Advertisement

ಧಾರವಾಡ; ಶೈಕ್ಷಣಿಕ ಕ್ಷೇತ್ರದ ¨ಮೇರು ಪರ್ವತ ಕ್ಲಾಸಿಕ್‌ ಸಂಸ್ಥೆ”

01:24 PM Feb 07, 2023 | Team Udayavani |

ಮೇರು ಪರ್ವತ ಧಾರವಾಡದ ಕ್ಲಾಸಿಕ್‌ ಕೆಎಎಸ್‌, ಐಎಎಸ್‌ ಸ್ಟಡಿ ಸರ್ಕಲ್‌ಗೆ ಈಗ 25 ವರ್ಷದ ಸಂಭ್ರಮ. ಈ ಸಾಧನೆಗೆ ನಿಮ್ಮೆಲ್ಲರ ಪ್ರೀತಿ-ಅಭಿಮಾನವೇ ಕಾರಣವಾಗಿದೆ. ಇದರ ಹಿಂದೆ ಸಂಸ್ಥೆಯ ನಿರ್ದೇಶಕ ಶ್ರೀ ಲಕ್ಷ್ಮಣ ಎಸ್‌. ಉಪ್ಪಾರ ಹಾಗೂ ಅವರ ಸಿಬ್ಬಂದಿ ಶ್ರಮ ಅಪಾರವಿದೆ. ಅವರ ಶ್ರಮದ ಪ್ರತೀಕವಾಗಿ ಸಂಸ್ಥೆ ಈಗ ನಾಡಿನಾದ್ಯಂತ ಹೆಸರುವಾಸಿಯಾಗಿದೆ.

Advertisement

ಕ್ಲಾಸಿಕ್‌ ಸಂಸ್ಥೆ ನಡೆದು ಬಂದ ದಾರಿ:
ಕ್ಲಾಸಿಕ್‌ ಸಂಸ್ಥೆ ಸಂಸ್ಥಾಪಕರಾದ ಶ್ರೀ ಲಕ್ಷ್ಮಣ ಎಸ್‌. ಉಪ್ಪಾರ ಅವರು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಧರ್ಮಟ್ಟಿಯಲ್ಲಿ ಜೂನ್‌ 1, 1971ರಂದು ಶ್ರೀ ಸಿದ್ದಪ್ಪ ಉಪ್ಪಾರ ಹಾಗೂ ತಾಯವ್ವಾ ಉಪ್ಪಾರ ದಂಪತಿ ಮಗನಾಗಿ ಜನಿಸಿದರು. ಪ್ರಾಥಮಿಕ 1 ರಿಂದ 7 ತರಗತಿವರೆಗೆ ಮೂಡಲಗಿ ಬಳಿಯ ಧರ್ಮಟ್ಟಿ, 8 ರಿಂದ 10ನೇ ತರಗತಿಯನ್ನು ಮೂಡಲಗಿಯ ಎಸ್‌ಎಸ್‌ಆರ್‌ ಪ್ರೌಢಶಾಲೆಯಲ್ಲಿ ಪೂರೈಸಿದರು. ಧಾರವಾಡದ ಕರ್ನಾಟಕ ಕಾಲೇಜಿಗೆ ಬಂದು ಅಲ್ಲಿ ಪಿಯುಸಿ
ಸೈನ್ಸ್‌ ಪಾಸ್‌ ಮಾಡಿದರು. ಆನಂತರ ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪೂರೈಸಿದರು.

ಅವರೊಬ್ಬ ಇಂಜಿನಿಯರಿಂಗ್‌ ಪದವೀಧರರಾದುದರಿಂದ ಅವರ ಮುಂದೆ ಆಗ ಹಲವಾರು ಅವಕಾಶಗಳಿದ್ದವು. ಮನಸ್ಸು ಮಾಡಿದ್ದರೆ ಯಾವುದೋ ಮಲ್ಟಿನ್ಯಾಷನಲ್‌ ಕಂಪನಿಯಲ್ಲಿ ಸಾಫ್ಟ್‌ ವೇರ್‌ ಅಥವಾ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿ ಲಕ್ಷಾಂತರ ಸಂಬಳ ಪಡೆದು ಹಾಯಾಗಿರಬಹುದಿತ್ತು. ಆದರೆ ಅವರ ಗುರಿಯೇ ಬೇರೆ ಆಗಿತ್ತು. ತಾವೊಬ್ಬ ಐಎಎಸ್‌ ಅಧಿಕಾರಿಯಾಗಬೇಕೆಂಬ ಉತ್ಕಟ ಇಚ್ಛೆ ಅವರಲ್ಲಿತ್ತು. ಆ ಇಚ್ಛೆ ಪೂರೈಸಿಕೊಳ್ಳಲು ಸೂಕ್ತ ತರಬೇತಿ ಅವಶ್ಯಕತೆ ಇತ್ತು. ಆದ್ದರಿಂದ ಆ ತರಬೇತಿ ಪಡೆಯಲು ಆ ದಿನಗಳಲ್ಲಿ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರ ಹಾಗೆ ಕರ್ನಾಟಕದಿಂದ ಅದರಲ್ಲೂ ಉತ್ತರ ಕರ್ನಾಟಕದಿಂದ ಬಂದ ನೂರಾರು ಜನ ಐಎಎಸ್‌ ಆಕಾಂಕ್ಷಿಗಳಿದ್ದರು.

