ಧಾರವಾಡ : ಜಿಲ್ಲೆಯಲ್ಲಿ ಕಳೆದ ಎಂಟು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಂತ್ರಸ್ತರಾಗಿರುವ ಸುಮಾರು 40,363 ಜನರಿಗೆ 106 ಪರಿಹಾರ ಕೇಂದ್ರಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ.
6366 ಮನೆಗಳಿಗೆ ಹಾನಿಯಾಗಿದೆ. ಅವುಗಳಲ್ಲಿ ಈಗಾಗಲೇ 2055 ಮನೆಗಳಿಗೆ 1 ಕೋಟಿ 31 ಲಕ್ಷ ರೂ.ಪರಿಹಾರ ಒದಗಿಸಲಾಗಿದೆ.ಉಳಿದ ಮನೆಗಳ ಪರಿಹಾರ ಚೆಕ್ ಗಳು ಸಿದ್ಧವಾಗುತ್ತಿವೆ.
ಇದುವರೆಗೆ ಮೂರು ಜನ ಸಾವಿಗೀಡಾಗಿದ್ದಾರೆ. ಪರಿಹಾರ ವಿತರಿಸಲಾಗಿದೆ.151 ಜಾನುವಾರುಗಳ ಜೀವ ಹಾನಿಯಾಗಿದೆ.21 ಗ್ರಾಮಗಳು ಜಲಾವೃತಗೊಂಡಿವೆ.
86651 ಹೆಕ್ಟೇರ ಕೃಷಿ ಭೂಮಿ ಹಾಳಾಗಿದ್ದು.ಎನ್ ಡಿ ಆರ್ ಎಫ್ ಮಾನದಂಡಗಳ ಪ್ರಕಾರ ಸುಮಾರು 58 .91 ಕೋಟಿ ರೂ.ಬೆಳೆಹಾನಿಯಾಗಿದೆ.
18426 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು.ಸುಮಾರು 12 .51 ಕೋಟಿ ರೂ.ಮೌಲ್ಯದ ಬೆಳೆ ಹಾನಿ ಅಂದಾಜಿಸಲಾಗಿದೆ.
413 ಕಿ.ಮೀ.ರಸ್ತೆ ,47 ಸೇತುವೆಗಳು, 19 ಕೆರೆಗಳು ,71 ಕಾಲುವೆಗಳು, 150 ಅಂಗನವಾಡಿ ಕೇಂದ್ರಗಳು ಹಾನಿಗೊಳಗಾಗಿವೆ.