವಿಲ್ಲದೆ ಹೂಡಿಕೆ ಮಾಡದಿರಿ. ಮ್ಯೂಚುವಲ್‌ ಫ‌ಂಡ್‌ಗಳ ಹೂಡಿಕೆ ವಿಚಾರದಲ್ಲೂ ಅಷ್ಟೇ.

4. ಕೋಚ್‌ ಮಾತನ್ನು ಕೇಳಿ
ಮೊದಲ ಕೋಚ್‌ ಕೇಶವ್‌ ಬ್ಯಾನರ್ಜಿಯ ನೆರವಿಲ್ಲದೆ ಧೋನಿ ಇಷ್ಟೆತ್ತರ ಬೆಳೆಯುತ್ತಲೇ ಇರಲಿಲ್ಲ. ಹಾಗೆಯೇ ಗ್ಯಾರಿ ಕಸ್ಟರ್ನ್ ಕೃಪೆಯೂ ಧೋನಿ ಸಾಧನೆಯ ಹಿಂದಿನ ದೊಡ್ಡ ಹಣತೆ. ಕೋಚ್‌ ಹೇಳಿದ ಪ್ರತಿ ಸಲಹೆಗಳನ್ನೂ ಧೋನಿ ಕೇಳುತ್ತಾರೆ. ಬೌನ್ಸರ್‌ಗೆ ಹೀಗೆಯೇ ಆಡು ಎಂದರೆ, ಅದನ್ನೇ ಮಾಡುತ್ತಾರೆ. ಹೂಡಿಕೆ ವೇಳೆ ಫೈನಾನ್ಷಿಯಲ್‌ ಅಡ್ವೆ„ಸರ್‌ ಸಲಹೆ ಪಾಲಿಸಿದರೆ, ನೀವೂ ನಿಮ್ಮ ಗುರಿಯನ್ನು ತಲುಪುವುದು ದೊಡ್ಡ ವಿಚಾರ ಅಲ್ಲವೇ ಅಲ್ಲ. ಹೂಡಿಕೆ ವೇಳೆ ಮಾರ್ಗದರ್ಶಕರೂ ಮುಖ್ಯ. 

Advertisement
Advertisement

Udayavani is now on Telegram. Click here to join our channel and stay updated with the latest news.

Next