ಅವರೆಲ್ಲ ಅಲ್ಲಿಗೆ ಬರಲು ಕಾರಣ ಉತ್ತರ ಕರ್ನಾಟಕದಲ್ಲಿ ಅಂಥ ತರಬೇತಿ ಕೇಂದ್ರಗಳು ಯಾವವೂ ಇರಲಿಲ್ಲ. ಆದ್ದರಿಂದಲೇ ಅವರು ದೂರದ ಹೈದರಾಬಾದ್‌ಗೆ ಬಂದಿದ್ದರು. ಉತ್ತರ ಕರ್ನಾಟಕದ ಯುವಜನರಿಗೆ ಏನಾದರೊಂದು ಉಪಯುಕ್ತವಾದುದನ್ನು ನೀಡಬೇಕೆಂದು ಯೋಜಿಸಿದರು. ಅಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಯುವಜನರಿಗೆ ಸರಕಾರಿ ನೌಕರಿ ಬಗ್ಗೆ ಅಷ್ಟೇನೂ ಮಾಹಿತಿ ಇರಲಿಲ್ಲ. ಆ ಮಾಹಿತಿ ಕೊಡುವವರು ಯಾರೂ ಇರಲಿಲ್ಲ.ಇಂಥ ಮಾಹಿತಿ ಸಂಸ್ಥೆ ನಮ್ಮ ಧಾರವಾಡದಲ್ಲಿಯೇ ಇದ್ದರೆ ಹೇಗೆಂದು ಯೋಚಿಸಿ ಮರಳಿ ಧಾರವಾಡಕ್ಕೆ ಬಂದರು.

Advertisement

ಕ್ಲಾಸಿಕ್‌ ಸಂಸ್ಥೆಯ ಹುಟ್ಟು:
ಅಂದು ಜುಲೈ 14, 1997ರ ದಿನ. ಜಯನಗರದ ಬಡಾವಣೆಯೊಂದರಲ್ಲಿ 900 ರೂ. ಬಾಡಿಗೆಯಂತೆ ಒಂದು ಮನೆ ಹಿಡಿದು, ಅಲ್ಲಿ English Class ಅನ್ನು ಆರಂಭಿಸಿದರು. ಆರಂಭದಲ್ಲೇ 4 ವಿದ್ಯಾರ್ಥಿಗಳು ಸೇರಿದ್ದು ಖುಷಿ ಕೊಟ್ಟಿತು. ಅದರ ಹತ್ತಿರವೇ 250 ರೂ. ಬಾಡಿಗೆಯ ರೂಂನಲ್ಲಿ ಅವರು ವಾಸಿಸತೊಡಗಿದರು. ನಂತರ ಕೆಲ ತಿಂಗಳುಗಳಲ್ಲಿ ಸುಮಾರು 100 ವಿದ್ಯಾರ್ಥಿಗಳು ಸೇರಿದರು. ಬೆಳಿಗ್ಗೆ 7 ರಿಂದ ಆರಂಭವಾದ ಕ್ಲಾಸುಗಳು ಸಂಜೆ 8ರವರೆಗೂ ನಡೆಯುತ್ತಿದ್ದವು. ಮುಂದೆ ಅಕ್ಟೋಬರ್‌ 1997ರ ದೀಪಾವಳಿ ಸಂದರ್ಭದಲ್ಲಿ ಹೊಯ್ಸಳ ಹೋಟೆಲ್‌ ಪಕ್ಕದಲ್ಲಿರುವ ಶಂಕರ ಪ್ಲಾಜಾದಲ್ಲಿ ಕೋಚಿಂಗ್‌ ಕ್ಲಾಸ್‌ ಆರಂಭಿಸಿದರು.

ಅದೇ ವರ್ಷ ಡಿಸೆಂಬರ್‌ 1997ರಲ್ಲಿ ಧಾರವಾಡದ ಗಾಂಧಿನಗರದಲ್ಲೊಂದು ಶಾಖೆ ಆರಂಭಿಸಿದರು. 3 ಶಾಖೆಗಳ ನಿರ್ವಹಣೆ, ಖರ್ಚು-ವೆಚ್ಚಗಳು ಹೆಚ್ಚಾಗಿದ್ದರಿಂದ 1998ರ ಜೂನ್‌ನಿಂದ ಕೇವಲ ಕಿಟೆಲ್‌ ಕಾಲೇಜಿನ ಎದುರಿಗೆ ಇರುವ ಶಂಕರ ಪ್ಲಾಜಾದಲ್ಲಿ ಕ್ಲಾಸಸ್‌ ಆರಂಭಿಸಿದರು. ಆರಂಭದಲ್ಲಿ ವಿಜಯ ಇನ್‌ಸ್ಟಿಟ್ಯೂಟ್‌ ಹೆಸರಿನಿಂದ ಆರಂಭವಾದ ಸಂಸ್ಥೆ ಕೆಲವು ದಿನಗಳ ನಂತರ ಕ್ಲಾಸಿಕ್‌ ಕೆಎಎಸ್‌ ಆ್ಯಂಡ್‌ ಐಎಎಸ್‌ ಸ್ಟಡಿ ಸರ್ಕಲ್‌ ಎಂಬ ಹೆಸರು ಪಡೆಯಿತು.

