Advertisement
ಸೋಮಶೇಖರ್ ಚೆನ್ನಶೆಟ್ಟಿ ಎಂಬುವವರ ಮೇಲೆ ಮುಸ್ಲಿಂ ಹುಡುಗರ ಗುಂಪು ಹಲ್ಲೆ ನಡೆಸಿದ್ದು, ಈ ಆರೋಪಿಗಳನ್ನು ಬಂಧನ ಮಾಡುವಂತೆ ಆಗ್ರಹಿಸಿ ಧಾರವಾಡ ಉಪ ನಗರ ಪೊಲೀಸ್ ಎದುರು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಶುಕ್ರವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.
Related Articles
Advertisement
ಶಾಸಕ ಬೆಲ್ಲದ ದೌಡು : ಭಜರಂಗದಳ ಕಾರ್ಯಕರ್ತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಶಾಸಕ ಅರವಿಂದ ಬೆಲ್ಲದ ಅವರು, ಗೋವು ರಕ್ಷಣೆಗೆ ತೆರಳಿದ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ತಪ್ಪಿತಸ್ಥ ಎಲ್ಲ ಆರೋಪಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಶೀಘ್ರವಾಗಿ ಬಂಧಿಸಬೇಕು. ಇಲ್ಲವಾದಲ್ಲಿ ಶನಿವಾರ ಮತ್ತೆ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತರಿಗೆ ಎಚ್ಚರಿಕೆ ನೀಡಿದರು.
ಶೀಘ್ರವಾಗಿ ಕ್ರಮ ಜರುಗಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದು ಅಲ್ಲಿಂದ ನಿರ್ಗಮಿಸಿದರು.
ಮಾಜಿ ಶಾಸಕರು ಅಮೃತ ದೇಸಾಯಿ, ಹಿಂದೂ ಕಾರ್ಯಕರ್ತ ಶಿವಾನಂದ ಸತ್ತಿಗೆರಿ, ಸಂಜಯ ಕಪಟಕರ, ಶಿವು ಹೀರೆಮಠ, ವಿಜಯಾನಂದ ಶಟ್ಟಿ, ಮೋಹನ ರಾಮದುರ್ಗ, ಸುರೇಶ ಬೆದರೆ, ಪ್ರಮೋದ ಕಾರಕುನ, ಜೋತಿ ಪಾಟೀಲ, ಗೀತಾ ಪಾಟಿಲ, ಇತರಿದ್ದರು.
ಗೋವು ರಕ್ಷಕರಿಗೆ ಪೊಲೀಸರಿಂದ ರಕ್ಷಣೆ ಇಲ್ಲವಾ ? : ಬೆಲ್ಲದ ಗರಂಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಹಳೇ ಎಪಿಎಂಸಿಯಲ್ಲಿ ಅಕ್ರಮವಾಗಿ ಕಟ್ಟಿದ್ದ ಹಸುಗಳನ್ನು ರಕ್ಷಣೆ ಮಾಡಲು ಹೋಗಿದ್ದ ಗೋವು ರಕ್ಷಕ ಸೋಮಶೇಖರ್ ಚನ್ನಶೆಟ್ಟಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯ. ಗೋವು ರಕ್ಷಕರಿಗೆ ಪೊಲೀಸರು ರಕ್ಷಣೆ ನೀಡಬೇಕು. ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡುವ ಮೂಲಕ ಗೋವು ಹತ್ಯೆ ಮಾಡುವರನ್ನು ರಕ್ಷಣೆ ಮಾಡುತ್ತಿದ್ದಾರೆ. ಹಲ್ಲೆ ಮಾಡಿದ ಆರೋಪಗಳನ್ನು ತಕ್ಷಣ ಬಂಧಿಸಬೇಕು. ಗೋವು ರಕ್ಷಣೆ ಮಾಡುವ ಕಾನೂನು ಇದ್ದರೂ ಇದನ್ನು ಏಕೆ ಮಾಡುತ್ತಿಲ್ಲ ? ಎಂದ ಬೆಲ್ಲದ ತಪ್ಪತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಶನಿವಾರ ಮತ್ತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