ಧಾರವಾಡ: ಶ್ರೀರಾಮ ಹಾಗೂ ಕೃಷ್ಣರ ಜೀವನ ನಮಗೆ ಇಂದಿಗೂ ಆದರ್ಶವಾಗಿದೆ, ಪ್ರಭಾವವೂ ಬೀರಿದೆ ಎಂದು ಶಿಕ್ಷಣ ತಜ್ಞ, ವಾಗ್ಮಿ ಡಾ| ಗುರುರಾಜ ಕರ್ಜಗಿ ಹೇಳಿದರು.
Advertisement
ನಗರದ ವಿದ್ಯಾವರ್ಧಕ ಸಂಘದಲ್ಲಿ ಸ್ನೇಹ ಪ್ರತಿಷ್ಠಾನ ಆಯೋಜಿಸಿದ್ದ ವಸಂತ ವ್ಯಾಖ್ಯಾನ ಮಾಲೆ ಉಪನ್ಯಾಸ ಸರಣಿಯಲ್ಲಿ “ಭಗವಾನ್ ಶ್ರೀ ಕೃಷ್ಣ’ನ ಕುರಿತು ಅವರು ಉಪನ್ಯಾಸ ನೀಡಿದರು. ಕೃಷ್ಣನ ಚಾರಿತ್ರ್ಯದ ಕುರಿತು ಅತಿರೇಕ ಹಾಗೂ ಅವಹೇಳನವೂ ಇರುವುದು ಖೇದಕರ. ಆದರೆ ಹೋಲಿಕೆ ಇಲ್ಲದ ವ್ಯಕ್ತಿತ್ವ ಕೃಷ್ಣನದ್ದು. ಅವನು ಎಲ್ಲ ದ್ವಂದ್ವಗಳನ್ನು ಮೀರಿದವನು.
Related Articles
ಸ್ನೇಹ ಪ್ರಕಾಶನ, ವರಧನ್ವಂತರಿ ಫೌಂಡೇಶನ್ ಟ್ರಸ್ಟ್, ಅಖೀಲ ಭಾರತ ಮಾಧ್ವ ಮಹಾ ಮಂಡಳ ಆಯೋಜಿಸಿದ್ದ ವಸಂತ ವ್ಯಾಖ್ಯಾನ ಮಾಲೆ ಉಪನ್ಯಾಸ ಸರಣಿಯಲ್ಲಿ ಮಧ್ವಾಚಾರ್ಯರ ಕುರಿತು ಮಾತನಾಡಿದ ಡಾ| ಗುರುರಾಜ ಕರ್ಜಗಿ, ಜೀವ ಸೃಷ್ಟಿಯಾದರೆ ಅದಕ್ಕೊಬ್ಬ ಸೃಷ್ಟಿಕರ್ತ ಇರಲೇಬೇಕು. ನಾವು ಭಗವಂತನ ಹತ್ತಿರ ಹೋಗಬಹುದೇ ಹೊರತು ಭಗವಂತನಾಗಲು
ಸಾಧ್ಯವಿಲ್ಲ. ಇದೇ ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತ ಸಿದ್ಧಾಂತ ಎಂದರು.
Advertisement
ಬಾಲ್ಯದಿಂದಲೇ ಮಧ್ವಾಚಾರ್ಯರು ಅನೇಕ ಪವಾಡಗಳಿಗೆ ಕಾರಣರಾದವರು. ಭೀಮಸೇನನ ಅವತಾರವಾಗಿದ್ದರಿಂದ ಶಾರೀರಿಕವಾಗಿಯೂ ಸದೃಢರಾಗಿದ್ದರು. ಬಾಲ್ಯದ ವಾಸುದೇವ ಗುರುಕುಲದ ವ್ಯಾಸಂಗದಲ್ಲೂ ಬಹಳ ಚುರುಕು. ಮುಂದೆ ಉಡುಪಿಯಲ್ಲಿ ಅಚ್ಯುತ ಪ್ರೇಶ್ಚ ಎಂಬ ಋಷಿಯ ಶಿಷ್ಯತ್ವ ಪಡೆದರು. ನಂತರ ಸನ್ಯಾಸ ಸ್ವೀಕರಿಸಿ ಪೂರ್ಣಪ್ರಜ್ಞ ತೀರ್ಥರು ಎಂಬ ಹೆಸರು ಪಡೆದಾಗ ಅವರಿಗೆ ಕೇವಲ 10 ವರ್ಷ ವಯಸ್ಸು. ಮರುವರ್ಷವೇ ವೇದಾಂತ ಪೀಠದ ಅಧಿಪತಿಗಳಾಗಿ ಆನಂದ ತೀರ್ಥರು ಎಂಬ ಹೆಸರು ಪಡೆದು, ಮಧ್ವಾಚಾರ್ಯರೆಂದೇ ಲೋಕವಿಖ್ಯಾತರಾದರು. ತತ್ವಜ್ಞಾನ ಹಾಗೂ ತಂತ್ರಶಾಸ್ತ್ರ ಎರಡನ್ನು ಅರ್ಥೈಸಿ ಕೊಂಡವರು ಪರಿಪೂರ್ಣ ಗುರುವಾಗಬಲ್ಲರು.
ಅಂತಹ ಗುರು ಮಧ್ವಾಚಾರ್ಯರಾಗಿದ್ದರು ಎಂದರು. ಆಲೂರು ವೆಂಕಟರಾವ್ ಅವರು ರಚಿಸಿದ “ಹ್ಯಾಂಡಬುಕ್ ಆಫ್ ಮಧ್ವ ಫಿಲಾಸಫಿ’ ಕೃತಿ ಬಿಡುಗಡೆಗೊಳಿಸಲಾಯಿತು. ಸ್ನೇಹ ಪ್ರಕಾಶನದ ಅಧ್ಯಕ್ಷ ಹರ್ಷ ಡಂಬಳ, ವರಧನ್ವಂತರಿ ಫೌಂಡೇಶನ್ಅಧ್ಯಕ್ಷ ಡಾ| ಪ್ರಮೋದ ಗಾಯಿ, ದೀಪಕ ಆಲೂರು, ಎಚ್.ವಿ. ಕಾಖಂಡಕಿ ಇನ್ನಿತರರಿದ್ದರು.