Advertisement
2015ರ ಆಗಸ್ಟ್ ನಲ್ಲಿ ಬೆಳಗಾವಿಯ ಬಟ್ಟೆ ವ್ಯಾಪಾರಿಯ ಮನೆಗೆ ನುಗ್ಗಿ ಗೃಹಿಣಿ ಮತ್ತು ಇಬ್ಬರು ಮಕ್ಕಳ ಕಗ್ಗೋಲೆ ಮಾಡಲಾಗಿದೆ ಎಂದು ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ತ್ರಿವಳಿ ಕೊಲೆ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ಇದಾದ ಬಳಿಕ ಕೋರ್ಟ್‌ಗೆ ಎಪಿಎಂಸಿ ಠಾಣೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ನಂತರ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುಧೀರ್ಘ ವಿಚಾರಣೆ ನಡೆಸಿ 16 ಎಪ್ರಿಲ್ 2018 ರಂದೇ ಪ್ರವೀಣ್ ಭಟ್ ಗೆ ಜೀವಾವಧಿ ಶಿಕ್ಷೆ ಸಹ ವಿಧಿಸಿ ತೀರ್ಪು ನೀಡಿತ್ತು.
Related Articles
Advertisement
ಪ್ರಕರಣದ ಹಿನ್ನೆಲೆ: ಬೆಳಗಾವಿಯ ಕುವೆಂಪು ನಗರದಲ್ಲಿ 2015 ಆಗಸ್ಟ್ 16 ರಂದು ನಸುಕಿನ ಜಾವ ತಾಯಿ ಮತ್ತು ಇಬ್ಬರು ಮಕ್ಕಳ ಕೊಲೆ ನಡೆದಿತ್ತು. ತಾಯಿ ರೀನಾ ಮಾಲಗತ್ತಿ, ಮಗ ಆದಿತ್ಯ ಮಾಲಗತ್ತಿ, ಮಗಳು ಸಾಹಿತ್ಯ ಮಾಲಗತ್ತಿಯನ್ನು ಭೀಕರವಾಗಿ ಕೊಲೆಗೈಯ್ಯಲಾಗಿತ್ತು. ಆಗ 24 ಗಂಟೆಯಲ್ಲೇ ಎಪಿಎಂಸಿ ಆರೋಪಿತ ಪ್ರವೀಣ್ ಭಟ್ ನನ್ನು ಬಂಧಿಸಿದ್ದರು. ಕೊಲೆ ಮಾಡುವ ಮುಂಚಿತವಾಗಿ ಒಂದು ವರ್ಷದ ಹಿಂದೆ ರೀನಾ ಹಾಗೂ ಪ್ರವೀಣ್ ನಡುವೆ ಸ್ನೇಹ ಅಂಕುರಿಸಿತ್ತು. ತ್ರಿವಳಿ ಕೊಲೆಗೆ ರೀನಾ ಹಾಗೂ ಪ್ರವೀಣ್ ಭಟ್ ನಡುವಿನ ಅನೈತಿಕ ಸಂಬಂಧವೇ ಕಾರಣವಾಗಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿತ್ತು.