Advertisement

Dharwad; ಅಶ್ವಿನಿ ಭಿಡೆ ಅವರಿಗೆ ಪಂಡಿತ್ ರಾಜಗುರು ರಾಷ್ಟ್ರೀಯ ಪ್ರಶಸ್ತಿ ಪ್ರದಾನ

10:25 PM Aug 24, 2023 | Team Udayavani |

ಧಾರವಾಡ : ಸ್ವರಸಾಮ್ರಾಟ ಪಂಡಿತ್ ಬಸವರಾಜ ರಾಜಗುರು ರಾಷ್ಟಿಯಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಪಂ.ಬಸವರಾಜ ರಾಜಗುರು ಅವರ 103ನೇ ಜನ್ಮದಿನಾಚರಣೆ ಅಂಗವಾಗಿ ಕೊಡ ಮಾಡುವ ಪ್ರಸಕ್ತ ಸಾಲಿನ ರಾಷ್ಟಿಯಯ ಪ್ರಶಸ್ತಿಗಳ ಪ್ರದಾನ ಸಮಾರಂಭವು ನಗರದ ಆಲೂರು ಭವನದಲ್ಲಿ ಗುರುವಾರ ಸಂಜೆ ಜರುಗಿತು.

Advertisement

1 ಲಕ್ಷ ನಗದು, ಪ್ರಶಸ್ತಿ ಫಲಕ ಒಳಗೊಂಡ 2023-24ನೇ ಸಾಲಿನ ಪಂ.ಬಸವರಾಜ ರಾಜಗುರು ರಾಷ್ಟಿಯ ಪ್ರಶಸ್ತಿಯನ್ನು ಮುಂಬೈನ ಸಂಗೀತ ಕಲಾವಿದೆ ವಿದುಷಿ ಅಶ್ವಿನಿ ಭಿಡೆ, ದೇಶಪಾಂಡೆ ಅವರಿಗೆ ಪ್ರದಾನ ಮಾಡಲಾಯಿತು. ಇನ್ನು ರಾಷ್ಟಿಯ ಯುವ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಧಾರವಾಡದ ತಬಲಾ ವಾದಕರಾದ ಉದಯ ಕುಲಕರ್ಣಿ ಹಾಗೂ ಬೆಂಗಳೂರಿನ ಗಾಯಕರಾದ ಇಮಾನ ದಾಸ್ ಅವರಿಗೆ ಯುವ ಪ್ರಶಸ್ತಿಯನ್ನು ನೀಡಲಾಯಿತು. ಈ ರಾಷ್ಟೀಯ ಯುವ ಪ್ರಶಸ್ತಿಗೆ ಆಯ್ಕೆಯಾದ ಕಲಾವಿದರಿಗೆ ತಲಾ 25,000 ರೂ. ಮೊತ್ತದ ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ವಿತರಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಗುರು ಶಿಷ್ಯರ ಪರಂಪರೆಗೆ ಬುನಾದಿ ಹಾಕಿದವರು ಸ್ವರಸಾಮ್ರಾಟ ಪದ್ಮಭೂಷಣ ಪಂ. ಬಸವರಾಜ ರಾಜಗುರು. ಸಂಗೀತ ಕ್ಷೇತ್ರದ ಮಹಾನಿಯರನ್ನು ನೆನೆಯಬೇಕು, ಸಂಗೀತ ಕ್ಷೇತ್ರಕ್ಕೆ ಧಾರವಾಡದ ಕೊಡುಗೆ ಅಪಾರವಿದೆ ಎಂದರು.

ಸ್ವರಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟೀಯ ಸ್ಮಾರಕ (ರಿ) ಟ್ರಸ್ಟ್ ನ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತಿದೇವಿ ರಾಜಗುರು, ನಿಜಗುಣ ರಾಜಗುರು, ಡಾ.ಮುದ್ದುಮೋಹನ್, ಡಾ.ಉದಯಕುಮಾರ ದೇಸಾಯಿ, ಸಂಗೀತಾ ಕಟ್ಟಿ ಇದ್ದರು. ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ನಿರೂಪಿಸಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಇನ್ನು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ನಡೆದ ಸಂಗೀತೋತ್ಸವದಲ್ಲಿ ಪ್ರಶಸ್ತಿ ಪುರಸ್ಕೃತರಾದ ವಿದುಷಿ ಅಶ್ವಿನಿ ಭಿಡೆ, ದೇಶಪಾಂಡೆ ಅವರಿಂದ ಹಿಂದೂಸ್ತಾನಿ ಶಾಸ್ತಿಯ ಗಾಯನ ಕಾರ್ಯಕ್ರಮ ಹಾಗೂ ಯುವ ಪ್ರಶಸ್ತಿ ಪಡೆದ ಕಲಾವಿದರಾದ ಉದಯ ಕುಲಕರ್ಣಿ, ಧಾರವಾಡ ಅವರಿಂದ ತಬಲಾ ಸೋಲೋ ವಾದನ ಮತ್ತು ಇಮಾನ ದಾಸ್ ಅವರ ಗಾಯನ ಕಾರ್ಯಕ್ರಮ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next