Advertisement
ಧರ್ಮಸ್ಥಳ ಅಮೃತವರ್ಷಿಣಿ ಸಭಾ ಭವನದಲ್ಲಿ 64 ದಿನಗಳಲ್ಲಿ ನಡೆಯುವ ಪುರಾಣಕಾವ್ಯ ವಾಚನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪಂಚದ ಮೂರು ಮೂಲಭೂತ ಕಾಯಕಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯದ ಕುರಿತಾಗಿ ಪುರಾಣ ವಿವರಿ ಸುತ್ತದೆ. ಸೃಷ್ಟಿಯ ಅಧಿಪತಿ ಬ್ರಹ್ಮ, ಸ್ಥಿತಿಯ ಅಧಿಪತಿ ವಿಷ್ಣು ಹಾಗೂ ಲಯದ ಅಧಿಪತಿ ಶಿವನ ಕುರಿತು ಪುರಾಣದಲ್ಲಿ ಮಾಹಿತಿ, ಮಾರ್ಗದರ್ಶನವಿದೆ ಎಂದು ಅವರು ತಿಳಿಸಿದರು.
ಪರಿಶುದ್ಧ ಮನಸ್ಸಿನಿಂದ ಪರಮಾತ್ಮ ನನ್ನು ಪೂಜಿಸಬೇಕು. ವ್ರತ- ನಿಯಮ ಗಳ ಅನುಷ್ಠಾನ, ಉಪಾ ಸನೆ ಹಾಗೂ ನಿತ್ಯವೂ ಗಾಯತ್ರಿ ಮಂತ್ರ ಪಠಣ ದಿಂದ ವೈದ್ಯರಿಂದ ಗುಣಪಡಿಸಲಾಗದ ರೋಗವು ಸಂಪೂರ್ಣ ಶಮನಗೊಳ್ಳುತ್ತದೆ. ಇದು ನನ್ನ ಸ್ವಾನು ಭವವೂ ಹೌದು ಎಂದು ಅವರು ವಿವರಿಸಿದರು. ಲಲಿತೋ ಪಾಖ್ಯಾನ, ಶ್ರೀ ಧಾರಣಾ ಸರಸ್ವತಿ ಮಂತ್ರ ಪಠಣದಿಂದ ನೆಮ್ಮದಿ ಪ್ರಾಪ್ತಿ, ಆಧ್ಯಾತ್ಮಿಕ ಉನ್ನತಿಯಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿಗೆ ಅನೇಕ ರೀತಿಯ ಪೂಜೆ, ಸೇವೆಗಳನ್ನು ಅರ್ಪಿಸಲಾಗುತ್ತದೆ. 47 ವರ್ಷಗಳಿಂದ ಪ್ರತಿ ವರ್ಷ ಎರಡು ತಿಂಗಳು ನಡೆಯುವ ಪುರಾಣ ವಾಚನ- ಪ್ರವಚನವೂ ಅಮೂಲ್ಯ ಸೇವೆಯಾಗಿದೆ. ಇದರಿಂದಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಅನೇಕ ಮಂದಿ ಉದಯೋನ್ಮುಖ ಗಮಕಿಗಳು, ಕಲಾವಿದರು ಮೂಡಿ ಬಂದಿದ್ದಾರೆ. ಸ್ವಾಧ್ಯಾಯ ಹಾಗೂ ವಿಶೇಷ ಅಧ್ಯಯನಕ್ಕೂ ಅವಕಾಶವಾಗಿದೆ ಎಂದು ಹೇಳಿದರು.
Related Articles
Advertisement
ಹೇಮಾವತಿ ವೀ. ಹೆಗ್ಗಡೆ, ಸುಪ್ರಿಯಾ ಹಷೇìಂದ್ರ ಕುಮಾರ್, ಹರಿಕೃಷ್ಣ ಪುನರೂರು, ಗಣಪತಿ ಪದ್ಯಾಣ ಮತು ¤ಉಜಿರೆ ಅಶೋಕ ಭಟ್ ಉಪಸ್ಥಿತರಿದ್ದರು. ಗಣಪತಿ ಪದ್ಯಾಣ ಅವರು ವಾಚನ ಮಾಡಿದರು. ಉಜಿರೆ ಅಶೋಕ ಭಟ್ ಪ್ರವಚನ ನೀಡಿದರು. ಎ.ವಿ. ಶೆಟ್ಟಿ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಅವರು ನಿರೂಪಿಸಿ, ವಂದಿಸಿದರು.
64 ದಿನ ಪುರಾಣ ವಾಚನ-ಪ್ರವಚನಅಮೃತವರ್ಷಿಣಿ ಸಭಾಭವನದಲ್ಲಿ 64 ದಿನಗಳಲ್ಲಿ ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ಗಂಟೆ ವರೆಗೆ ಪುರಾಣ ವಾಚನ-ಪ್ರವಚನ ನಡೆಯಲಿದೆ. 17 ಮಂದಿ ಪುರಾಣ ವಾಚನ ಮಾಡಲಿದ್ದು, 27 ಮಂದಿ ಪ್ರವಚನ ನೀಡುವರು. ಶ್ರೀ ಲಲಿತೋಪಾಖ್ಯಾನ, ಸೋಮೇಶ್ವರ ಶತಕ, ಶಿಶುನಾಳ ಷರೀಫರ ಗೀತೆಗಳು, ಭಗವದ್ಗೀತೆ, ಶಂಕರ ಸಂಹಿತೆ, ನಳಚರಿತ್ರೆ, ರಾಮಾಶ್ವಮೇಧ, ರಾಮಾಯಣದರ್ಶನಂ ಮೊದಲಾದ ಪುರಾಣ ಕಾವ್ಯಗಳ ವಾಚನ-ಪ್ರವಚನ ನಡೆಯಲಿದೆ. ನಿರಪೇಕ್ಷ ಭಾವ
ಜೀವನದಲ್ಲಿ ಅತೀ ಶ್ರೇಷ್ಠ ಭಾವನೆಗಳನ್ನು ಗೌರವಿಸಿ ನಿರಪೇಕ್ಷ ಭಾವದಿಂದ ಸ್ವೀಕರಿಸಬೇಕು. ಬೆಳಕಿನಲ್ಲಿ ಏಳು ಬಣ್ಣಗಳು ಲೀನವಾಗಿದ್ದರೂ ಸಹಜವಾಗಿ ನಾವು ಅದನ್ನು ಪ್ರತ್ಯೇಕವಾಗಿ ಬಣ್ಣವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಎಲ್ಲ ಭಾವನೆಗಳನ್ನು ಸಹಜವಾಗಿ ಹೊಂದಿರಬೇಕು.
– ಎಲ್. ನಾಗರಾಜ ಹಿರಿಯ ವಿದ್ವಾಂಸರು