Advertisement

Dharwad: ಸಹಕಾರ ಸಂಘಗಳಿಗೆ ರೈತರೇ ಜೀವಾಳ-ಜಿ.ಟಿ. ದೇವೇಗೌಡ

05:06 PM Dec 14, 2023 | Team Udayavani |

ಅಣ್ಣಿಗೇರಿ: ಪ್ರತಿಯೊಂದು ಹಳ್ಳಿಯಲ್ಲಿ ಸಹಕಾರಿ ಸಂಘವು ಉನ್ನತ ಮಟ್ಟದಲ್ಲಿ ಬೆಳೆಯಲು ರೈತರ ಪಾತ್ರ ದೊಡ್ಡದು ಎಂದು
ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

Advertisement

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ
ಹಾಗೂ ಸಂಘದ ಗೋದಾಮು ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗುವುದರ ಜೊತೆಗೆ ರೈತರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸಲು ಕೆಲಸ ಮಾಡುತ್ತಿವೆ. ಸಹಕಾರಿ ಸಂಘಗಳಿಗೆ ರೈತರೇ ಜೀವಾಳ. ಉದಾರೀಕರಣ, ಜಾಗತೀಕರಣ ಬಂದು ಸಹಕಾರ ಕ್ಷೇತ್ರಕ್ಕೆ ಬಹಳ ಹೊಡೆತ
ಬಿದ್ದಿದ್ದರೂ ಸಹಕಾರ ಸಂಘವು ಬೆಳೆದು ಬಂದಿರುವುದು ಸಂತಸವಾಗುತ್ತದೆ.

ಗ್ರಾಮಕ್ಕೊಂದು ಗ್ರಾಪಂ, ಶಾಲೆ, ಸಹಕಾರ ಸಂಘ ಈ ಮೂರು ಮೂಲಭೂತವಾಗಿ ಇರಬೇಕು. ಅಂದಾಗ ಗ್ರಾಮದ ಅಭಿವೃದ್ಧಿ
ಸಾಧ್ಯ ಎಂದರು.

ಸಂಘದ ನಿರ್ದೇಶಕ ಚಂದ್ರಗೌಡ್ರು ಕಿತ್ತೂರ ಪ್ರಾಸ್ತಾವಿಕ ಮಾತನಾಡಿ, ಸಂಘವು 1919ರಲ್ಲಿ ಹುಟ್ಟಿಕೊಂಡಿತು. ಸ್ಥಾಪನೆ ಮಾಡಿದವರು ಶ್ರೀಮಂತ ಶಂಕ್ರಪ್ಪಗೌಡ ಫಕ್ಕೀರಗೌಡ ಸಿಕ್ಕೆದೇಸಾಯಿ. ಅಣ್ಣಿಗೇರಿ ಗ್ರಾಮದ ರೈತರು ಒಂದಾಗಿ ಸ್ವಲ್ಪ ಬಂಡವಾಳದಿಂದ ಈ ಸಂಸ್ಥೆಯನ್ನು ಕಟ್ಟಿಕೊಂಡರು. ಪ್ರಾರಂಭದಲ್ಲಿ 264 ಜನ ಸದಸ್ಯರು, 37240 ರೂ. ಶೇರು ಬಂಡವಾಳ ಇತ್ತು.

Advertisement

ಪ್ರಸ್ತುತ ಸಂಘದ ಸದಸ್ಯರ ಸಂಖ್ಯೆ 1896 ಆಗಿದೆ. ಸಂಘ ಹೊಸದಾಗಿ ಒಂದು ರೇಶನ್‌ ಅಂಗಡಿ ಮತ್ತು ಕೇಂದ್ರ ಸರ್ಕಾರದ
ಭಾರತೀಯ ಜನೌಷ ಧಿ ಕೇಂದ್ರ ಹೊಂದಿದೆ. ಸಂಘದಿಂದ ಪ್ರತಿವರ್ಷ ಯೋಗ್ಯದರದಲ್ಲಿ ಸುಮಾರು 1 ಕೋಟಿ ರೂ. ವರೆಗಿನ
ಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಬಾಪುಗೌಡ ಪಾಟೀಲ, ಷಣ್ಮುಖ ಗುರಿಕಾರ ಮಾತನಾಡಿದರು. ಪಿಕೆಪಿಎಸ್‌ ಅಧ್ಯಕ್ಷ ನಿಜಲಿಂಗಪ್ಪ ಅಕ್ಕಿ, ಜಿ.ಪಿ. ಪಾಟೀಲ,
ಶಿವಕುಮಾರಗೌಡ ಪಾಟೀಲ, ಮೋಹನ ಲಿಂಬಿಕಾಯಿ, ಮಲ್ಲಿಕಾರ್ಜುನ ಹೋರಕೇರಿ, ಬಿ.ಬಿ. ಗಂಗಾಧರಮಠ, ಶಿವಣ್ಣ ಮಾಡೊಳ್ಳಿ, ವಿಜಯ ಗುಡ್ಡದ, ಬಸನಗೌಡ ಕುರಹಟ್ಟಿ, ಚಂಬಣ್ಣ ಹಾಳದೋಟರ, ಪುರಸಭೆ ಅಧ್ಯಕ್ಷೆ ಮೆಹಬೂಬಿ ನವಲಗುಂದ, ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಈಶ್ವರ ಕಾಳಪ್ಪನವರ, ಮಹೇಶ ಅಂಗಡಿ, ಮಹಾಬಳೇಶ್ವರ ಹೆಬಸೂರ, ಚಂಬಣ್ಣ ಸುರಕೋಡ, ಶೇಖಣ್ಣ ಹಾಳದೋಟರ, ಚಂಬಣ್ಣ ಆಲೂರ, ಸಂಘದ ಉಪಾದ್ಯಕ್ಷ ದೇವೇಂದ್ರಪ್ಪ ನರಗುಂದ, ಈಶ್ವರಪ್ಪ ಹೊಂಬಳ, ಕುಮಾರ ಬೀಳೆಬಾಳ, ಹನುಮಂತ ಉಣಕಲ್ಲ, ಲಲಿತಾ ಆಲೂರ, ಚನ್ನಮ್ಮ ಹಾಳದೋಟರ, ಸಂಘದ ಮುಖ್ಯ
ಕಾರ್ಯನಿರ್ವಾಹಕ ಲಿಂಗನಗೌಡ್ರು ಕುರಹಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next