Advertisement

ಧಾರವಾಡ ಸಾಹಿತ್ಯ ಸಮ್ಮೇಳನ ಮುಂದಕ್ಕೆ ? 

07:44 AM Oct 18, 2018 | Team Udayavani |

ಧಾರವಾಡ: ನಗರದಲ್ಲಿ ಮುಂಬರುವ ಡಿಸೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ಅಖೀಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡುವ ಸಾಧ್ಯತೆಗಳಿವೆ. ಜಿಲ್ಲಾ ಉಸ್ತುವಾರಿ ಸಚಿವ ಆರ್‌. ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಾಹಿತಿಗಳು 2019ರ ಜನವರಿಯಲ್ಲಿ ಸಮ್ಮೇಳನ ನಡೆಸಲು ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲಹೆ ನೀಡಿದ್ದಾರೆ. 

Advertisement

ನಾಡೋಜ ಡಾ.ಪಾಟೀಲ ಪುಟ್ಟಪ್ಪ ಮಾತನಾಡಿ, ವಿದ್ಯಾರ್ಥಿಗಳ ಪರೀಕ್ಷೆ ಸಮಯ ನೋಡಿಕೊಂಡು ಸಾಹಿತ್ಯ ಸಮ್ಮೇಳನದ ಸಮಯ, ದಿನಾಂಕ ನಿಗದಿ ಮಾಡಬೇಕು. ಅವಸರದಲ್ಲಿ ಸಮ್ಮೇಳನ ಆಯೋಜಿಸಬಾರದು. ಅರ್ಥಪೂರ್ಣವಾಗಿ ಆಚರಿಸಬೇಕು.ಯಾರೂ ತರಾತುರಿ ಮಾಡಬಾರದು ಎಂದು ಸಲಹೆ ನೀಡಿದರು. ಇದಕ್ಕೆ ಸಂಸದ ಪ್ರಹ್ಲಾದ ಜೋಶಿ, ಹಿರಿಯ ವಕೀಲರಾದ ಪ್ರಕಾಶ ಉಡಿಕೇರಿ, ಡಾ.ರಾಜೇಶ್ವರಿ ಮಹೇಶ್ವರಯ್ಯ, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಮಾತನಾಡಿ ಮುಂದೂಡುವುದೇ ಸೂಕ್ತ ಎಂದು ಸಲಹೆ ನೀಡಿದರು. ಸರ್ಕಾರದಿಂದ ಸೂಕ್ತ ನೆರವು ಸಿಗಲಿದೆ. ಸಮ್ಮೇಳನಕ್ಕೆ ಕುರಿತಂತೆ ಹಿರಿಯ ಸಾಹಿತಿಗಳು, ಕಸಾಪ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಜತೆ ಒಂದು ವಾರದೊಳಗೆ ಸಭೆ ನಡೆಸಿ, ನೀಲನಕ್ಷೆ ತಯಾರಿಸಿ ತಮಗೆ ತಲುಪಿಸಬೇಕು ಎಂದು ಸಚಿವ ದೇಶಪಾಂಡೆ ಸೂಚಿಸಿದರು. ಪೂರ್ವಸಿದಟಛಿತೆಗೂ ಗಮನ ನೀಡುವಂತೆ ಸಲಹೆಯಿತ್ತರು.
 

Advertisement

Udayavani is now on Telegram. Click here to join our channel and stay updated with the latest news.

Next