ಧಾರವಾಡ: ದೇಶದ ಪ್ರತಿಷ್ಠಿತ ಕೃಷಿ ವಿವಿಯಾಗಿರುವ ಧಾರವಾಡದ ಕೃಷಿ ವಿವಿಯ 33 ನೇ ಘಟಿಕೋತ್ಸವ ಫೆ.27 ರಂದು ನಡೆಯಲಿದೆ.
ಕೃಷಿ ವಿವಿಯಲ್ಲಿ ಇಂದು ಕುಲಪತಿ ಡಾ.ಎಂ.ಬಿ.ಚೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿದರು.
ಹನುಮನಮಟ್ಟಿಯ ಕೃಷಿ ಪದವಿಧರ ಜಯಂತ ಕಲ್ಲುಗುಡಿ ಅತಿ ಹೆಚ್ಚು ಮೂರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಮೇಘಶ್ರೀ ಪಾಟೀಲ ಎರಡು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಪಿ.ಎಚ್.ಡಿ ವಿಭಾಗದಲ್ಲಿ ಸಸ್ಯರೋಗ ವಿಭಾಗದ ಸರಣ್ಯಾ ಆರ್. ಚಿನ್ನದ ಪದಕ ಪಡೆದಿದ್ದಾರೆ.
ಇದನ್ನೂ ಓದಿ:ಕೊಲೆ, ದರೋಡೆಗೆ ಜೈಲಲ್ಲೇ ಪ್ಲಾನ್: ಮಂಗಳೂರಿನ ರೌಡಿ ಶೀಟರ್‌ಗಳ ಕರೆಸಿ ಕೊಲೆಗೆ ಸಂಚು!
ಕಾರ್ಯಕ್ರಮಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.