Advertisement

ಧಾರವಾಡ ಕಿಲ್ಲರ್‌ ಕಟ್ಟಡ: ಸಾವಿನ ಸಂಖ್ಯೆ 17ಕ್ಕೆ ಏರಿಕೆ

07:01 AM Mar 25, 2019 | Vishnu Das |

ಧಾರವಾಡ: ಕಿಲ್ಲರ್‌ ಕಟ್ಟಡದ ತಳಮಹಡಿಯ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ 6ನೇ ದಿನ ಭಾನುವಾರವೂ ಮುಂದುವರಿದಿದ್ದು, ಶನಿವಾರ ತಡರಾತ್ರಿ ತಳಮಹಡಿಯ ಉತ್ತರ ದಿಕ್ಕಿನ ಕೋಣೆಯೊಂದರಲ್ಲಿ ಸಿಲುಕಿದ್ದ ಈರಪ್ಪ ಬಸಪ್ಪ ಹಡಪದ (30) ಮೃತದೇಹವನ್ನು ಸತತ 8 ತಾಸುಗಳ ಕಾರ್ಯಾಚರಣೆ
ನಡೆಸಿ ತೆಗೆಯಲಾಗಿದೆ. ಈ ವರೆಗೆ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಗೊಂಡಿದೆ. ಅಲ್ಲದೇ ಕಟ್ಟಡ ಸೂಪರ್‌ವೈಸರ್‌ ಸಹದೇವ ಸಾಳುಂಕೆ, ನವಲು ಜೋರೆ ಹಾಗೂ ವಾಘು ಜೋರೆ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಒಂದೆಡೆ ಕಟ್ಟಡದ ತಳಮಹಡಿ ಯಲ್ಲಿ ಸಿಲುಕಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದರೆ, ಇನ್ನೊಂದೆಡೆ ಕಟ್ಟಡದ ಅವಶೇಷಗಳ ತೆರವು ಕಾರ್ಯಾಚರಣೆ ಕೂಡ ಚುರುಕು ಪಡೆದಿದೆ. ಭಾನುವಾರ ಇಡೀ ದಿನ 40 ಡಬಲ್‌ ಡೆಕ್ಕರ್‌ ಲಾರಿಗಳಷ್ಟು ಅವಶೇಷಗಳನ್ನು ನಾಲ್ಕು ಜೆಸಿಬಿಗಳನ್ನುಬಳಸಿ  ಸಾಗಿಸಲಾಯಿತು. ಅವಶೇಷಗಳನ್ನು ಕಿಲ್ಲರ್‌ ಕಟ್ಟಡ ಎದುರಿನ ಖುಲ್ಲಾ ಜಾಗೆಯಲ್ಲಿ ಸುರಿಯಲಾಗಿದ್ದು, ಇನ್ನೂ ಮೂರು ದಿನ ಅವಶೇಷಗಳ ತೆರವುಗೊಳಿಸುವ ಕಾರ್ಯ ನಡೆಯಲಿದೆ ಎಂದು ತೆರವು ಕಾರ್ಯಾಚರಣೆ ಮುಖ್ಯಸ್ಥರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next