Advertisement

ಧಾರವಾಡದ ಗಿಟಾರ್ ಸಂಗೀತ ಸುಧೆ: ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಲ್ಲಿ ದಾಖಲು

05:25 PM Nov 21, 2022 | Team Udayavani |

ಧಾರವಾಡ : ಧರ್ಮಸ್ಥಳದ ಧರ್ಮಾಧಿಕಾರಿಯಾದ ಜನತಾ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರು, ರಾಜರ್ಷಿ ಡಾ|ಡಿ. ವೀರೆಂದ್ರ ಹೆಗ್ಗಡೆ ಅವರ 75 ನೇ ಹುಟ್ಟುಹಬ್ಬದ ಪ್ರಯುಕ್ತ ಏಕಕಾಲದಲ್ಲಿ ಗಿಟಾರ್ ಸಂಗೀತ ಸುಧೆಯ ಮೂಲಕ ಶುಭಾಶಯ ಕೋರಿದ್ದು, ಇದೀಗ ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಲ್ಲಿ ದಾಖಲಾಗಿದೆ.

Advertisement

ಧಾರವಾಡದ ಇಲ್ಲಿಯ ವಿದ್ಯಾಗಿರಿಯ ಜೆಎಸ್‌ಎಸ್ ಸೆಂಟ್ರಲ್ ಶಾಲೆಯ 200 ಮಕ್ಕಳು ನ. 18 ರಂದು ಶುಕ್ರವಾರ ಏಕಕಾಲದಲ್ಲಿ ಗಿಠಾರ ನುಡಿಸಿ, ಸಂಗೀತ ಸುಧೆಯಲ್ಲಿ ಪೂಜ್ಯರಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದರು. ಈ ಸಂಗೀತ ಸುಧೆ ಕಾರ್ಯಕ್ರಮವನ್ನು ಪೂಜ್ಯರು ಸಹ ಆನ್‌ಲೈನ್ ಮೂಲಕ ನೇರ ಪ್ರಸಾರದ ಮೂಲಕ ವೀಕ್ಷಿಸಿದರು. ಈಗ ಈ ಸಂಗೀತ ಸುಧೆಯ ಕಾರ್ಯಕ್ರಮವು ವರ್ಲ್ಡ್ ರೆಕಾರ್ಡ್ಸ್ ಆಫ್
ಇಂಡಿಯಾದದಲ್ಲಿ ದಾಖಲಾಗಿದೆ.

ಈ ದಾಖಲಾದ ಪ್ರಮಾಣ ಪತ್ರವನ್ನು ಜೆಎಸ್‌ಎಸ್ ಬಯಲು ನಾಟ್ಯಗೃಹ ಸಭಾಂಗಣದಲ್ಲಿ ಸ್ವೀಕರಿಸಿದ ಜೆಎಸ್‌ಎಸ್‌ನ ಕಾರ್ಯದರ್ಶಿ ಡಾ|ಅಜಿತ ಪ್ರಸಾದ ಮಾತನಾಡಿ, ಜೆಎಸ್‌ಎಸ್ ನ ವಿವಿಧ ಶಿಕ್ಷಣ ಸಂಸ್ಥೆಗಳು ಪೂಜ್ಯರ ಹುಟ್ಟುಹಬ್ಬದ ನಿಮಿತ್ತ ವರ್ಷಪೂರ್ತಿ 75 ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂದು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟವನ್ನು ಏರಿ ಪರಂಪರಾಗತ ಇತಿಹಾಸವನ್ನು ಅಗರ್ಭ ಪರಿಪಾಲಕರಾಗಿಸಿದವರು ಪೂಜ್ಯರು. ಕೇವಲ ಧರ್ಮ ಶಿಕ್ಷಣ, ದಾನ-ಧರ್ಮವೊಂದೇ ಜನರ ಕಲ್ಯಾಣವಲ್ಲ ಎಂಬುದನ್ನು ಅರಿತು ನಾಡಿನ ಸುಭಿಕ್ಷೆಗೆ ಅಷ್ಟ ದಿಕ್ಕುಗಳಲ್ಲೂ ಪರಿವರ್ತನೆ ಬಯಸಿ ಆಧುನಿಕ ಆಡಳಿತ ಪದ್ಧತಿಗೆ ಹೆಗ್ಗುರುತಾದವರು ಡಾ|ಡಿ.ವಿರೇಂದ್ರ ಹೆಗ್ಗಡೆಯವರು. ಗ್ರಾಮ ಸುಭಿಕ್ಷೆಗೆ ಗ್ರಾಮಾಭಿವೃದ್ಧಿ ಯೋಜನೆ, ಶಿಕ್ಷಣ ಕ್ರಾಂತಿಗೆ ಶಿಕ್ಷಣ ಸಂಸ್ಥೆಗಳು, ಸೇವಾ ಕಾರ್ಯಕ್ಕಾಗಿ ಚತುರ್ಧಾನ, ಸಾಂಸ್ಕೃತಿಕ, ಸಾಮಾಜಿಕ ಸ್ವರಗಳ ಸರ್ವಧರ್ಮ ಸಾಹಿತ್ಯ ಸಮ್ಮೇಳನ, ಅಶಕ್ತರ ಸಬಲೀಕರಣಕ್ಕಾಗಿ ಸ್ವ ಉದ್ಯೋಗ, ಧರ್ಮ ಶಿಕ್ಷಣಕ್ಕಾಗಿ ಆಲಯಗಳ ಜೀರ್ಣೋದ್ದಾರ ಸೇರಿದಂತೆ ಸಹಸ್ರಾರು ಯೋಜನೆಗಳ ಹರಿಕಾರರಾಗಿ ಪರಮೋಚ್ಚ ಸ್ಥಾನವನ್ನು ಅರ್ಥ ಪೂರ್ಣವಾಗಿ ಮುನ್ನಡೆಸಿದ ಶಿರೋವರ್ಯರು ಖಾವಂದರು ಎಂದರು.

ಈ ಸಂಧರ್ಭದಲ್ಲಿ ಶಾಲೆಯ ಪ್ರಾಚಾರ್ಯೆ ಸಾಧನಾ ಎಸ್, ಮಹಾವೀರ ಉಪಾದ್ಯೆ, ಡಾ|ಸೂರಜ್ ಜೈನ್, ರಾಯಲ್ ಇಂಟರ್‌ನ್ಯಾಶನಲ್ ಸ್ಕೂಲ್ ಆಪ್ ಮ್ಯೂಸಿಕ್‌ನ ವಿಶಾಲ ಹಾಗೂ ಮೋಹಿತ್ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next