1998ರಲ್ಲಿ ಕ್ಲಾಸಿಕ್‌ ಸಂಸ್ಥೆ ಆರಂಭಿಸಿದ ಹೊಸತರಲ್ಲೇ ಪಿಎಸ್‌ಐ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರಿಂದ 25 ಜನ ಅಭ್ಯರ್ಥಿಗಳು ಪ್ರವೇಶ ಪಡೆದರು. ಪ್ರಪ್ರಥಮ ಬಾರಿಗೆ ಗೀತಾ ಕುಲಕರ್ಣಿ, ರುದ್ರಪ್ಪ ಉಜ್ಜಿನಕೊಪ್ಪ ಎಂಬಿಬ್ಬರು ಅಭ್ಯರ್ಥಿಗಳು ಪಿಎಸ್‌ಐ ಆಗಿ ಆಯ್ಕೆಯಾದ್ದರಿಂದ ಸಂಸ್ಥೆಗೆ ತುಂಬಾ ಹೆಸರು ಬಂತು. ಈ ಸಂಸ್ಥೆ ಬಗ್ಗೆ ಎಲ್ಲರಿಗೂ Awareness ಆರಂಭವಾಯ್ತು. 1998ರಲ್ಲಿ ಕೆಎಎಸ್‌ ಪರೀಕ್ಷೆಗೆ ಅಧಿಸೂಚನೆ ಪ್ರಕಟವಾದ ನಂತರ KAS Batch ಆರಂಭಿಸಿದ್ದು, 40 ಜನ ಪ್ರವೇಶ ಪಡೆದರು. 2000ದಲ್ಲಿ PSI ಹಾಗೂ 2000ರಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಹಾಗೂ 2010ರಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ತರಬೇತಿ ಆರಂಭಿಸಲಾಯಿತು. ಹಾಗೆಯೇ ಹಂತ ಹಂತವಾಗಿ KAS, IAS, PSI, PC, SDA, FDA, NTTF, MBA, D.Ed, B.Ed ಹೀಗೆ ಯಾವ ಹುದ್ದೆಗಳಿಗೆ ಅರ್ಜಿ ಕರೆಯುತ್ತಾರೋ ಆ ಹುದ್ದೆಗಳಿಗೆ ಸಂಬಂಧಿಸಿದ ಕ್ಲಾಸ್‌ಗಳನ್ನು ಆರಂಭಿಸಿದರು. ವಿವಿಧ ಪತ್ರಿಕೆಗಳಲ್ಲಿ ಪತ್ರಿಕೆಯಲ್ಲಿ ಸಂಸ್ಥೆಯ ಪ್ರಗತಿಯ ಬಗ್ಗೆ ಜಾಹೀರಾತು ನೀಡಲು ಆರಂಭಿಸಿದರು. ಕ್ರಮೇಣ ಕ್ಲಾಸಿಕ್‌ ಸಂಸ್ಥೆಗೆ ಹೆಚ್ಚು ಹೆಚ್ಚಾಗಿ ಅಭ್ಯರ್ಥಿಗಳು ಪ್ರವೇಶ ಪಡೆಯಲು ಆರಂಭಿಸಿದರು. ಶಂಕರ ಪ್ಲಾಜಾದಲ್ಲಿ ತಿಂಗಳಿಗೆ 1600 ರೂ. ಬಾಡಿಗೆಯ ಕಟ್ಟಡದಲ್ಲಿ ಕುರ್ಚಿ-ಟೇಬಲ್‌ ಸಹಿತ ಬಾಡಿಗೆಗೆ ಪಡೆದು ಕ್ಲಾಸ್‌ಗಳನ್ನು ನಡೆಸಲಾಯಿತು. ಹಂತ ಹಂತವಾಗಿ ಸಂಸ್ಥೆ ಬೆಳೆಯಿತು.

ವಾಹನ ಸೌಲಭ್ಯ :
ಸಂಸ್ಥೆಯ ವಸತಿ ನಿಲಯದಲ್ಲಿರುವ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ತರಗತಿಗೆ ಹೋಗಲು- ಬರಲು ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಪ್ರಸ್ತುತ 50ಕ್ಕೂ ಹೆಚ್ಚು ವಾಹನಗಳು ಕಾರ್ಯ ನಿರ್ವಹಿಸುತ್ತಿವೆ.

ದಾಂಪತ್ಯ ಜೀವನಕ್ಕೆ ಪಾದಾರ್ಪಣೆ :
1997ರಲ್ಲಿ ಸಂಸ್ಥೆ ಆರಂಭಿಸಿದ ಎರಡು ವರ್ಷದ ನಂತರ ಅವರ ತಂದೆ-ತಾಯಿಯವರ ಆಶೀರ್ವಾದದಿಂದ ದಾವಣಗೆರೆಯ ರೇಣುಕಾ ಅವರೊಂದಿಗೆ ದಾವಣಗೆರೆಯಲ್ಲಿ ಜು.2, 1999 ರಂದು ವಿವಾಹ ಮಾಡಿಕೊಂಡರು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆಂಬ ಮಾತಿದೆ. ನಿಜಕ್ಕೂ ಆ ಮಾತು ಶ್ರೀ ಲಕ್ಷ್ಮಣ ಎಸ್‌. ಉಪ್ಪಾರ ಅವರ ವಿಷಯದಲ್ಲಿ ನಿಜವೇ ಆಯ್ತು. ಕೈ ಹಿಡಿದವಳ ಕಾಲ್ಗುಣ ಅದೆಷ್ಟು ಒಳ್ಳೆಯದಾಗಿತ್ತೆಂದರೆ ಅವರು ಆರಂಭಿಸಿದ
ಕ್ಲಾಸಿಕ್‌ ಸಂಸ್ಥೆ ಹಂತ ಹಂತವಾಗಿ ಅಭಿವೃದ್ಧಿ ಹೊಂದತೊಡಗಿತು.

