Advertisement
ಆದರೆ, ಈ “ಧೈರ್ಯಂ’ನಲ್ಲಿ ಅಜೇಯ್‌ರಾವ್ ಹೊಸ ಅನುಭವ ಕಟ್ಟಿಕೊಡಲಿದ್ದಾರೆ. ಅಜೇಯ್‌ರಾವ್ ಇಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದಷ್ಟೇ ಅಲ್ಲ, ಪಕ್ಕಾ ಆ್ಯಕ್ಷನ್ ಹೀರೋ ಆಗಿ ಮಿಂಚಿದ್ದಾರೆ. ಡಾ.ಕೆ.ರಾಜು ಅವರಿಗೆ ಇದು ಮೊದಲ ನಿರ್ಮಾಣದ ಚಿತ್ರ. ಅಂದಹಾಗೆ, “ಧೈರ್ಯಂ’ ಸ್ಪೆಷಾಲಿಟಿ ಏನು ಎಂಬ ಕುರಿತು ಒಂದು ರೌಂಡಪ್.
Related Articles
Advertisement
ತನಗೆ ಗೊತ್ತಿಲ್ಲದಂತೆ ಸುತ್ತಿಕೊಳ್ಳುವ ಸಮಸ್ಯೆಯಿಂದ ಆ ಹುಡುಗ ಹೇಗೆ ಹೊರಬರುತ್ತಾನೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಇಲ್ಲಿ ಮುಖ್ಯವಾಗಿ ಧೈರ್ಯವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದೇ ಚಿತ್ರದ ಸಾರಾಂಶವಂತೆ. ಒಂದು ಕಮರ್ಷಿಯಲ್ ಸಿನಿಮಾಗೆ ಏನೇನು ಇರಬೇಕೋ ಅವೆಲ್ಲವೂ ಇಲ್ಲಿದೆ. ಹಾಗಾಗಿ ಇದೊಂದು ಪ್ಯಾಕೇಜ್ ಸಿನಿಮಾ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ವಿಲನ್ ಪಾತ್ರ ಕೂಡಾ ಪ್ರಮುಖವಾಗಿದ್ದು, ರವಿಶಂಕರ್ ಇಲ್ಲಿ ಖಡಕ್ ವಿಲನ್ ಆಗಿ ನಟಿಸಿದ್ದಾರೆ. ನಾಯಕ ಹಾಗೂ ವಿಲನ್ ನಡುವಿನ ದೃಶ್ಯಗಳೇ ಚಿತ್ರದ ವಿಶೇಷತೆಯನ್ನು ಹೆಚ್ಚಿಸುತ್ತವೆ. ಅಜೇಯ್ ಹಾಗೂ ರವಿಶಂಕರ್ ನಡುವಿನ ಚೇಸಿಂಗ್ ದೃಶ್ಯಗಳು ಚಿತ್ರದ ವೇಗಕ್ಕೊಂದು ಪ್ಲಸ್ ಎನ್ನುತ್ತಾರೆ ಅವರು. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ಸದ್ದು ಮಾಡಿದ್ದು, ಅದರಲ್ಲಿರುವ “ಮನಿ ಮನಿ ಮನಿ, ಇದು ದುಡ್ಡಿನ ದುನಿಯಾ.
ಇಲ್ಲಿ ಎಲ್ಲರಿಗೂ ದುಡ್ಡು ಬೇಕು. ಮನುಷ್ಯ ಹುಟ್ಟೋಕು ದುಡ್ಡು ಬೇಕು, ಸತ್ತಮೇಲೂ ಮಣ್ಣಿಗೋಕೋಕು ದುಡ್ಡು ಬೇಕು. ದುಡ್ಡಿದ್ರೆ ಪ್ರೀತ್ಸೋಳು ಹತ್ತಿರ ಬರ್ತಾಳೆ, ಸ್ನೇಹಿತರು ಜತೆಗಿರ್ತಾರೆ. ದುಡ್ಡಿಲ್ಲಾಂದ್ರೆ, ಹೆಂಡತಿನೂ ಬೆನ್ನು ಹಾಕಿ ಮಲಕ್ಕೊತ್ತಾಳೆ. ನಿಯತ್ತಿನಿಂದ ದುಡಿಯೋನಿಗೆ ಮಾತ್ರ ದುಡ್ ಒಲಿಯುತ್ತೆ ಅನ್ನೋದು ವೇದಾಂತ. ನೀತಿಗೆಟ್ರೂ ಪರವಾಗಿಲ್ಲ ದುಡ್ ಮಾಡ್ಬೇಕು ಅನ್ನೋದು ನನ್ನ ಸಿದ್ಧಾಂತ. ಐ ಯಾಮ್ ರೆಡಿ ಟು ಡು ಎನಿಥಿಂಗ್ ಫಾರ್ ಮನಿ …’ ಎಂಬ ಈ ಡೈಲಾಗ್‌ಗಳು ಚಿತ್ರವನ್ನು ನೋಡುವ ಕುತೂಹಲ ಹೆಚ್ಚಿಸಿವೆ.
