Advertisement

ರಾಜ್ಯದಲ್ಲೇ ಮೊದಲ ಆನ್‌ಲೈನ್‌ ಸಮಾಲೋಚನೆ ಕೇಂದ್ರ ಉದ್ಘಾಟನೆ

01:41 PM Apr 07, 2020 | Team Udayavani |

ಧಾರವಾಡ: ಕೋವಿಡ್‌ ಕುರಿತು ಮಾನಸಿಕ ಸಮಸ್ಯೆಗಳಿಗೆ ಸಂಬಂ ಧಿಸಿದಂತೆ ರಾಜ್ಯದಲ್ಲೆ ಮೊದಲ ಆನ್‌ಲೈನ್‌ ಸಮಾಲೋಚನೆ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸೋಮವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೋವಿಡ್‌ -19 ಕೊರೊನಾ ವೈರಸ್‌ನಿಂದ ಅನೇಕರು ಗೊಂದಲ, ಮಾನಸಿಕ ತೋಳಲಾಟ, ಸಮಸ್ಯೆಗಳಿಗೆ ಒಳಗಾಗುತ್ತಿದ್ದು, ಅವರ ನೆರವಿಗಾಗಿ ಜಿಲ್ಲಾಡಳಿತ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಡಿಮಾನ್ಸ್‌ ಸಂಸ್ಥೆ ಆವರಣದಲ್ಲಿ ಇದನ್ನು ಆರಂಭಿಸಲಾಗಿದ್ದು, ರಾಜ್ಯದ ಯಾವುದೇ ಮೂಲೆಯಿಂದ ಜನ ದೂರವಾಣಿ ಅಥವಾ ವಿಡಿಯೋ ಮೂಲಕ ಕರೆ ಮಾಡಿದರೆ ಇಲ್ಲಿನ ತಜ್ಞ ವೈದ್ಯರು ಸೂಕ್ತ ಪರಿಹಾರ-ಸಲಹೆ ನೀಡಲಿದ್ದಾರೆ. ಈ ಸೌಲಭ್ಯ ದಿನದ 24 ಗಂಟೆ ಲಭ್ಯವಿರುತ್ತದೆ ಎಂದರು.

Advertisement

ಲಾಕ್‌ಡೌನ್‌, ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಜನರಿಗೆ ಕೊರೊನಾ ಕುರಿತ ತಮ್ಮ ಸಂಶಯ, ಗೊಂದಲ, ಪರಿಹಾರ ಪಡೆಯಲು ಆಸ್ಪತ್ರೆಗಳಿಗೆ ಭೇಟಿ ನೀಡಲು ಅನುಕೂಲವಾಗುತ್ತಿಲ್ಲ. ಐಸೊಲೇಶನ್‌ ವಾರ್ಡ್‌ಗಳಲ್ಲಿ, ಕ್ವಾರಂಟೈನ್‌ ಗಳಲ್ಲಿ ಇರುವವರಿಗೆ ಹೊರಗಡೆ ಬರಲು ಸಾಧ್ಯವಿಲ್ಲ. ಅವರು ಸಹ ಕೊರೊನಾ ವೈರಸ್‌ ಕುರಿತ ಅನೇಕ ತಪ್ಪು ಮಾಹಿತಿ, ಸಂದೇಶಗಳಿಂದ ಭಯಗೊಂಡಿರುತ್ತಾರೆ. ಅವರು ಸಹ ಕರೆ ಮಾಡಿ ಸಂಶಯಗಳಿಗೆ ಮಾನಸಿಕ ತಜ್ಞ ವೈದ್ಯರಿಂದ ಪರಿಹಾರ, ತಿಳಿವಳಿಕೆ ಪಡೆಯಬಹುದು ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ್‌ ಮುನೇನಕೊಪ್ಪ,
ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್‌, ಡಿಸಿ ದೀಪಾ ಚೋಳನ್‌ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next