Advertisement
ಸಾವಿನ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ರಕ್ಷಣಾ ಸಿಬ್ಬಂದಿ ನೇರವಾಗಿ ಜೆಸಿಬಿಗಳನ್ನು ಬಳಸಿ ಕಟ್ಟಡದ ಅವಶೇಷಗಳ ತೆರವು ಆರಂಭಿಸಿದ್ದರು. ಬೆಳಗ್ಗೆಯೇ ಮಾಜಿ ಸೈನಿಕ ಸುಬ್ಬಪ್ಪ ದಿಂಡಲಕೊಪ್ಪ (68) ಅವರ ಶವ ಹೊರ ತೆಗೆಯಲಾಯಿತು. ಅವರ ಬೆನ್ನ ಹಿಂದೆಯೇ ಜೀವಂತವಾಗಿ ಹೊರಬಂದ ಸಂಗನಗೌಡ ರಾಮನಗೌಡರ ಕಟ್ಟಡದ ಒಳಗಡೆ ಇನ್ನೂ ಕೆಲವಷ್ಟು ಜನರು ಜೀವಂತವಾಗಿದ್ದಾರೆ ಎಂಬ ಸುಳಿವು ಬೆನ್ನಟ್ಟಿದ ರಕ್ಷಣಾ ಸಿಬ್ಬಂದಿ, ದಿಲೀಪ್ ಕೊಕರೆ(35) ಮತ್ತು ಸಂಗೀತಾ(33) ದಂಪತಿಯನ್ನು ರಕ್ಷಿಸಿದರು.
Related Articles
ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಧಾರವಾಡ ಡೀಸಿ ದೀಪಾ ಚೋಳನ್ ಶುಕ್ರವಾರ ಬೆಳಗ್ಗೆ 2 ಲಕ್ಷ ರೂ.ಚೆಕ್ ವಿತರಿಸಿದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ|ರಾಜಕುಮರ್ ಖತ್ರಿ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು,
ಕಟ್ಟಡ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಹೆಚ್ಚಳದ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳವ ಭರವಸೆ ನೀಡಿದರು.
Advertisement
ಆರೋಪಿಗಳು ಪೊಲೀಸ್ ವಶಕ್ಕೆಗುರುವಾರ ಕೊಲ್ಲಾಪೂರದಲ್ಲಿ ಬಂಧನಕ್ಕೆ ಒಳಗಾಗಿದ್ದ ಕಿಲ್ಲರ್ ಕಟ್ಟಡದ ಎಂಜಿನಿಯರ್ ವಿವೇಕ್ ಪವಾರ್‌ಗೆ ಮಾ.25ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸುವಂತೆ ಇಲ್ಲಿನ 2ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ಇನ್ನುಳಿದಂತೆ ಗುರುವಾರ ತಡರಾತ್ರಿ ಪೊಲೀಸರಿಗೆ ಶರಣಾದ ಕಟ್ಟಡ ಮಾಲೀಕರಾದ ಗಂಗಾಧರ ಶಿಂತ್ರಿ, ಬಸವರಾಜ ನಿಗದಿ, ರವಿ ಸಬರದ, ಮಹಾಬಳೇಶ್ವರ ಪುರದಗುಡಿ ಅವರು ಕೂಡ ಪೊಲೀಸ್ ವಶದಲ್ಲಿದ್ದು ಅವರನ್ನು ಪೊಲೀಸರು ಶೀಘ್ರವೇ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಧಾರವಾಡದಲ್ಲಿ ಕಟ್ಟಡ ದುರಂತ ನಡೆದಿರುವುದು ವಿಷಾದನೀಯ ಸಂಗತಿ. ಮೃತರ ಕುಟುಂಬಗಳಿಗೆ ಭಗವಂತ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಈ ಘಟನೆಯಲ್ಲಿ ಗಾಯಗೊಂಡ ಎಂಟು ಜನರಿಗೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ● ಡಾ|ವಿರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