Advertisement

ನಿದ್ದೆಯಲ್ಲಿ ಮಾತಾಡುತ್ತಾರಾ ಧವನ್‌ ? ರೋಹಿತ್‌ ಮಾಡಿದ ಈ ವಿಡಿಯೋ ಈಗ ವೈರಲ್‌

08:42 AM Sep 22, 2019 | keerthan |

ಬೆಂಗಳೂರು: ಟೀಂ ಇಂಡಿಯಾದ ನಿಗದಿತ ಓವರ್‌ ಗಳ ಆರಂಭಿಕ ಆಟಗಾರ ಶಿಖರ್‌ ಧವನ್‌ ಎಂತಹ ಸ್ಪೋಟಕ ಆಟಗಾರ ಎಂದು ನಿಮಗೆ ಗೊತ್ತಿರಬಹುದು. ಗಬ್ಬರ್‌ ಸಿಂಗ್ ಶಿಖರ್‌ ಧವನ್‌ ರ ಇನ್ನೊಂದು ಅವತಾರ ನೀವು ನೋಡಿದ್ದೀರಾ. ಸಹ ಆಟಗಾರ ರೋಹಿತ್‌ ಶರ್ಮಾ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿದ್ದು, ಸಖತ್‌ ವೈರಲ್‌ ಆಗಿದೆ.

Advertisement

ಹೌದು.  ಶಿಖರ್‌ ಧವನ್‌ ನಿದ್ದೆಯಲ್ಲಿ ಮಾತನಾಡುವ ವಿಡಿಯೋವೊಂದು ಈಗ ವೈರಲ್‌ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟಿ ಟ್ವೆಂಟಿ ಪಂದ್ಯವಾಡಲು ಟೀಂ ಇಂಡಿಯಾ ಧರ್ಮಶಾಲಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿತ್ತು. ಈ ವೇಳೆ ವಿಮಾನದಲ್ಲಿ ಇಬ್ಬರು ಆರಂಭಿಕರು ಅಕ್ಕಪಕ್ಕ ಕುಳಿತಿದ್ದರು.  ನಿದ್ದೆ ಮಾಡುತ್ತಿದ್ದ ಧವನ್‌ ಒಬ್ಬರೇ ಏನೋ ಗುನುಗುನಿಸುತ್ತಿರುವುದನ್ನು ಗಮನಿಸಿದ ರೋಹಿತ್‌ ತಮ್ಮ ಮೊಬೈಲ್‌ ನಲ್ಲಿ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಾಕಿದ್ದಾರೆ.

ವಿಡಿಯೋದ ಜೊತೆ , ಧವನ್‌ ನನ್ನೊಂದಿಗೆ ಮಾತನಾಡುತ್ತಿಲ್ಲ. ಕನಸಿನ ಗೆಳೆಯನ ಬಳಿ ಮಾತನಾಡುತ್ತಿದ್ದಾನೆ ಎಂಬರ್ಥದ ಸಾಲುಗಳನ್ನು ರೋಹಿತ್‌ ಬರೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ಶಿಖರ್‌ ಧವನ್‌ ಕೂಡಾ ಪ್ರತಿಕ್ರಿಯೆ ಮಾಡಿದ್ದು ತಾನು ಶಾಯರಿ ಅಭ್ಯಾಸ ನಡೆಸುತ್ತಿದ್ದೆ ಎಂದಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next