ಚಿಕ್ಕೋಡಿ: ಬರಪೀಡಿತ ಪ್ರದೇಶಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಮುಂದೆ ಬಂದಿದೆ.
ರಾಜ್ಯಾದ್ಯಂತ ಕಾರ್ಯಕ್ರಮ: ತಾಲೂಕು ಯೋಜನಾಧಿಕಾರಿ ಗಣಪತಿ ಮಾಳಂಜಿ ಮಾತನಾಡಿ, ಬರಪೀಡಿತ ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ ಕಾರ್ಯಕ್ರಮ ರಾಜ್ಯಾದ್ಯಂತ ಮಾಡುತ್ತಿದ್ದು, ಈ ಕಾರ್ಯಕ್ರಮ ತಾಲೂಕಿನ ಕರೋಶಿ, ಬಂಬಲವಾಡ, ಕಮತೆನಟ್ಟಿ, ತೋರಣಹಳ್ಳಿ, ಬಿದರಳ್ಳಿ, ಹತ್ತರವಾಟ, ಮಾಗನೂರು, ಮುಗಳಿ, ಜೈನಾಪುರ, ಕುಂಗಟೋಳಿ, ಬೆಳಕೂಡ ಆಯ್ದ ಬರ ಪೀಡಿತ ಪ್ರದೇಶಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದಿನಕ್ಕೆ 8ರಂತೆ ಒಂದು ತಿಂಗಳ ಕಾಲ ಒಟ್ಟು 240 ಟ್ಯಾಂಕರ್ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಜಿಪಂ ಸದಸ್ಯೆ ಲಕ್ಷ್ಮೀ ಕುರಬರ, ತಾಪಂ ಸದಸ್ಯೆ ನಸೀಮಾ ಭಾನು, ಗ್ರಾಪಂ ಉಪಾಧ್ಯಕ್ಷೆ ಸಾವಿತ್ರಿ ಜೇಧೆ, ವಿಜಯ ಕೊಟೆವಾಲೆ, ಮೇಲ್ವಿಚಾರಕರಾದ ನವೀನ್ ನಾಯ್ಕ, ಕುಮಾರ ಬಣಕಾರ ಇದ್ದರು.
ಪ್ರಸಕ್ತ ವರ್ಷ ನದಿಗಳು ಬರಿದಾಗಿದ್ದು, ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ನೀರು ಪೂರೈಸುವ ಬಗ್ಗೆ ಗ್ರಾಮದ ಜನರು ಹಾಗೂ ಜನಪ್ರತಿನಿಧಿಗಳು ಬೇಡಿಕೆ ನೀಡಿದ್ದು, ಪರಿಶೀಲಿಸಿ ಕ್ಷೇತ್ರದ ಪೂಜ್ಯರಿಗೆ ಮನವಿ ಮಾಡಿದಾಗ ಒಂದು ತಿಂಗಳ ಕಾಲ ನೀರು ಸರಬರಾಜು ಮಾಡಲು ಒಟ್ಟು ರೂ.1,44,000 ಮಂಜೂರು ಮಾಡಿದ್ದಾರೆ. Advertisement
ತಾಲೂಕಿನ ಕರೋಶಿ ಗ್ರಾಮದಿಂದ ಕುಡಿಯುವ ನೀರಿನ ಯೋಜನೆಗೆ ಸಂಸ್ಥೆಯ ಜಿಲ್ಲಾ ನಿರ್ದೇಶಕ ಶೀನಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೂರು ದಶಕಗಳಿಂದ ರಾಜ್ಯದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಹತ್ತಾರು ಸಮಾಜಮುಖೀ ಕಾರ್ಯಕ್ರಮಗಳೊಂದಿಗೆ ಜನಪ್ರಿಯವಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಯಶಸ್ವಿಯಾಗಿ ಅನುಷ್ಠಾನಿಸುತ್ತ ಬಂದಿದೆ. ಇದೀಗ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಉಚಿತವಾಗಿ ವಿತರಿಸಲು ಸಂಸ್ಥೆ ಮುಂದೆ ಬಂದಿದೆ ಎಂದರು.
•ಶೀನಪ್ಪ, ಸಂಸ್ಥೆಯ ಜಿಲ್ಲಾ ನಿರ್ದೇಶಕ