ಮುದ್ರಣ ಮಾಧ್ಯಮ ಪತ್ರಿಕೆಯ ಉಗಮ :
ಸಂಸ್ಥೆಗೆ ತರಬೇತಿಗೆ ಸೇರಲು ದೂರದ ಜಿಲ್ಲೆಗಳ ವಿದ್ಯಾರ್ಥಿಗಳಿಗೂ ಪರೀಕ್ಷೆಗಳ ಮಾರ್ಗದರ್ಶನ ನೀಡಲು ಕನ್ನಡ ಮಾಸಪತ್ರಿಕೆ ಆರಂಭಿಸಲು ಯೋಜಿಸಿದರು. ಆದರೆ ಪತ್ರಿಕೆ ಆರಂಭಿಸಲು ಹಣದ ಅವಶ್ಯಕತೆ ಇತ್ತು. ತಮ್ಮ ಆತ್ಮೀಯರಾಗಿದ್ದ ಶ್ರೀಮತಿ ತೇಜಸ್ವಿನಿ ಯಕ್ಕುಂಡಿಮಠ, ಪ್ರೊ|ಆರ್‌.ವಿ. ಚಿಟಗುಪ್ಪಿಯವರಲ್ಲಿ ಹೇಳಿಕೊಂಡಾಗ ಅವರು ಹಾಗೂ Artec Brothers (ವಿಶ್ವಜ್ಞ ಬ್ರದರ್ಸ್‌) ಅಗತ್ಯ ತಾಂತ್ರಿಕ ಬೆಂಬಲ ನೀಡಿ ಧನಸಹಾಯ ಮಾಡುವ ಭರವಸೆ ನೀಡಿದರು. ಅಲ್ಲದೇ ಇವರೊಂದಿಗೆ ಐ.ಜಿ. ಚೌಗಲಾ, ಶಿವಾನಂದ ಸಾಲಿ, ವಿಜಯ ದೊಡ್ಡಮನಿ ಅವರ ನೈತಿಕ ಬೆಂಬಲದ ಫಲವಾಗಿ 2005ರ ಜೂನ್‌ ತಿಂಗಳಲ್ಲಿ 10ರೂ. ಮುಖಬೆಲೆಯ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಆರಂಭಿಸಿದರು. ಆರಂಭದಲ್ಲಿ ಕೇವಲ 1,000 ಪ್ರತಿಗಳನ್ನು ಧಾರವಾಡದ ಸರಸ್ವತಿ ಪ್ರಿಂಟರ್ಸ್‌ನಲ್ಲಿ ಮುದ್ರಿಸಿ ಬಿಡುಗಡೆ ಮಾಡಿದರು. ಈಗಿನ ಶಂಕರ ಪ್ಲಾಜಾದಲ್ಲಿನ 10×10 ಅಡಿಯ ಚಿಕ್ಕ ಕೋಣೆಯಲ್ಲಿ ಕೇವಲ ಇಬ್ಬರು ಸಿಬ್ಬಂದಿ ಅವರ ಸಹಕಾರದೊಂದಿಗೆ ಈ ಪತ್ರಿಕೆಯ ಕೆಲಸ ಆರಂಭವಾಯಿತು.

ಹಂತ ಹಂತವಾಗಿ ಪತ್ರಿಕೆ ಪ್ರಸಾರ ಸಂಖ್ಯೆ ಹೆಚ್ಚಾದಂತೆ ಕಾಲಕ್ಕನುಗುಣವಾಗಿ ಹಂತ ಹಂತವಾಗಿ ಪತ್ರಿಕೆಯ ಬೆಲೆಯನ್ನು 40, 50 ರೂ.ಗೆ ಹೆಚ್ಚಿಸಲಾಯಿತು. ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ 2009-10ರಲ್ಲಿ 1 ಲಕ್ಷ ಪ್ರತಿಗಳನ್ನು ಮುದ್ರಿಸಲಾಯಿತು. 2006ರಲ್ಲಿ Competition Visionಎಂಬ ಇಂಗ್ಲಿಷ್‌ ಮಾಸಪತ್ರಿಕೆ ಆರಂಭಿಸಲಾಯಿತು. ಇದು ರಾಜ್ಯದ ಏಕೈಕ ಇಂಗ್ಲಿಷ್‌ ಮಾಸಪತ್ರಿಕೆ ಎಂಬ ಹೆಸರು ಪಡೆಯಿತು. ನಂತರ 2005ರಲ್ಲಿ ಉದ್ಯೋಗ ಮಾಹಿತಿ ನೀಡುವ ಉದ್ಯೋಗ ವಾರ್ತೆ ಪಾಕ್ಷಿಕ ಪತ್ರಿಕೆ ಆರಂಭಿಸಲಾಯಿತು.

