Advertisement

ವಿಪತ್ತಿನ ಆಪತ್ಭಾಂಧವನೇ ಶೌರ್ಯ: ಡಾ|ಹೆಗ್ಗಡೆ

01:39 AM Nov 27, 2021 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಯೋಜನೆಗಳನ್ನು ಕಳೆದ ನಾಲ್ಕು ದಶಕಗಳಿಂದ ಹಮ್ಮಿಕೊಂಡು ಬರಲಾಗಿದೆ. ಇದಕ್ಕೆ ಇನ್ನೊಂದು ಸೇರ್ಪಡೆ ವಿಪತ್ತು ನಿರ್ವಹಣ ಕಾರ್ಯಕ್ರಮ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

ಯೋಜನೆಯ ಕೇಂದ್ರ ಕಚೇರಿಯ ಸಭಾಭವನದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಸಮಿತಿಯ ಸಂಯೋಜಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ವಿಪತ್ತುಗಳು ಹೇಳಿ ಕೇಳಿ ಬರುವುದಿಲ್ಲ. ಅಪಾಯದ ಸ್ಥಳಗಳಿಂದ ಉಪಾಯದಿಂದ ಕೌಶಲ ಬಳಸಿ ಜೀವಹಾನಿ, ಆಸ್ತಿ ಹಾನಿಗಳನ್ನು ತಪ್ಪಿಸಲು ಬೇಕಾದ ಪ್ರಾಮಾಣಿಕ ಪ್ರಯತ್ನ ಮಾಡುವ ಪಡೆಯೇ ಶ್ರೀ ಧರ್ಮಸ್ಥಳ ಶೌರ್ಯ ತಂಡವಾಗಿದೆ ಎಂದು ಅವರು ಉಲ್ಲೇಖೀಸಿದರು.

ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ ಅವರು ಆಡಿಯೋ ಸಂದೇಶದಲ್ಲಿ ಮಾತನಾಡಿ, ಶೌರ್ಯ ಕಾರ್ಯಕ್ರಮದಿಂದ ಜನರಲ್ಲಿರುವ ವಿಪತ್ತಿನ ಭಯ ಕಡಿಮೆಯಾಗಿದೆ. ಸ್ವಯಂ ಜಾಗ್ರತೆಯಿಂದ ಇತರರನ್ನೂ ಕಾಪಾ ಡುವ ಬಗ್ಗೆ ಗಮನ ಹರಿಸಿ ಶೌರ್ಯ ತಂಡದ ಕೀರ್ತಿ ಪತಾಕೆ ಉತ್ತುಂಗಕ್ಕೇರಿಲಿ ಎಂದು ಹಾರೈಸಿದರು.

ಇದನ್ನೂ ಓದಿ:ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಪರಿಹರಿಸಲು ಸಚಿವ ನಾಗೇಶ್‌ ಭರವಸೆ

Advertisement

ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌. ಎಚ್‌. ಮಂಜುನಾಥ್‌, ಯೋಜನೆಯ ಸಿಇಒಅನಿಲ್‌ ಕುಮಾರ್‌, ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್‌ ವಿ. ಪಾçಸ್‌, ಉರಗ ತಜ್ಞ ಸ್ನೇಕ್‌ ಜೋಯ್‌ ಉಜಿರೆ, ವಿಪತ್ತು ನಿರ್ವಹಣ ವಿಭಾ ಗದ ಯೋಜನಾಧಿಕಾರಿ ಜೈವಂತ್‌ ಪಟಗಾರ್‌, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಮೋಹನ್‌ ಕೆ., ಮಾಧವ, ಯೋಜನಾಧಿಕಾರಿ ಜಯಕರ ಶೆಟ್ಟಿ, ಯಶವಂತ ಸಾಲ್ಯಾನ್‌, ತರಬೇತಿಯ ಮೇಲ್ವಿಚಾರಕ ದಿನೇಶ್‌ ಮರಾಠಿ ಉಪಸ್ಥಿತರಿದ್ದರು.

ಶ್ರೀ ಧರ್ಮಸ್ಥಳ ಮೆಡಿಕಲ್‌ ಟ್ರಸ್ಟ್‌ನ ಕಾರ್ಯದರ್ಶಿ ಶಿಶುಪಾಲ್‌ ಪೂವಣಿ, ಜಾಗೃತಿ ಸೌಧ ಕಟ್ಟಡದ ಮೇಲ್ವಿಚಾರಕ ಕಿಶೋರ್‌ ಸಹಕರಿಸಿದರು.

ರಾಜ್ಯದ 32 ತಾಲೂಕುಗಳಿಗೆ ವಿಸ್ತಾರ
ರಾಜ್ಯದಲ್ಲಿ 32 ತಾಲೂಕುಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿ ಜನರಿಗೆ ಅಭಯ ನೀಡಲಾಗಿದೆ. ಈಗಾಗಲೇ ಸುಮಾರು 6,908 ವಿಪತ್ತು ಸೇವಾಕಾರ್ಯಗಳು, 7,697 ಸಾಮಾಜಿಕ ಸೇವಾಕಾರ್ಯ ಮಾಡುತ್ತ ಕೇವಲ ಒಂದು ವರ್ಷ 7 ತಿಂಗಳಲ್ಲಿ 43,815 ಮಾನವ ದಿನಗಳನ್ನು ವಿನಿಯೋಗಿಸಿ ಸಮಾಜದ ನಿಜವಾದ ಸೇವಕರಾಗಿ ಶ್ರಮಿಸಿರುವುದು ಶ್ರೇಷ್ಠ ಸಾಧನೆಯಾಗಿದೆ ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next