ಧಾರವಾಡ: ಎನ್.ಡಿ.ಆರ್.ಎಫ್ ನಿಯಮದ ಅನ್ವಯ ರಾಜ್ಯದ ರೈತರಿಗೆ ಬರ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್ ಪಾಟೀಲ್ ನಡಹಳ್ಳಿ ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆದಾಗಿನಿಂದ ರಾಜ್ಯದಲ್ಲಿ ಬರಗಾಲ ಬಂದಿದೆ. ರಾಜ್ಯದ ಎಲ್ಲಾ ಮಂತ್ರಿಗಳು ರೈತರ ಹೊಲಕ್ಕೆ ಭೇಟಿ ಕೊಟ್ಟಿಲ್ಲ. ಸರ್ಕಾರ ಬರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.
ಸರ್ಕಾರಕ್ಕೆ ನಾಚಿಕೆಯಿಲ್ಲ. 2 ರೂ. ಕೆಜಿ ಮೇವು ಕೊಳ್ಳಲು ರೈತರಿಗೆ ಆಗುತ್ತಿಲ್ಲ. ಇದು ಬರ ನಿರ್ವಹಣೆ ಕ್ರಮ ಅಲ್ಲ. ದನಕರುಗಳಿಗೆ ಕುಡಿಯುವ ನೀರಿಲ್ಲ. ಬೆಳೆ ನಷ್ಟದ ಹಾನಿ ಅಧ್ಯಯನ ಮಾಡುತ್ತಿಲ್ಲ ಎಂದರು.
ಮಾವು ಬೆಳೆಗೆ 4000 ರೂ ವಿಮೆ ಕೊಟ್ಟಿದೆ. ಇದಕ್ಕೆ 3000 ಪರಿಹಾರ ನೀಡುತ್ತಿಲ್ಲ. ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ 20 ಸಾವಿರ ಬೆಳೆಹಾನಿ ನೀಡಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ 2 ಸಾವಿರ ರೂ. ಮಾತ್ರ ನೀಡುತ್ತಿದೆ. ಇದು ನಾಚಿಕೆಗೇಡಿನ ಸಂಗತಿ ಎಂದರು.
ಸಿದ್ದು ಮಂಡನೆ ಮಾಡಿದ ಎಲ್ಲಾ ಬಜೆಟ್ ಗಳು ರೈತ ವಿರೋಧಿ ಎಂದು ಆಪಾದಿಸಿದರು.
ಕಳಸಾ-ಬಂಡೂರಿ ವಿವಾದ ಮಾತುಕತೆ ಮುಖಾಂತರ ಪರಿಹಾರಕ್ಕೆ ಯತ್ನ ಮಾಡಲಾಗುವುದು. ಭವಿಷ್ಯದಲ್ಲಿ ಪರಿಹಾರ ಆಗಿಯೇ ಆಗುತ್ತದೆ ಎಂದರು.