ಆನಂತರ 2008ರ ಆಗಸ್ಟ್‌ನಲ್ಲಿ ಅಧ್ಯಯನ ಸಾಮಗ್ರಿಗಳಿಗಾಗಿಯೇ ಒಂದು ಪತ್ರಿಕೆ ಆರಂಭಿಸುವ ಚಿಂತನೆ ಮೂಡಿತು. ಅದರ ಪ್ರತಿಫಲವೇ ಸ್ಟಡಿ ಪ್ಲಾನರ್‌ ಮಾಸಪತ್ರಿಕೆ. ಈ ಪತ್ರಿಕೆಗೂ ಲಕ್ಷಾಂತರ ಓದುಗರಿಂದ ಪ್ರಶಂಸೆ ವ್ಯಕ್ತವಾಯಿತು. ಆನಂತರ ಇದರೊಂದಿಗೆ ಆರಂಭಿಸಲಾದ ಪ್ರಾಕ್ಟೀಸ್‌ ಟೆಸ್ಟ್‌ ಸಿರೀಸ್‌ (2012), ಸ್ಫೂರ್ತಿ ಸಿಂಚನ (ತ್ತೈಮಾಸಿಕ), ಜ್ಞಾನ ಸಂಗಾತಿ ಮುಂತಾದ ಪತ್ರಿಕೆಗಳು ಸಂಸ್ಥೆಯ ಯಶಸ್ಸಿನಲ್ಲಿ ಪಾಲುದಾರರಾಗಿವೆ. ಕಾರಣಾಂತರಗಳಿಂದ ಕೆಲ ಪತ್ರಿಕೆಗಳನ್ನು ಮುಂದುವರಿಸಲಾಗಿಲ್ಲ.

ಕೊರೊನಾ ಕರಿನೆರಳಿನಿಂದ ಸಾಕಷ್ಟು ತೊಂದರೆ ಅನುಭವಿಸಿದರೂ ಸದ್ಯಕ್ಕೆ ಸ್ಪರ್ಧಾ ಸ್ಫೂರ್ತಿ ಹಾಗೂ ಕಾಂಪಿಟಿಷನ್‌ ವಿಷನ್‌ ಪತ್ರಿಕೆಗಳನ್ನು ನಿರಂತರವಾಗಿ ಪ್ರಕಟಿಸಿಕೊಂಡು ಬರಲಾಗುತ್ತಿದೆ. ಉದ್ಯೋಗ ವಾರ್ತೆ ಪತ್ರಿಕೆ ಈಗ ಡಿಜಿಟಲ್‌ ಮಾಧ್ಯಮದಲ್ಲಿ ಪ್ರಕಟವಾಗುತ್ತಿದೆ. ಕೇವಲ ಪತ್ರಿಕೆಗಳಷ್ಟೇ ಅಲ್ಲ, ನೋಟ್ಸ್‌ ವಿಭಾಗದಿಂದ ಆಯಾ ಸ ರ್ಧಾತ್ಮಕ ಪರೀಕ್ಷೆಗಳಿಗಾಗಿ ಅನುಗುಣವಾಗಿ ಅತ್ಯುತ್ತಮ ಮಾಹಿತಿಯನ್ನೊಳಗೊಂಡ ಹಲವಾರು ಪುಸ್ತಕಗಳು, ಅಧ್ಯಯನ ಸಾಮಗ್ರಿಗಳು ಮತ್ತು ವಾರ್ಷಿಕವಾಗಿ ಕ್ಲಾಸಿಕ್‌ ಇಯರ್‌ ಬುಕ್‌ ಪ್ರಕಟಿಸಲಾಗುತ್ತಿದೆ. ಪ್ರಸ್ತುತ ಸ್ಪರ್ಧಾ ಸ್ಫೂರ್ತಿ ಹಾಗೂ ಕಾಂಪಿಟಿಷನ್‌ ವಿಷನ್‌ ಪತ್ರಿಕೆಗಳನ್ನು ನಿರಂತರವಾಗಿ ಪ್ರಕಟಿಸಿಕೊಂಡು ಬರಲಾಗುತ್ತಿದೆ. ಉದ್ಯೋಗ ವಾರ್ತೆ ಪತ್ರಿಕೆ ಈಗ ಡಿಜಿಟಲ್‌ ಮಾಧ್ಯಮದಲ್ಲಿ ಪ್ರಕಟವಾಗುತ್ತಿದೆ.

