Advertisement
ಇಲ್ಲಿನ ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಸೌಮ್ಯ ಸೀಸಾಲಿ ಗುರುವಾರ ಮಧ್ಯಾಹ್ನ 2:45ರ ಸುಮಾರಿಗೆ ಕಾಲೇಜಿನ ಆವರಣಕ್ಕೆ ಹೊಂದಿಕೊಂಡಿರುವ ಸಿಂಡಿಕೇಟ್ ಬ್ಯಾಂಕ್ ಎಟಿಎಂನಲ್ಲಿ ಹಣ ತೆಗೆಯಲು ಹೋಗಿದ್ದಾರೆ. ಹಣ ತೆಗೆದುಕೊಂಡು ಎಟಿಎಂನಿಂದ ಮರಳುತ್ತಿರುವಾಗ ಎಟಿಎಂ ಒಳಗೆಪ್ರವೇಶಿಸಿದ ಶಿವಾಜಿ ತಾನಾಜಿ ಚೌಹಾØನ್ (27) ಎನ್ನುವ ದುಷ್ಕರ್ಮಿ, ಸೌಮ್ಯ ಅವರ ಮೇಲೆ ಎರಗಿ ಹಣ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಸೌಮ್ಯ ಪ್ರತಿರೋಧ ಒಡ್ಡಿದ್ದಾರೆ. ಕೊನೆಗೆ ಕೂಗಾಟ, ಚೀರಾಟ ಆರಂಭಿಸಿದ್ದಾರೆ.
ಎಟಿಎಂನಲ್ಲಿ ತಮ್ಮ ಉಪನ್ಯಾಸಕಿ ಇರುವುದನ್ನು ಮತ್ತು ಅವರೊಂದಿಗೆ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸುತ್ತಿರುವುದನ್ನು ನೋಡಿದ ಅದೇ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಎಟಿಎಂನ ಒಳಕ್ಕೆ ನುಗ್ಗಿ ಶಿವಾಜಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ದುಷ್ಕರ್ಮಿಯನ್ನು ಬಂಧಿಸಲಾಗಿದೆ.