Advertisement

ಧೋಕ್ಲಾ ಗುಜರಾತಿ ಪಾಕಪದ್ಧತಿ

09:56 PM Jan 17, 2020 | mahesh |

ಧೋಕ್ಲಾ ಗುಜರಾತಿ ಪಾಕಪದ್ಧತಿಯ ವಿಶೇಷತೆಗಳಲ್ಲಿ ಇದು ಒಂದಾಗಿದೆ. ಗುಜರಾತಿ ಪಾಕಪದ್ಧತಿಯಲ್ಲಿ ಸಾಕಷ್ಟು ರುಚಿಯಾದ ಮತ್ತು ಉತ್ತಮ ವಾದ ತಿಂಡಿಗಲ್ಲಿ ಧೋಕ್ಲಾ ಅಗ್ರಸ್ಥಾನ ದಲ್ಲಿದೆ. ಮೃದು ಮತ್ತು ರುಚಿಯಾ ಗಿರುವ ಧೋಕ್ಲಾವನ್ನು ತಯಾರಿ ಸಲು ಸುಲಭವಾದ ಮಾರ್ಗ ಇಲ್ಲಿದೆ.

Advertisement

ಬೇಕಾಗುವ ಸಾಮಗ್ರಿ
ಕಡಲೆ ಹಿಟ್ಟು: 1 ಕಪ್‌
ಸಕ್ಕರೆ- 1 ಟೀ ಸ್ಪೂನ್‌
ಉಪ್ಪು-
ಟೀ ಸ್ಪೂನ್‌
ಎಣ್ಣೆ: 1 ಚಮಚ
ಸಾಸಿವೆ: 1 ಚಮಚ
ಅಡಿಗೆ ಸೋಡಾ
ಕರಿಬೇವಿನ ಎಲೆಗಳು
ನಿಂಬೆ ರಸ

ಮಾಡುವ ವಿಧಾನ:
ಈ ರುಚಿಕರವಾದ ದೋಕ್ಲಾ ಪಾಕವಿಧಾನವನ್ನು ತಯಾರಿಸಲು, ಗಾಜಿನ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಕಡಲೆ ಹಿಟ್ಟು, ಉಪ್ಪು, ನೀರು, ನಿಂಬೆ ರಸ ಮತ್ತು ಅಡಿಗೆ ಸೋಡಾ ಸೇರಿಸಿ. ಈ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. 1-2 ಗಂಟೆಗಳ ಕಾಲ ಹುದುಗಲು ಬಿಡಿ. ಅನಂತರ ಒಂದು ಪಾತ್ರೆಯಲ್ಲಿ ನೀರನ್ನು ಸ್ಟೀರ್ಮ್ನಲ್ಲಿ ಇಡಿ. ನಂತರ ಧೋಕ್ಲಾ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಕಡಿಮೆ ಉರಿಯಲ್ಲಿ 15-20 ಹವೆಯಲ್ಲಿ ಬೇಯಿಸಿಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ದೋಕ್ಲಾ ಸರಿಒಯಾಗಿ ಬೆಂದಿದೆಯೇ ಎಂದು ಚಾಕುವಿನಿಂದ ಪರಿಶೀಲಿಸಿ. ಅದು ಸರಿಯಾಗಿ ಬೆಂದಿದ್ದರೆ ಅದನ್ನ ಒಂದು ತಟ್ಟೆಗೆ ಹಾಕಿ ತಣಿಯಲು ಬಿಡಿ. ಬಳಿಕ ಅದನ್ನು ° ತುಂಡುಗಳಾಗಿ ಕತ್ತರಿಕೊಳ್ಳಿ. ಈಗ ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಅದಕ್ಕೆ ಸಾಸಿವೆ, ಕರಿಬೇವು, ಹಸಿ ಮೆಣಸಿನಕಾಯಿ, ಸೇರಿಸಿ 2/1 ಕಪ್‌ ನೀರು ಸೇರಿಸಿ ಕುದಿಯಲು ಬಿಡಿ. ನೀರು ಕುದಿದ ನಂತರ ಇದಕ್ಕೆ 2/1 ನಿಂಬೆ ರಸ ಮತ್ತು ಸಕ್ಕರೆ, ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಈ ಮಿಶ್ರಣವನ್ನು ರೆಡಿಯಾಗಿ ಇಟ್ಟ ದೋಕ್ಲಾದ ಮೇಲೆ ಹರಡಿಕೊಳ್ಳಿ. ಈಗ ಇದನ್ನು ತಿನ್ನಲು ಕೊಡಿ.