ಮಾದರಿ ಪರೀಕ್ಷೆ:
ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗಾಗಿ 2010ರಿಂದ ಪ್ರತಿ ಭಾನುವಾರ ಮಾದರಿ ಪರೀಕ್ಷೆಗಳನ್ನು ಆಯೋಜಿಸಲಾಗುತ್ತಿದ್ದು, ಪ್ರಸ್ತುತ ಧಾರವಾಡ, ಬೆಂಗಳೂರು, ಕಲಬುರಗಿ ಶಾಖೆಗಳಲ್ಲಿ ಮಾದರಿ ಪರೀಕ್ಷೆಗಳು ನಡೆಯುತ್ತಿವೆ. ಸಾವಿರಾರು ಪರೀಕ್ಷಾ ಆಕಾಂಕ್ಷಿಗಳು ಪ್ರತಿವಾರ ಮಾದರಿ ಪರೀಕ್ಷೆಗೆ ಹಾಜರಾಗುತ್ತಿದ್ದು, ಅನೇಕ ವಿದ್ಯಾರ್ಥಿಗಳು ಯಶಸ್ಸು ಪಡೆದು ವಿವಿಧ ಸರಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ರಜತ ಮಹೋತ್ಸವ ಪ್ರಯುಕ್ತ ಇತ್ತೀಚೆಗೆ ಡಿಸೆಂಬರ್‌ ತಿಂಗಳಲ್ಲಿ
ನಾಲ್ಕು ರವಿವಾರ ಉಚಿತ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟಾರೆ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದದ್ದು ದಾಖಲೆಯಾಗಿದೆ.

ಸಂಸ್ಥೆಯು ಪ್ರಸ್ತುತ ಧಾರವಾಡ ಅಷ್ಟೇ ಅಲ್ಲ ಬೆಂಗಳೂರು, ಕಲಬುರಗಿಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಪ್ರತಿವರ್ಷ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಅತ್ಯುತ್ತಮ ಗುಣಮಟ್ಟದ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದ ಸಾವಿರಾರು ವಿದ್ಯಾರ್ಥಿಗಳು ಯಶಸ್ವಿ ಹೊಂದಿ ವಿವಿಧ ಸರಕಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅತ್ಯುತ್ತಮ ಗುಣಮಟ್ಟದ ಆಹಾರ:
ಇಲ್ಲಿನ ಹಾಸ್ಟೇಲ್‌ನಲ್ಲಿ ವಾಸವಿರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯಕರ ಆಹಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲತೆಗಳಿಗೆ ತಕ್ಕಂತೆ ಅವರಿಗೆ ಸೌಲಭ್ಯ ಒದಗಿಸಲು ಅಲ್ಲಿನ ವಾರ್ಡನ್‌ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.

ಕ್ಲಾಸಿಕ್‌ ಪಿಯು-ಡಿಗ್ರಿ ಕಾಲೇಜ್‌:
ಕ್ಲಾಸಿಕ್‌ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ನಂತರ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳನ್ನೊಳಗೊಂಡ ಕ್ಲಾಸಿಕ್‌ ಪಿಯು ಕಾಲೇಜ್‌ನ್ನು 2017ರಲ್ಲಿ ಆರಂಭಿಸಲಾಗಿದೆ. ಇಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಪಿಯುಸಿ ಉತ್ತಮ ಶ್ರೇಣಿಯಲ್ಲಿ ಪಾಸಾದ ಅಭ್ಯರ್ಥಿಗಳು ಬೇರೆ ಕಡೆ ಹೋಗುವ ಬದಲು ಇಲ್ಲಿಯೇ ಮುಂದುವರಿಸುವ ಉದ್ದೇಶದಿಂದ ಕ್ಲಾಸಿಕ್‌ ಪದವಿ ಕಾಲೇಜನ್ನು 2019ರಲ್ಲಿ ಆರಂಭಿಸಲಾಗಿದೆ. ಇಲ್ಲಿ ದೈನಂದಿನ ಪಠ್ಯ ಬೋಧನೆ ಜತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಸಹಿತ ಇಂಟಿಗ್ರೇಟೆಡ್‌ ಕೋರ್ಸ್‌ ನೀಡಲಾಗುತ್ತಿದೆ. ಇದರಿಂದ ಇಲ್ಲಿ ಪದವಿ ಪಡೆದು ಹೊರ ಬರುವ ವಿದ್ಯಾರ್ಥಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ವಿದ್ಯುನ್ಮಾನ ಮಾಧ್ಯಮ ಕ್ಷೇತ್ರ(ಸಾಮಾಜಿಕ ಜಾಲತಾಣ)
ವಿದ್ಯುನ್ಮಾನ ಮಾಧ್ಯಮದಲ್ಲೂ ಸಂಸ್ಥೆ ತನ್ನ ಛಾಪು ಮೂಡಿಸಿದ್ದು ಆಗಸ್ಟ್‌ 26, 2020 ರಂದು ಕ್ಲಾಸಿಕ್‌ ಎಜುಕೇಷನ್‌ ಎಂಬ ಯೂಟ್ಯೂಬ್‌ ಚಾನಲ್‌ ಆರಂಭಿಸಲಾಗಿದೆ. ಈ ಚಾನೆಲ್‌ 3ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, 2 ಕೋಟಿ ವೀಕ್ಷಣೆಗಳನ್ನು ಹೊಂದಿ ದಾಖಲೆ ನಿರ್ಮಿಸಿದೆ. ಇದರೊಂದಿಗೆ ಸಂಸ್ಥೆ ಟೆಲಿಗ್ರಾಮ್‌ ಚಾನಲ್‌, ಕ್ಲಾಸಿಕ್‌ ಎಜುಕೇಶನ್‌ ಆ್ಯಪ್‌ ಮೂಲಕ ನಿರಂತರವಾಗಿ ಅಧ್ಯಯನ ಸಾಮಗ್ರಿ, ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಸ್ವಯಂ ಅಧ್ಯಯನಕ್ಕೆ ನೆರವಾಗುತ್ತಿದೆ.

