Advertisement

ಧರ್ಮಸ್ಥಳ, ಉಜಿರೆಗೆ ಭೇಟಿ ನೀಡಿದ ಪ್ರಥಮ ಪ್ರಧಾನಿ

10:08 AM Oct 30, 2017 | Team Udayavani |

ಬೆಳ್ತಂಗಡಿ: ಪ್ರಧಾನಿ ಮೋದಿ ಅವರು ಧರ್ಮಸ್ಥಳ ಅಥವಾ ಬೆಳ್ತಂಗಡಿ ತಾಲೂಕಿಗೆ ಭೇಟಿ ನೀಡಿದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೊದಲು ಇಂದಿರಾಗಾಂಧಿ ಅವರು 1977 ಹಾಗೂ 1980ರಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ್ದರೂ ಮಾಜಿಯಾಗಿದ್ದರು. 1991ರಲ್ಲಿ ರಾಜೀವ್‌ ಗಾಂಧಿ ಅವರು ಕೂಡ ಮಾಜಿ ಪ್ರಧಾನಿಯಾಗಿದ್ದಾಗಲೇ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಎಚ್‌.ಡಿ. ದೇವೇಗೌಡ ಅವರು ಕೂಡ ಮಾಜಿಯಾಗಿ ದ್ದಾಗಲೇ ಭೇಟಿ ನೀಡಿದವರು. ಅಧಿಕಾರದಲ್ಲಿರುವಾಗ ಬಂದ ಮೊದಲ ಪ್ರಧಾನಿ ಮೋದಿ ಮಾತ್ರ.

Advertisement

ರಾಷ್ಟ್ರಪತಿಗಳ ಪೈಕಿ 1993ರಲ್ಲಿ ಶಂಕರ್‌ ದಯಾಳ್‌ ಶರ್ಮಾ ಅವರು ಅಧಿಕಾರದಲ್ಲಿದ್ದಾಗ ಭೇಟಿ ನೀಡಿ ಹೆಗ್ಗಡೆಯವರಿಗೆ ರಾಜರ್ಷಿ ಉಪಾಧಿಯನ್ನು ಪ್ರದಾನ ಮಾಡಿದ್ದರು. ಅನಂತರ 2003ರಲ್ಲಿ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 2008ರಲ್ಲಿ ಉಪರಾಷ್ಟ್ರಪತಿ ಭೈರೋನ್‌ ಸಿಂಗ್‌ ಶೇಖಾವತ್‌ ಅವರು ಯೋಜನೆಯ ಬೆಳ್ಳಿಹಬ್ಬಕ್ಕೆ ಆಗಮಿಸಿದ್ದರು. ಮಾಜಿಯಾದ ಬಳಿಕವೂ ಡಾ| ಕಲಾಂ ಅವರು ಲಕ್ಷದೀಪೋತ್ಸವ ಸಮ್ಮೇಳನಕ್ಕೆ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next