Advertisement

ಧಾರವಾಡ: ಚನ್ನಮ್ಮ ಪಾರ್ಕ್‌ ಅವ್ಯವಸ್ಥೆ ಗೆ ಮೇಯರ್‌ ಆಕ್ರೋಶ

01:44 PM Jun 16, 2023 | Team Udayavani |

ಧಾರವಾಡ: ಕಿತ್ತೂರು ರಾಣಿ ಚನ್ನಮ್ಮ ಉದ್ಯಾನಕ್ಕೆ ಹು-ಧಾ ಮಹಾನಗರ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ಭೇಟಿ ನೀಡಿ ಪರಿಶೀಲಿಸಿದರು.

Advertisement

ಈ ವೇಳೆ ವಾಯುವಿಹಾರಕ್ಕೆ ಬಂದ ಸಾರ್ವಜನಿಕರ ಅಹವಾಲು ಆಲಿಸಿದ ಮಹಾಪೌರರು, ಉದ್ಯಾನವನದ ಪಾದಚಾರಿ
ಮಾರ್ಗ, ಮರ ಮತ್ತು ಬಳ್ಳಿಗಳ ಪೋಷಣೆ ಕೊರತೆ, ಹಾಳಾದ ವಿದ್ಯುದ್ದೀಪಗಳ ಕಂಬ, ಅಲ್ಲಲ್ಲಿ ಕಸದ ಸಂಗ್ರಹ, ನೀರು ಕಾಣದ
ಶೌಚಾಲಯ, ಬೀದಿ ನಾಯಿಗಳ ತಿರುಗಾಟ ಇನ್ನಿತರೆ ಅವ್ಯವಸ್ಥೆಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮ ಉದ್ಯಾನವನ ನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಮಹಾಪೌರರು ಅಲ್ಲಿನ ಲೋಪಗಳತ್ತ ಗಮನ ಹರಿಸದ ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ವಚ್ಛತೆ, ದೀಪಗಳ, ನೀರು ಸಂಗ್ರಹ ತೊಟ್ಟಿಗಳ ಹೂವಿನ ಬಳ್ಳಿಗಳ ನಿರ್ವಹಣೆಗೆ ಪ್ರತಿ ತಿಂಗಳು ಪಾಲಿಕೆ ಹಣ ಪಾವತಿಸುತ್ತಿದೆ. ಇನ್ನೊಂದೆಡೆ ಸಾರ್ವಜನಿಕರು ಉದ್ಯಾನವನ ಪ್ರವೇಶಕ್ಕೆ ಶುಲ್ಕ ಭರಿಸುತ್ತಿದ್ದಾರೆ. ಆದರೆ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಮತ್ತು ಉತ್ತಮ ವಾತಾವರಣ ಇಲ್ಲದಂತಾಗಿದೆ.

ಪಾಲಿಕೆ ಅಧಿಕಾರಿಗಳು ಸಂಬಂಧಿಸಿದ ಗುತ್ತಿಗೆದಾರರಿಂದ ಸಮರ್ಪಕ ಸೇವೆ ಪಡೆಯುವಲ್ಲಿ ಆಸಕ್ತಿ ತೋರಿಸದಿರುವುದು
ಸರಿಯಲ್ಲ. ಅ ಧಿಕಾರಿಗಳು ಉದ್ಯಾನವನ ಸೌಂದರ್ಯೀಕರಣಕ್ಕೆ ತುರ್ತಾಗಿ 25 ಲಕ್ಷ ರೂಪಾಯಿಗಳ ಅನುದಾನ ಕೋರಿ ಪ್ರಸ್ತಾವನೆ
ಸಲ್ಲಿಸಿದರೆ 2-3 ದಿನಗಳಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

Advertisement

ಉದ್ಯಾನವನದಲ್ಲಿ ಮೇಲ್ವಿಚಾರಣೆ ಅಧಿಕಾರಿಗಳ ಮೊಬೈಲ್‌ ನಂಬರ್‌ನ್ನು ಸಾರ್ವಜನಿಕರ ಸಂಪರ್ಕಕ್ಕೆ ಪ್ರಕಟಿಸುವಂತೆ
ಸೂಚಿಸಿದ ಮಹಾಪೌರರು, ಉದ್ಯಾವನ ನಿರ್ವಹಣೆಯಲ್ಲಿ ಲೋಪ ಎಸಗಿರುವ ಗುತ್ತಿಗೆದಾರರಿಗೆ ನೋಟಿಸ್‌ ನೀಡುವಂತೆ ಅಧಿ
ಕಾರಿಗಳಿಗೆ ನಿರ್ದೇಶನ ನೀಡಿದರು.