ಕ್ಲಾಸಿಕ್‌ ಹಾಸ್ಟೆಲ್‌:
ಕ್ಲಾಸಿಕ್‌ ಸ್ಟಡಿ ಸರ್ಕಲ್‌ನಲ್ಲಿ ಕೋಚಿಂಗ್‌ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಏಳೆಂಟು ಪ್ರತ್ಯೇಕ ಹಾಸ್ಟೇಲ್‌ಗ‌ಳಿದ್ದು ಅಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿದ್ದಾರೆ. ಈ ಹಾಸ್ಟೇಲ್‌ ಗಳು ಸುಸಜ್ಜಿತವಾಗಿದ್ದು ಎಲ್ಲ ಮೂಲ ಸೌಲಭ್ಯ ಹೊಂದಿವೆ. ಇಲ್ಲಿ ವಾಸವಿರುವ ವಿದ್ಯಾರ್ಥಿಗಳನ್ನು ಪ್ರತಿದಿನ ಕ್ಲಾಸ್‌ಗಳಿಗೆ ತಂದು ಬಿಡಲು, ಮರಳಿ ಹಾಸ್ಟೇಲ್‌ಗೆ ಬಿಡಲು ಬಸ್‌ಗಳ ಸೌಲಭ್ಯಗಳಿವೆ. 24×7 ಗ್ರಂಥಾಲಯವಿದ್ದು ವಿವಿಧ ಪುಸ್ತಕಗಳು ಇಲ್ಲಿ ಲಭ್ಯವಿವೆ.

ಸಾಮಾಜಿಕ ಕಾರ್ಯಗಳು
ಕ್ಲಾಸಿಕ್‌ ಸಂಸ್ಥೆಯಿಂದ ಹಲವಾರು ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಲವಾರು ಸರಕಾರಿ, ಖಾಸಗಿ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸಿ ವಾಹನ ಸೌಲಭ್ಯ, ವಸತಿ ಸೌಲಭ್ಯ ನೀಡಲಾಗುತ್ತಿದೆ. ಅರೆ ಸರ್ಕಾರಿ ಹಾಗೂ ಮಠಮಾನ್ಯಗಳ ಸಾರ್ವಜನಿಕ ಕಾರ್ಯಕ್ರಮಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ಮತ್ತು ವಾಹನ ಸೌಲಭ್ಯ ನೀಡುತ್ತ ಬರಲಾಗಿದೆ. ಅತಿವೃಷ್ಟಿ, ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಆಹಾರ ವಿತರಿಸುವುದು, ವಾಹನ ಸೌಲಭ್ಯ ಕಲ್ಪಿಸುವುದು, ಆರೋಗ್ಯ ಸೇವೆ ಕಲ್ಪಿಸುವುದು ಮುಂತಾದ ಜನೋಪಕಾರಿ ಕಾರ್ಯ ಕೈಗೊಳ್ಳಲಾಗಿದೆ. ಕೋವಿಡ್‌-19 ಲಾಕ್‌ಡೌನ್‌ ಸಂದರ್ಭದಲ್ಲಿ ಸಂತ್ರಸ್ತರಿಗೆ ಆಹಾರ ಕಿಟ್‌ ವಿತರಿಸಲಾಗಿದೆ. ಇತ್ತೀಚೆಗೆ ಸಸಿ ನೆಡುವ ಕಾರ್ಯಕ್ರಮ, ಕಿವುಡ ಮೂಗ ಮಕ್ಕಳಿಗೆ ಹಾಸಿಗೆ ಹೊದಿಕೆ ವಿತರಣೆ, ವೃದಾಟಛಿಶ್ರಮಕ್ಕೆ ಹಾಸಿಗೆ ಹೊದಿಕೆ ವಿತರಣೆ, ಗಾಳಿಪಟ ಉತ್ಸವ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಸರಕಾರಿ ಶಾಲಾ ಬಡ ಮಕ್ಕಳಿಗೆ ಉಚಿತ ನೋಟ್‌ ಬುಕ್‌ ವಿತರಣೆ ಹೀಗೆ ಹಲವು ಜನೋಪಯೋಗಿ ಕಾರ್ಯಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.

