ಸನ್ನಿಹಿತವಾಗಿದೆ!
Advertisement
ಹೌದು. ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮನ ಜೀವನ ಚರಿತ್ರೆಯನ್ನು ರಾಜ್ಯದ ಮನೆ-ಮನಕ್ಕೆ ತಲುಪಿಸಲು ಧಾರವಾಡ ರಂಗಾಯಣ ದೊಡ್ಡ ಸಾಹಸಕ್ಕೆ ಕೈ ಹಾಕಿದೆ. 150 ಜನ ಕಲಾವಿದರು ಚೆನ್ನಮ್ಮನ ನಾಟಕಕ್ಕೆ ಕಳೆದ ಒಂದು ತಿಂಗಳಿಂದ ಹಗಲು ರಾತ್ರಿ ರಂಗ ತಾಲೀಮು ನಡೆಸುತ್ತಿದ್ದಾರೆ.
Related Articles
ಪಾತ್ರ ನಿರ್ವಹಿಸಲಿದ್ದಾರೆ. ಇನ್ನು ಧ್ವನಿ ಡಬ್ಬಿಂಗ್‌ನಲ್ಲಿ ಗಾಯಕಿ ಸಂಗೀತಾ ಕಟ್ಟಿ, ಸುಚೇಂದ್ರ ಪ್ರಸಾದ್ ಸೇರಿದಂತೆ ಅನೇಕ ಕನ್ನಡ ಚಲನಚಿತ್ರದ ತಾರಾ ಬಳಗ ಭಾಗಿಯಾಗಿದೆ. ಎರಡು ಆನೆ, 10 ಕುದುರೆ ಸೇರಿದಂತೆ ಜೀವಂತ ಪ್ರಾಣಿಗಳನ್ನೇ ವೇದಿಕೆ ಮೇಲೆ ತರುವ ಪ್ರಯತ್ನ ನಡೆದಿದ್ದು, ಹೆಚ್ಚು ಕಡಿಮೆ ಐತಿಹಾಸಿಕ ಕಾಲ ಘಟ್ಟದ ಕಥೆಯನ್ನು ಅರ್ಥಪೂರ್ಣವಾಗಿ ಹೆಣೆದು ರಂಗಕ್ಕೆ ಅಳವಡಿಸಲಾಗಿದೆ.
Advertisement
ಸುವರ್ಣ ಸೌಧದೆದುರು ಚೆನ್ನಮ್ಮ: ಡಿಸೆಂಬರ್ ಎರಡನೇ ವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 2022ನೇ ಸಾಲಿನ ಚಳಿಗಾಲ ಅಧಿವೇಶನ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಸಂದರ್ಭದಲ್ಲಿ ಇಡೀ ಸರ್ಕಾರವೇ ಬೆಳಗಾವಿಯಲ್ಲಿರುತ್ತದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಹೆಚ್ಚು ಕಡಿಮೆ 300 ಜನ ಶಾಸಕರು, ನೂರಾರು ಜನ ಅಧಿಕಾರಿಗಳು ಇಲ್ಲಿ ಹಾಜರಿರುತ್ತಾರೆ.
ಪ್ರಧಾನಿ ಮೋದಿಯಿಂದ ನಾಟಕ ಉದ್ಘಾಟನೆ?ಅಂದುಕೊಂಡಂತೆ ನಡೆದರೆ ಡಿಸೆಂಬರ್ ಮೊದಲ ವಾರದಲ್ಲಿಯೇ ಕಿತ್ತೂರು ಚೆನ್ನಮ್ಮ ನಾಟಕದ ಮೊದಲ ಪ್ರದರ್ಶನ ನಡೆಯಲಿದೆ. ನಾಟಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸುವ ಚಿಂತನೆ ನಡೆದಿದೆ. ಚೆನ್ನಮ್ಮನ ಪಾತ್ರದ ಮೂಲಕ ಮನೆ ಮಾತಾಗಿರುವ ಡಾ|ಬಿ.ಸರೋಜಾದೇವಿ ಅವರನ್ನು ಅತಿಥಿಯಾಗಿ ಆಹ್ವಾನಿಸಲು ಯೋಜಿಸಲಾಗಿದೆ.ಉಳಿದಂತೆ ಸಿಎಂ, ರಾಜ್ಯ ಹಾಗೂ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ. ಈ ಮೊದಲು ಕಿತ್ತೂರು ಚೆನ್ನಮ್ಮ ನಾಟಕದ ಮೊದಲ ಪ್ರದರ್ಶನವನ್ನು ಐತಿಹಾಸಿಕ ಕಿತ್ತೂರು ಕೋಟೆಯಲ್ಲಿಯೇ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಇದೀಗ ಧಾರವಾಡದ ಕೆಸಿಡಿ ಮೈದಾನದಲ್ಲಿ 30 ಸಾವಿರ ಜನರ ಎದುರು ಮೊದಲ ಪ್ರದರ್ಶನಕ್ಕೆ ರಂಗಾಯಣ ಚಿಂತನೆ ನಡೆಸಿದೆ. ನಂತರ ಕಿತ್ತೂರು, ಬೆಳಗಾವಿ ಸೇರಿ ರಾಜ್ಯದ ಇತರೆ ಕಡೆಗಳಲ್ಲಿ ಪ್ರದರ್ಶನಕ್ಕೆ ಯೋಜಿಸಲಾಗಿದೆ.
ರಮೇಶ ಪರವಿನಾಯಕ,
ಧಾರವಾಡ ರಂಗಾಯಣ ನಿರ್ದೇಶಕರು ಡಾ|ಬಸವರಾಜ ಹೊಂಗಲ್