Advertisement

ಚಿರತೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಮತ್ತೆ ಪಲಾಯನ!

05:18 PM Sep 25, 2021 | Team Udayavani |

ಧಾರವಾಡ: ಅರಣ್ಯ ಇಲಾಖೆಯ ನುರಿತ ತಜ್ಞರ ತಂಡದಿಂದ ತಪ್ಪಿಸಿಕೊಂಡು ಓಡಾಟ ನಡೆಸಿರುವ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಶುಕ್ರವಾರವೂ ತಾಲೂಕಿನ ಕವಲಗೇರಿ ಹಾಗೂ ಗೋವನಕೊಪ್ಪ ವ್ಯಾಪ್ತಿಯಲ್ಲಿಯೇ ನಡೆಯಿತು.

Advertisement

ಕವಲಗೇರಿ ಗ್ರಾಮ ವ್ಯಾಪ್ತಿಯ ಕಬ್ಬಿನ ಗದ್ದೆಯಲ್ಲಿಯೇ ಚಿರತೆ ಇರುವುದನ್ನು ಖಾತ್ರಿಪಡಿಸಿಕೊಂಡಿದ್ದ ಅರಣ್ಯ ಇಲಾಖೆಯು, ಗದ್ದೆಯಿಂದ ಚಿರತೆ ಹೊರಗಡೆ ಬರಲು ಗುರುವಾರ ರಾತ್ರಿಯಿಡೀ ಮಾಡಿದ ಕಾರ್ಯಾಚರಣೆ ಕೊನೆ ಹಂತದಲ್ಲಿ ವಿಫಲಗೊಂಡಿತು. ಒಂದು ಹಂತದಲ್ಲಿ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದು ಇನ್ನೇನು ಚಿರತೆ ಸೆರೆ ಸಿಕ್ಕೇಬಿಟ್ಟಿತು ಅನ್ನುವಷ್ಟರಲ್ಲಿ ಚಿರತೆ ಅಲ್ಲಿಂದ ಪಲಾಯನ ಮಾಡಿತ್ತು.

ಶುಕ್ರವಾರ ಬೆಳಗ್ಗೆ ಹೊತ್ತಿಗೆ ಕವಲಗೇರಿ ಗ್ರಾಮದ ಗಡಿಗೆ ಹೊಂದಿಕೊಂಡಿದ್ದ ಗೋವನಕೊಪ್ಪದ ವ್ಯಾಪ್ತಿಯಲ್ಲಿ ಕಂಡುಬಂದಿತ್ತು. ಗ್ರಾಮದ ಬಸವರಾಜ ಅವರ ಬಾಳೆ ತೋಟದಲ್ಲಿ ಚಿರತೆ ಹೋಗಿದ್ದು, ಬಸಮ್ಮ ಮಾದರ ಎಂಬ ಮಹಿಳೆಯ ಕಣ್ಣಿಗೆ ಬಿದ್ದಿದೆ. ಗ್ರಾಪಂ ಸದಸ್ಯರಿಂದ ಮಾಹಿತಿ ಹೊರಬೀಳುತ್ತಿದ್ದಂತೆಯೇ ಕವಲಗೇರಿಯಿಂದ ಅರಣ್ಯ ಇಲಾಖೆ ಗೋವಿನಕೊಪ್ಪದತ್ತ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿತು. ಕಾರ್ಯಾಚರಣೆ ಆರಂಭಗೊಂಡು ಕೆಲ ಹೊತ್ತಿನಲ್ಲಿ ಚಿರತೆ ಮತ್ತೆ ಅಲ್ಲಿಂದ ಪಲಾಯನ ಮಾಡಿದ್ದು, ಮರಳಿ ಕವಲಗೇರಿಯತ್ತ ಬಂದಿದೆ. ಈ ಮಾಹಿತಿ ಸಿಕ್ಕ ಬಳಿಕ ಮತ್ತೆ ಅರಣ್ಯ ಇಲಾಖೆ ಸಿಬ್ಬಂದಿ ಕವಲಗೇರಿಗೆ ಮರಳಿದ್ದು, ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಅರಣ್ಯ ಅಧಿಕಾರಿಗಳು, ಅರವಳಿಕೆ ತಜ್ಞರು ಒಳಗೊಂಡ ತಂಡವು ಕವಲಗೇರಿ ಗ್ರಾಮದ ವ್ಯಾಪ್ತಿಯಲ್ಲಿಯೇ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next