ಶೈಕ್ಷಣಿಕ ಕ್ಷೇತ್ರ:ಕ್ಲಾಸಿಕ್‌ ಇಂಟರ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌
ಶೈಕ್ಷಣಿಕ ಕ್ಷೇತ್ರದಲ್ಲೂ ಕ್ಲಾಸಿಕ್ ಸಂಸ್ಥೆ ತನ್ನದೇ ಆದ ಛಾಪು ಮೂಡಿಸಿದೆ. 2009-2010ರಲ್ಲಿ Pre-Primary school ಕ್ಲಾಸಿಕ್ ಲಿಟ್ಲ್ ಬಡ್ಸ್ ಶಾಲೆ ಆರಂಭಿಸಿ ನೂರಾರು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಅಮೆರಿಕನ್ ಶೈಲಿಯ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. 1ರಿಂದ 10ನೇ ತರಗತಿವರೆಗಿನ ಶಿಕ್ಷಣ ಇಲ್ಲಿ ನೀಡಲಾಗುತ್ತಿದೆ. ಕ್ಲಾಸಿಕ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಐಸಿಎಸ್ ಸಿ ಸಿಲೇಬಸ್ ಹೊಂದಿದ್ದು, ಇಂಥ ಪಠ್ಯಕ್ರಮ ಇರುವ ಧಾರವಾಡದ ಏಕೈಕ ಶಾಲೆಯಾಗಿದೆ. ಇಲ್ಲಿ ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಉತ್ತಮ ವ್ಯವಸ್ಥಿತ, ಶಿಸ್ತುಬದ್ಧ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ 100ಕ್ಕೂ ಹೆಚ್ಚು ಬೋಧನಾ ಸಿಬ್ಬಂದಿ ಇದ್ದು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿರಂತರ ಶ್ರಮ ವಹಿಸುತ್ತಿದ್ದಾರೆ. ಮಕ್ಕಳಿಗಾಗಿ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ವಿಶಾಲವಾದ ಆಟದ ಮೈದಾನವಿದ್ದು, ಸಕಲ ಸೌಲಭ್ಯ ಹೊಂದಿದೆ. ಈ ಶಾಲೆಯಲ್ಲಿ ನುರಿತ ಶಿಕ್ಷಕ-ಶಿಕ್ಷಕಿಯರಿದ್ದು ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ್ದಾರೆ. ಕೇವಲ ಪಠ್ಯ ಚಟುವಟಿಕೆಗಳಲ್ಲಿ ಮಾತ್ರವಲ್ಲ ಕ್ರೀಡಾಕೂಟ, ಸಂಗೀತ, ನೃತ್ಯ, ವಿವಿಧ ಸ್ಪರ್ಧೆಗಳನ್ನು ಆಗಾಗ ಏರ್ಪಡಿಸಲಾಗುತ್ತಿದೆ. ಇಲ್ಲಿಯ ವಿದ್ಯಾರ್ಥಿಗಳು ವಿವಿಧ ಆಟೋಟಗಳಲ್ಲಿ ಭಾಗವಹಿಸಿ ಸಾಕಷ್ಟು ಪ್ರಶಸ್ತಿಗಳನ್ನು ತಂದು ಕೊಟ್ಟಿದ್ದಾರೆ. ವಿದ್ಯಾರ್ಥಿಗಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಪಿಕ್ ಅಪ್ ಡ್ರಾಪ್ ನೀಡಲು 50ಕ್ಕೂ ಹೆಚ್ಚು ಬಸ್ ಗಳಿದ್ದು ನುರಿತ ಚಾಲಕರನ್ನು ಹೊಂದಿದೆ. ಸಮಯಕ್ಕೆ ಸರಿಯಾಗಿ ಎಲ್ಲರೂ ಕಾರ್ಯ ನಿರ್ವಹಿಸಿ ಪಾಲಕರ ಪ್ರಶಂಸೆಗೆ ಕಾರಣರಾಗಿದ್ದಾರೆ.

ಪ್ರಶಸ್ತಿಗಳು-ಸನ್ಮಾನಗಳು:
ಶ್ರೀ ಲಕ್ಷ್ಮಣ ಎಸ್‌. ಉಪ್ಪಾರ ಅವರ ಸೇವೆಯನ್ನು ಗಮನಿಸಿ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಮನಸೂರ ಪ್ರಶಸ್ತಿ, ಭಗೀರಥ ಪ್ರಶಸ್ತಿ ಸೇರಿದಂತೆ 20ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಿಂದ ಉತ್ತರ ಕರ್ನಾಟಕ ಸಾಧಕ ಪ್ರಶಸ್ತಿ ನೀಡಲಾಗಿದೆ. ಜತೆಗೆ ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ 24×7 ಚಾನೆಲ್‌ನಿಂದ ಉತ್ತರ ಕರ್ನಾಟಕ ಬಿಸಿನೆಸ್‌ ಅವಾರ್ಡ್‌ ಹಾಗೂ ವಿಜಯವಾಣಿ, ದಿಗ್ವಿಜಯ ಚಾನಲ್‌ನವರು ನೀಡುವ ವಿಜಯರತ್ನ ಪ್ರಶಸ್ತಿಯನ್ನು ಶ್ರೀ ಲಕ್ಷ್ಮಣ ಎಸ್‌. ಉಪ್ಪಾರ ಅವರಿಗೆ ಪ್ರದಾನ ಮಾಡಲಾಗಿದೆ. ಜತೆಗೆ ಇವರ 25 ವರ್ಷಗಳ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಜನವರಿ 2022ರಲ್ಲಿ ಇವರನ್ನು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ನಿರ್ದೇಶಕರನ್ನಾಗಿ ಮೂರು ವರ್ಷದ ಅವಧಿಗೆ ನೇಮಕ ಮಾಡಿದೆ.ಇಷ್ಟೆಲ್ಲಾ ಸಾಧನೆ ಮಾಡಿದ ಶ್ರೀ ಲಕ್ಷ್ಮಣ ಎಸ್‌ ಉಪ್ಪಾರ ಅವರಿಗೆ ಇನ್ನೂ ಸಾಧಿಸುವ ಛಲವಿದೆ. ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹಂಬಲವಿದೆ. ಆ ನಿಟ್ಟಿನಲ್ಲಿ ಅವರು ಪ್ರಯತ್ನ ನಡೆಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next