ಟೊಮೇಟೊ ಸೇವ್‌ ಸಬ್‌ಜಿ

ಬೇಕಾಗುವ ಸಾಮಗ್ರಿಗಳು
ಸೇವ್‌: 100 ಗ್ರಾಂ.
ಹಸಿ ಮೆಣಸಿನಕಾಯಿ: 3
ಜೀರಿಗೆ: 2 ಟೀಸ್ಪೂನ್‌
ಟೊಮೇಟೊ : 4- 5
ಮೆಣಸಿನ ಪುಡಿ: 2 ಟೀಸ್ಪೂನ್‌
ಉಪ್ಪು : ರುಚಿಗೆ ತಕ್ಕಷ್ಟು.
ಲವಂಗ ,ಬೆಳ್ಳುಳ್ಳಿ: 5
ಎಣ್ಣೆ : 2 ಚಮಚ
ಅರಿಶಿನ
ಕೊತ್ತಂಬರಿ ಪುಡಿ: 2 ಟೀ ಸ್ಪೂನ್‌
ಬೆಲ್ಲ
1 ಕಪ್‌ ನೀರು

Advertisement

ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ ಸೇರಿಸಿ, ಅನಂತರ ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ ಮತ್ತು ಒಂದು ನಿಮಿಷ ಬೇಯಿಸಿಕೊಳ್ಳಿ. ಅನಂತರ ಅದಕ್ಕೆ ಟೊಮೇಟೊ ಮತ್ತು ಕೆಂಪು ಮೆಣಸಿನ ಪುಡಿಯನ್ನು ನೀರಿನೊಂದಿಗೆ ಸೇರಿಸಿ ನಿಮ್ಮ ರುಚಿಗೆ ಅನುಗುಣವಾಗಿ ನೀವು ಹೊಂದಿಸಿಕೊಳ್ಳಿ. ಈಗ ಬಾಣಲೆಯಲ್ಲಿ ಬೆಲ್ಲ ದ ಪುಡಿ, ಕೊತ್ತಂಬರಿ ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಬೆಲ್ಲ ಸಂಪೂರ್ಣವಾಗಿ ಕರಗುವ ತನಕ ಮುಚ್ಚಳದಿಂದ ಮುಚ್ಚಿಕೊಳ್ಳಿ. ಬೆಲ್ಲ ಕರಗಿದ ಅನಂತರ ಅದಕ್ಕೆ ದಪ್ಪ ಸೇವನ್ನು ಸೇರಿಸಿ, ಸ್ಪಲ್ಪ ಹೊತ್ತು ಬೆರಿಸಿಕೊಳ್ಳಿ. ಈ ಮಿಶ್ರಣ ಗ್ರೇವಿಯಂತೆ ದ್ರವದ ರೂಪಕ್ಕೆ ಬಂದಾಗ ಬದಿಯಲ್ಲಿ. ಸೇವ್‌ ನೀರನ್ನು ಹೀರಿಕೊಳ್ಳುತ್ತದೆ, ಆದರೆ ಮಿಶ್ರಣವು ಗ್ರೇವಿಯಲ್ಲಿ ನೀವು ಹೆಚ್ಚುವರಿ ನೀರನ್ನು ಸೇರಿಸಬಹುದು. ಈಗ ಟೊಮೆಟೊ ಸೆವ್‌ ಸಬ್ಜಿ ಸಿದ್ಧವಾಗಿದೆ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ಚಪಾತಿ ಅನ್ನದೊಂದಿಗೆ ಬಿಸಿಬಿಸಿಯಾಗಿ ಬಡಿಸಿ.

– ಪೂರ್ಣಿಮಾ ಪೆರ್ಣಂಕಿಲ

Advertisement

Udayavani is now on Telegram. Click here to join our channel and stay updated with the latest news.

Next