ಧಾರವಾಡ: ಧಾರವಾಡ ಹಾಲು ಒಕ್ಕೂಟದ 12 ನಿರ್ದೇಶಕ ಸ್ಥಾನಗಳಿಗೆ ರವಿವಾರ ಚುನಾವಣೆ ನಡೆದಿದ್ದು, 6 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಧಾರವಾಡ ಜಿಲ್ಲೆಯಿಂದ ಶಂಕರಪ್ಪ ಮುಗದ, ಗದಗ ಜಿಲ್ಲೆಯಿಂದ ಗೋವಿಂದಗೌಡ ಹಿರೇಗೌಡರ, ನೀಲಕಂಠಪ್ಪ ಶಿವಪ್ಪ ಅಸೂಟಿ, ಉತ್ತರ ಕನ್ನಡ ಜಿಲ್ಲೆಯಿಂದ ಸುರೇಶ್ಚಂದ್ರ ಹೆಗಡೆ, ಹಾವೇರಿ ಜಿಲ್ಲೆಯಿಂದ ಬಸವರಾಜ ನೀಲಪ್ಪ ಅರಬಗೊಂಡ, ಬಸನಗೌಡ ಶಿವನಗೌಡ ಮೇಲಿಮನಿ ಅವಿರೋಧ ಆಯ್ಕೆಯಾದರು.
ಚುನಾವಣೆ ಗೆದ್ದವರು:ಇನ್ನುಳಿದ 6 ಸ್ಥಾನಗಳಿಗೆ ಬೆಳಗ್ಗೆಯಿಂದ ಮತದಾನ ನಡೆಯಿತು. ಧಾರವಾಡ ಜಿಲ್ಲೆಯಿಂದ ಗೀತಾ ಸುರೇಶ ಮರಲಿಂಗಣ್ಣವರ, ಸುರೇಶ ಸೋಮಪ್ಪ ಬಣವಿ, ಹಾವೇರಿ ಜಿಲ್ಲೆಯಿಂದ ಹನುಮಂತಗೌಡ ಬಸನಗೌಡ ಭರಮಣ್ಣನವರ, ಗದಗ ಜಿಲ್ಲೆಯಿಂದ ಮಂಜುನಾಥಗೌಡ್ರ ಹನುಮಂತ್ರಗೌಡ್ರ ಪಾಟೀಲ, ಉತ್ತರ ಕನ್ನಡ ಜಿಲ್ಲೆಯ ಪರಶುರಾಮ ವೀರಭದ್ರ ನಾಯ್ಕ ಹಾಗೂ ಶಂಕರ ಪರಮೇಶ್ವರ ಹೆಗಡೆ ಜಯ ಗಳಿಸಿ ನೂತನ ನಿರ್ದೇಶಕರಾಗಿ ಆಯ್ಕೆಯಾದರು.
ಯಲ್ಲಪ್ಪ ದಾಸನಕೊಪ್ಪ ವಿರುದ್ಧ ಗೀತಾ ಮರಲಿಂಗಣ್ಣವರ 9 ಮತಗಳ ಅಂತರದಿಂದ ಜಯ ಗಳಿಸಿದರೆ, ಗಂಗಪ್ಪ ಮೂಕಪ್ಪ ಮೊರಬದ ವಿರುದ್ಧ ಸುರೇಶ ಬಣವಿ 2, ಶಿವಯೋಗಿ ಹೊಳಬಸಪ್ಪ ಕೆರೂಡಿ ವಿರುದ್ಧ ಹನುಮಂತಗೌಡ ಭರಮಣ್ಣನವರ 22, ವಿಶ್ವನಾಥ ವಿರೂಪಾಕ್ಷಪ್ಪ ಕಪ್ಪತ್ತನವರ ವಿರುದ್ಧ ಮಂಜುನಾಥಗೌಡ್ರ ಪಾಟೀಲ 1, ಲಕ್ಷ್ಮೀನಾರಾಯಣ ಕೃಷ್ಣ ಹೆಗಡೆ ವಿರುದ್ಧ ಪರಶುರಾಮ ನಾಯ್ಕ 3 ಹಾಗೂ ಪ್ರಶಾಂತ ಸುಬ್ರಾಯ ಸಭಾಹಿತ ವಿರುದ್ಧ ಶಂಕರ ಪರಮೇಶ್ವರ ಹೆಗಡೆ 4 ಮತಗಳ ಅಂತರದಿಂದ ಜಯ ಗಳಿಸಿದರು.
Advertisement
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ತಲಾ 3 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ರವಿವಾರ ಚುನಾವಣೆ ಕೈಗೊಂಡು ನಿರ್ದೇಶಕರ ಆಯ್ಕೆ ಮಾಡಲಾಗಿದೆ. ಒಟ್ಟು 12 ಸ್ಥಾನಗಳ ಪೈಕಿ ಆರು ಸ್ಥಾನಗಳಿಗೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Related Articles
Advertisement
ಎಲ್ಲೆಲ್ಲಿ-ಯಾರ್ಯಾರು:
ಧಾರವಾಡ: ಶಂಕರಪ್ಪ ಮುಗದ, ಗೀತಾ ಮರಲಿಂಗಣ್ಣವರ, ಸುರೇಶ ಬಣವಿ
ಗದಗ: ಗೋವಿಂದಗೌಡ ಹಿರೇಗೌಡರ, ನೀಲಕಂಠಪ್ಪ ಶಿವಪ್ಪ ಅಸೂಟಿ, ಮಂಜುನಾಥಗೌಡ್ರ ಪಾಟೀಲ.
ಹಾವೇರಿ: ಬಸವರಾಜ ಅರಬಗೊಂಡ, ಬಸನಗೌಡ ಮೇಲಿಮನಿ, ಹನುಮಂತಗೌಡ ಭರಮಣ್ಣನವರ.
ಉತ್ತರ ಕನ್ನಡ: ಸುರೇಶ್ಚಂದ್ರ ಹೆಗಡೆ, ಪರಶುರಾಮ ನಾಯ್ಕ, ಶಂಕರ ಪರಮೇಶ್ವರ ಹೆಗಡೆ