Advertisement
ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹುಬ್ಬಳ್ಳಿ ಯಲ್ಲಿ ಟಿಕೆಟ್ ಆಕಾಂಕ್ಷಿಗಳ ಜತೆ ಸಭೆ ನಡೆಸಿದ್ದು, ಇಬ್ಬರೂ ಆಕಾಂಕ್ಷಿಗಳನ್ನು ಕರೆಯಿಸಿ ಸಂಧಾನ ನಡೆಸಲು ಯತ್ನಿಸಿದ್ದಾರೆ. ಹೈಕಮಾಂಡ್‌ನ ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ಟಿಕೆಟ್ಆಯ್ಕೆ ಕಗ್ಗಂಟಾಗಿ ಮುಂದುವರೆದಿದ್ದು, ಅಲ್ಪಸಂಖ್ಯಾತ ಕೋಟಾದಡಿ ಶಾಕೀರ್‌ಗೆ ಟಿಕೆಟ್ ನೀಡಬೇಕೆನ್ನುವ ಒತ್ತಡ ಹೆಚ್ಚಾಗುತ್ತಿದ್ದಂತೆಯೇ, ವಿನಯ್ ಕುಲಕರ್ಣಿ ತಾವು ಬಂಡಾಯವಾಗಿ ಸ್ಪರ್ಧಿಸುವ ಸುಳಿವು ನೀಡಿರುವುದು ಪಕ್ಷದ ತಲೆ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಅಭ್ಯರ್ಥಿಯ ಆಯ್ಕೆ ಪಟ್ಟಿ ಬಿಡುಗಡೆಯಾದ ನಂತರ ಬಂಡಾಯ ರಾಜಕೀಯದ ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕರ್ತರಲ್ಲಿ ಗೊಂದಲ ಇಲ್ಲದಿದ್ದರೂ, ಕೊನೆ ಕ್ಷಣದಲ್ಲಿ ಯಾರ ಹೆಸರು ಅಂತಿಮಗೊಳಿಸುತ್ತಾರೆ ಎಂಬ ಕುತೂಹಲ ಮುಂದುವರೆದಿದೆ.