Advertisement

Dharwad; ಹೊಸ ತಂತ್ರಜ್ಞಾನ ರೂಪಿಸುವ ಸಂಶೋಧನೆ ಕೈಗೊಳ್ಳಿ

05:44 PM Oct 18, 2023 | Team Udayavani |

ಧಾರವಾಡ: ದಂತ ವೈದ್ಯಶಾಸ್ತ್ರ ಕೇವಲ ವಿಜ್ಞಾನವಲ್ಲದೇ ಒಂದು ಕಲೆಯೂ ಆಗಿದೆ ಎಂದು ದಾವಣಗೆರೆಯ ದಂತ ಮಹಾವಿದ್ಯಾಲಯದ ನಿರ್ದೇಶಕಿ ಡಾ| ವಸುಂಧರಾ ಶಿವಣ್ಣ ಹೇಳಿದರು.

Advertisement

ಸತ್ತೂರಿನ ಎಸ್‌ಡಿಎಂ ದಂತ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಬ್ಯಾಚ್‌ 2023-24ರ 100 ದಂತ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಂತ ವೈದ್ಯಶಾಸ್ತ್ರ ಅಧ್ಯಯನ ಕೈಗೊಂಡು ಈ ಕ್ಷೇತ್ರದಲ್ಲಿ ಆಗುವ ತಂತ್ರಜ್ಞಾನ, ವಿಜ್ಞಾನದ ಅರಿವು ವಿದ್ಯಾರ್ಥಿಗಳು ಪಡೆಯಬೇಕು. ಇದರ ಜತೆಗೆ ಹೊಸ ತಂತ್ರಜ್ಞಾನ ರೂಪಿಸುವ ಸಂಶೋಧನೆ ಕೂಡ ಮಾಡಬೇಕು. ವಿದ್ಯಾರ್ಥಿಗಳು ಮುಂದೆ ಹೆಮ್ಮೆಪಡುವಂತಹ ಅಡಿಪಾಯವನ್ನು ಇಂದು ಹಾಕಬೇಕಾಗಿದೆ. ಸವಾಲುಗಳನ್ನು ಎದುರಿಸಲು ಹಿಂದೆ ಮುಂದೆ ನೋಡದೆ ಯಾವಾಗಲೂ ಉತ್ಸಾಹದಿಂದ ಹೊಸ ವಿಷಯಗಳನ್ನು ಕಲಿಯಬೇಕು. ಸಮುದಾಯ ಸೇವೆಗಳಲ್ಲಿ ಸದಾ ಆಸಕ್ತಿ ಹೊಂದಿರಬೇಕು ಎಂದರು.

ಎಸ್‌ಡಿಎಂ ವಿವಿ ಉಪಕುಲಪತಿ ಡಾ| ನಿರಂಜನ್‌ಕುಮಾರ ಮಾತನಾಡಿ, ದಂತ ವೈದ್ಯಶಾಸ್ತ್ರ ಒಂದು ಶ್ರೇಷ್ಠ ವೃತ್ತಿಯಾಗಿದೆ. ಜನರಿಗೆ ಸಹಾಯ ಮಾಡುವ ಪ್ರವೃತ್ತಿ ಹೊಂದಬೇಕು.

ಮಾಡುವ ಕೆಲಸವನ್ನು ಯಾವಾಗಲೂ ಪ್ರೀತಿಯಿಂದ ಮಾಡಬೇಕು. ಸದುದ್ದೇಶದಿಂದ ಮಾಡಿದ ಅಧ್ಯಯನ ಮತ್ತು ಸೇವೆ ದಂತ
ವೈದ್ಯರ ಜೀವನವನ್ನು ಬದಲಿಸಬಹುದು ಎಂದು ಹೇಳಿದರು.

Advertisement

ಉತ್ತಮ ಸ್ನೇಹಿತರು ವೃತ್ತಿ ಜೀವನದಲ್ಲಿ ಆಭರಣವಿದ್ದಂತೆ ಮತ್ತು ಕಷ್ಟಪಟ್ಟು ಸಂಪಾದಿಸಬೇಕು. ರೋಗಿಗಳ ಬಗ್ಗೆ ಪ್ರೀತಿ ಮತ್ತು ಕಾಳಜಿ ತೋರಿಸುವುದು ವೈದ್ಯರ ಉತ್ತಮ ಲಕ್ಷಣ. ನಮ್ಮ ಕುಲಪತಿಗಳು ಯಾವಾಗಲೂ ಉತ್ತಮ ಶಿಕ್ಷಣ ಮತ್ತು ರೋಗಿಗಳ ಆರೈಕೆಯನ್ನು ಬಯಸುತ್ತಾರೆ ಎಂದರು.

ಎಸ್‌ಡಿಎಂ ವಿವಿ ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್‌, ಆಡಳಿತ ನಿರ್ದೇಶಕರಾದ ಸಾಕೇತ್‌ ಶೆಟ್ಟಿ ಸೇರಿದಂತೆ ವಿವಿ ಅಧಿಕಾರಿಗಳು, ಅಂಗ ಸಂಸ್ಥೆಯ ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಸ್‌ಡಿಎಂ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಬಲರಾಮ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿಗಳ ಕ್ಷೇಮ ಪಾಲನ
ಅ ಧಿಕಾರಿ ಡಾ| ಕಿರಣಕುಮಾರ ಪರಿಚಯಿಸಿದರು. ಡಾ|ಅತುಲ್‌ ಸತ್ತೂರ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಡಾ| ಕಾವೇರಿ ಮತ್ತು ಡಾ| ರಮ್ಯಾಶ್ರೀ ನಿರೂಪಿಸಿದರು. ಡಾ| ನಿರಂಜನ್‌ ಕೆ.ಸಿ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next