ಇನ್‌ಡೋರ್‌ನಲ್ಲೇ “ಧೈರ್ಯಂ’: ಸಾಮಾನ್ಯವಾಗಿ ಕೆಲವು ಸಿನಿಮಾಗಳ ಹಾಡುಗಳ ಚಿತ್ರೀಕರಣ ಹಚ್ಚ ಹಸಿರಿನ ನಡುವೆ ಅಥವಾ ಇನ್ಯಾವುದೋ ಔಟ್‌ಡೋರ್‌ನಲ್ಲಿ ನಡೆದರೆ “ಧೈಯಂ’ ಚಿತ್ರದ ಹಾಡಿನ ಚಿತ್ರೀಕರಣ ಬಹುತೇಕ ಸೆಟ್‌ಗಳಲ್ಲೇ ನಡೆದಿದೆ. ಅದು ಈ ಚಿತ್ರದ ವಿಶೇಷತೆಗಳಲ್ಲೊಂದು. ಹಾಡುಗಳಿಗಾಗಿಯಏ ಸುಮಾರು ಎಂಟಕ್ಕೂ ಹೆಚ್ಚು ಸೆಟ್‌ಗಳನ್ನು ಹಾಕಲಾಗಿದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಹಾಡೊಂದನ್ನು ಮೂರು ವಿಭಿನ್ನ ಶೈಲಿಯ ಸೆಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಇನ್ನು, ರಾಮನಗರದ ಗುಡ್ಡದಲ್ಲೂ ಸೆಟ್ ಹಾಕಿ ಹಾಡನ್ನು ಚಿತ್ರೀಕರಿಸಲಾಗಿದೆ. ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣವಾಗಿ ಬೆಂಗಳೂರಿನಲ್ಲೇ ನಡೆದಿದೆ.
150 ಚಿತ್ರಮಂದಿರಗಳಲ್ಲಿ ಬಿಡುಗಡೆ: “ಧೈರ್ಯಂ’ ಚಿತ್ರವನ್ನು ನಿರ್ಮಾಪಕ ಡಾ.ಕೆ.ರಾಜು ಅವರು ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲೆಡೆಯಿಂದಲೂ ಚಿತ್ರಕ್ಕೆ ಬೇಡಿಕೆ ಬಂದಿದ್ದು, ಕೆಲವು ಏರಿಯಾಗಳಲ್ಲಿ ಚಿತ್ರ ಸೇಲ್ ಆಗಿದೆ. ಚಿತ್ರದ ಆಡಿಯೋ ಹಾಗೂ ಟ್ರೇಲರ್ ನೋಡಿ, ಚಿತ್ರದ ಬೇಡಿಕೆ ಹೆಚ್ಚಾಗಿತ್ತು.
ಅದರಂತೆ, ನಿರ್ಮಾಪಕರು ಒಳ್ಳೆಯ ಮೊತ್ತಕ್ಕೆ ಕೆಲವು ಏರಿಯಾಗಳಲ್ಲಿ ಮಾತ್ರ ಸೇಲ್ ಮಾಡಿದ್ದಾರೆ. ಅದು ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ ಎಂಬುದು ವಿಶೇಷ. ಸದ್ಯಕ್ಕೆ 150 ಚಿತ್ರಗಳಲ್ಲಿ ಬಿಡುಗಡೆ ಮಾಡುವ ಗುರಿ ಇಟ್ಟುಕೊಂಡಿರುವ ನಿರ್ಮಾಪಕರು, ಇನ್ನೂ ಬೇಡಿಕೆ ಹೆಚ್ಚಾದರೆ, ಇನ್ನಷ್ಟು ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡುವ ಯೋಚನೆ ಮಾಡಿದ್ದಾರೆ.
ಅಂದಹಾಗೆ, ಈ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ. ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕ ಎಮಿಲ್‌ಗೂ ಹೊಸ ಲೈಫ್ ಸಿಗಲಿದೆಯಂತೆ. ಕಲರ್‌ಫುಲ್ ಸೆಟ್‌ನಲ್ಲಿ ಹಾಡುಗಳ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಸಾಧು ಕೋಕಿಲ, ಜೈಜಗದೀಶ್, ರವಿಶಂಕರ್ ಸೇರಿದಂತೆ ಅನೇಕರು ನಟಿಸಿದ್ದು, ಶೇಖರ್ ಚಂದ್ರ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನವಿದೆ.