Advertisement

Dharwad: ಶ್ರಾವಣ ಮನುಷ್ಯನ ಉದ್ಧಾರಕ್ಕೆ ಸಾಕ್ಷಿಯಾಗಲಿ-ಶಿವಾಚಾರ್ಯ ಸ್ವಾಮೀಜಿ

05:49 PM Aug 18, 2023 | Team Udayavani |

ಧಾರವಾಡ: ಶ್ರಾವಣ ಮಾಸ ಮನುಷ್ಯನ ಉದ್ಧಾರಕ್ಕೆ, ಸಾರ್ಥಕತೆಗೆ ಸಾಕ್ಷಿಯಾಗಬೇಕು ಮತ್ತು ಜೀವನಕ್ಕೆ ಸನ್ಮಾರ್ಗ ತೋರಬೇಕು
ಎಂದು ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಕೊಪ್ಪದಕೇರಿ ಶಿವಾಲಯದಲ್ಲಿ ಶಿವಾಲಯ ಸೇವಾ ಸಮಿತಿಯು ಶ್ರಾವಣ ಮಾಸದ ನಿಮಿತ್ತ ಆಯೋಜಿಸಿರುವ ಆಧ್ಯಾತ್ಮಿಕ
ಪ್ರವಚನದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಧುನಿಕ ಜೀವನದಲ್ಲಿ ಮನುಷ್ಯ ಸಂಸ್ಕೃತಿ, ಸಂಸ್ಕಾರ, ಧರ್ಮದಿಂದ ವಿಮುಖನಾಗಿ, ವಿಕಾರವಾದ ಮನಸ್ಸು ಹೊಂದುತ್ತಿದ್ದಾನೆ. ಭಕ್ತರಿಂದ, ಧರ್ಮಾಧಿಕಾರಿಗಳಿಂದ ನಿರಂತರ ಧರ್ಮ ಸೇವೆ ನೆರವೇರಬೇಕು. ಧರ್ಮದಿಂದ ಮಾತ್ರ ಸಮಾಜ ಉಳಿಯಲು ಸಾಧ್ಯವಿದೆ. ಶ್ರಾವಣ ಮಾಸದಲ್ಲಿ ಆಲಿಸಿದ ಜ್ಞಾನ, ಆಚರಿಸಿದ ನೀತಿ, ಆಚಾರಗಳನ್ನು ಭಾದ್ರಪದ ಮಾಸದಲ್ಲಿ ಗಟ್ಟಿಗೊಳಿಸಿ, ವರ್ಷಪೂರ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಿವಾಲಯ ಸೇವಾ ಸಮಿತಿ ಅಧ್ಯಕ್ಷ ಡಾ| ಎಸ್‌.ಆರ್‌.ರಾಮನಗೌಡರ ಪ್ರಾಸ್ತಾವಿಕ ಮಾತನಾಡಿ, ಶ್ರಾವಣ ಅಂಗವಾಗಿ ಶಿವಾಲಯ ಸೇವಾ ಸಮಿತಿಯಿಂದ ಪ್ರತಿದಿನ ಬೆಳಗ್ಗೆ 6ರಿಂದ 8 ಗಂಟೆವರೆಗೆ ಶಿವಾಲಯದಲ್ಲಿ ಶಿವನಿಗೆ ನಿರಂತರ ರುದ್ರಾಭಿಷೇಕ,
ಮಹಾಮಂಗಳಾರತಿ ಮಾಡಲಾಗುತ್ತದೆ.

ಆಧ್ಯಾತ್ಮಿಕ ಪ್ರವಚನ ನಿರಂತರವಾಗಿ ಒಂದು ತಿಂಗಳು ನಡೆಯುತ್ತದೆ ಎಂದು ತಿಳಿಸಿದರು. ಶಿವಾಲಯ ಸೇವಾಸಮಿತಿ ಕಾರ್ಯದರ್ಶಿ ಬಸವರಾಜ ಕೌಜಲಗಿ ಸ್ವಾಗತಿಸಿದರು. ಶಿವಾನಿ ಚೌಕಿಮಠ ಪ್ರಾರ್ಥಿಸಿದರು. ಶ್ರೀಕಾಂತ ಪುರ್ಲಿ ನಿರೂಪಿಸಿದರು. ಪ್ರೊ| ಬಸಯ್ಯ ಶಿರೋಳ ವಂದಿಸಿದರು. ಸಿ.ಎಸ್‌. ಪಾಟೀಲ, ಬಸವರಾಜ ಕಡಕೋಳ, ಬಸವರಾಜ ಕಂಚನಹಳ್ಳಿ, ಜಯಶ್ರೀ
ಪಾಟೀಲ, ಪ್ರೇಮಲತಾ ಸೇರಿದಂತೆ ಎಂ.ಬಿ. ನಗರ ಹಾಗೂ ಕೊಪ್ಪದಕೇರಿ ಗಣ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next