ಸರಕಾರದ 200 ಕೋಟಿ ರೂ.ಗಳ ವಿಶೇಷ ಅನುದಾನದಡಿ ಉದ್ಯಾನವನ ಸಮಗ್ರ ಸೌಂದರ್ಯೀಕರಣಕ್ಕೆ ಅಂದಾಜು 2 ಕೋಟಿ
ರೂಪಾಯಿಗಳ ಅನುದಾನ ಪಡೆಯಲು ಪಾಲಿಕೆಯಿಂದ ಪ್ರಯತ್ನಿಸಲಾಗುತ್ತಿದೆ. ಅನುದಾನ ಸಿಗುವ ವಿಶ್ವಾಸವಿದೆ. ಅಲ್ಲದೇ
ಹಲವು ಬುಲೆಟ್‌ ಟ್ರೇನ್‌ ಇನ್ನಿತರೆ ಆಕರ್ಷಕ ಮಾದರಿಗಳನ್ನು ಉದ್ಯಾನವನದಲ್ಲಿ ಅಳವಡಿಸುವ ಸಂಬಂಧ ಚಿಂತನೆ ನಡೆದಿದೆ.
ಸರ್ವವಿಧದಲ್ಲೂ ಅಚ್ಚುಕಟ್ಟಾದ ಉದ್ಯಾನವನ ರೂಪಿಸಿ ಸಾರ್ವಜನಿಕರ ಅನುಕೂಲಕ್ಕೆ ನೀಡಲಾಗುವುದು ಎಂದರು.

ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ: ಉದ್ಯಾನ ವನದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮನ ಮೂರ್ತಿ
ಪ್ರತಿಷ್ಠಾಪಿಸಲು ಪಾಲಿಕೆಯಲ್ಲಿ ಈಗಾಗಲೇ ಠರಾವು ಪಾಸು ಮಾಡಲಾಗಿದೆ. ಈ  ಕುರಿತಂತೆ ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿ
ಕೂಡ ರಚನೆಯಾಗಿದ್ದು, ಇದಕ್ಕಾಗಿ ಸಮಿತಿ ಸದಸ್ಯರೊಂದಿಗೆ ಸ್ಥಳ ಪರಿಶೀಲನೆ ಕೂಡ ಮಾಡಿದ್ದೇವೆ. ಸೂಕ್ತ ಸ್ಥಳ ನಿರ್ಧರಿಸಿ
ಅಂತಿಮಗೊಳಿಸಲಾಗುವುದು ಎಂದರಲ್ಲದೇ ಮೂರ್ತಿ ಸ್ಥಾಪನೆಗೆ ಅಗತ್ಯವಿರುವ ಪೂರಕ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.

ಪಾಲಿಕೆ ಸದಸ್ಯರಾದ ಮಂಜುನಾಥ ಬಟ್ಟೆನ್ನವರ, ಶಂಭುಗೌಡ ಸಾಲಮನಿ, ವಲಯ ಅ ಧಿಕಾರಿಗಳಾದ ಗಿರೀಶ ತಳವಾರ, ಆರ್‌.ಎಂ. ಕುಲಕರ್ಣಿ, ಅಭಿವೃದ್ಧಿ ಅಧಿಕಾರಿ ದಶವಂತ, ತೋಟಗಾರಿಕಾ ವಿಭಾಗದ ನಿರೀಕ್ಷಕಿ ಪ್ರೀತಿ ವಾಡೇದ, ಕಿಶೋರ ದಾಮೋದರ, ಶಶಿ ಚಲ್ಲಾಳ, ಉಮೇಶ ಪೈ, ಅರವಿಂದ ಪಾಗದ, ಚಂದ್ರು ನಾಗಶೆಟ್ಟಿ ಹಾಗೂ ಸ್ಥಳೀಯ ನಾಗರಿಕರು
ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next