Advertisement

ಧಾರವಾಡ: ಕುವೆಂಪು ಕಾದಂಬರಿಗಳಲ್ಲಿದೆ ಸೌಂದರ್ಯದ ಅನುಭೂತಿ

06:23 PM Jun 20, 2023 | Team Udayavani |

ಧಾರವಾಡ: ಕುವೆಂಪು ಅವರ ಕಾದಂಬರಿಗಳಲ್ಲಿ ನಿಸರ್ಗದ ನೆಲೆ ಹಾಗೂ ಹಿನ್ನೆಲೆಯನ್ನು ಮನಮೋಹಕವಾಗಿ ಚಿತ್ರಿಸಲಾಗಿದ್ದು, ಅಲ್ಲಿ ಸೌಂದರ್ಯದ ಅನುಭೂತಿ ಇದೆ ಎಂದು ನಿಗದಿ ಸರಕಾರಿ ಪಿಯು ಮಹಾವಿದ್ಯಾಲಯದ ಉಪನ್ಯಾಸಕ ಡಾ| ಶ್ರೀಧರ ಹೆಗಡೆ ಭದ್ರನ್‌ ಹೇಳಿದರು.

Advertisement

ಕವಿಸಂನಲ್ಲಿ ರಶ್ಮಿ ಮಂಜುನಾಥ ನಾಯಕ ಸ್ಮರಣೆಯ ದತ್ತಿ ಕಾರ್ಯಕ್ರಮದಲ್ಲಿ ಕುವೆಂಪು ಕಾದಂಬರಿಯಲ್ಲಿ ನಿಸರ್ಗ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಪ್ರಕೃತಿ ಸೌಂದರ್ಯದ ಮಧ್ಯದಲ್ಲಿ ಹುಟ್ಟಿ ಬೆಳೆದಿದ್ದರಿಂದ ಸಹಜವಾಗಿ ತಮ್ಮ ಎರಡು ಕಾದಂಬರಿಗಳಲ್ಲಿ ನಿಸರ್ಗದ
ರಮಣೀಯತೆಯನ್ನು ಮನಮೋಹಕವಾಗಿ ಚಿತ್ರಿಸಿದ್ದಾರೆ. ನಿಸರ್ಗವೇ ಪ್ರಧಾನ ಅಂಶವಾದ ಈ ಕಾದಂಬರಿಗಳಲ್ಲಿ ಸೂರ್ಯೋದಯ, ಮಳೆಗಾಲದ ದೃಶ್ಯ, ಮಂಜಿನ ರಾಶಿ, ಕಾಡುಪ್ರಾಣಿಗಳು, ನದಿ, ಅರಣ್ಯಗಳ ಸನ್ನಿವೇಶಗಳನ್ನು ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಕಾಡಿನ ಮಧ್ಯದ ಜನರ ಬದುಕು ಸಂಕೀರ್ಣ. ಅವರು ಪರಿಸರದೊಂದಿಗೆ ಸಾಮರಸ್ಯದಿಂದ, ಹೊಂದಾಣಿಕೆಯಿಂದ ಬದುಕುವ ರೀತಿಯ ಚಿತ್ರಣವನ್ನು ಮನಮೋಹಕವಾಗಿ ಚಿತ್ರಿಸಿದ್ದಾರೆ.ಅವರ ಕಾದಂಬರಿಗಳಲ್ಲಿ ನಿಸರ್ಗ ಒಂದು ತತ್ವವಾಗಿ ಪ್ರವಹಿಸಿದೆ. ಕೆಲವು ಸ್ಥಳಗಳ ವಿಹಂಗಮ ನೋಟಗಳು ಅವರ ಕಾದಂಬರಿಗಳಲ್ಲಿವೆ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಮನೋಹರ ಜಿ. ನಾಯಕ, ಧಾರವಾಡ ಶಹರ ಕ್ಷೇತ್ರ ಶಿಕ್ಷಣಾ ಧಿಕಾರಿ ಉಮೇಶ ಬಮ್ಮಕ್ಕನವರ ಮಾತನಾಡಿದರು. ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ಕೆ.ಎಚ್‌. ನಾಯಕ ದತ್ತಿ ಆಶಯ ಕುರಿತು ಮಾತನಾಡಿದರು.

ಶಂಕರ ಕುಂಬಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಶಹರ ವಲಯದ ಬಿ.ಆರ್‌.ಸಿ. ಸಂಯೋಜಕರಾದ ಜಾವೂರ ಇದ್ದರು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಹರದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ ವಿತರಿಸಲಾಯಿತು.

Advertisement

ಶಂಕರ ಹಲಗತ್ತಿ, ಎಂ.ಎಂ. ಚಿಕ್ಕಮಠ, ಡಾ| ಬಾಳಣ್ಣಾ ಶೀಗಿಹಳ್ಳಿ, ನಿಂಗಣ್ಣ ಕುಂಟಿ, ಡಾ| ಬಾಳಪ್ಪಾ ಚಿನಗುಡಿ, ಬೇಬಿ ನಾಯಕ, ಸವಿತಾ ಮನೋಹರ ನಾಯಕ, ಪದ್ಮಾವತಿ ಶೀಗಿಹಳ್ಳಿ, ಅಶೋಕ ಬಿ. ನಾಯಕ, ಡಾ| ವಿಲಾಸ ಕುಲಕರ್ಣಿ, ಡಾ| ವಿಶ್ವನಾಥ ಕೊರವಿ, ಆರ್‌.ಜಿ. ತಿಮ್ಮಾಪುರ, ಬಿ.ಬಿ. ನಾಯಕ,ಮಹಾಂತೇಶ ನರೇಗಲ್‌, ಡಾ| ಮಿಹಿರ್‌ ನಾಯಕ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ| ಜಿನದತ್ತ ಹಡಗಲಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಧನವಂತ ಹಾಜವಗೋಳ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next