Advertisement

ಧರ್ಮಸ್ಥಳ ಲಕ್ಷದೀಪೋತ್ಸವ: ಕೆ.ಎಸ್.ಆರ್.ಟಿ.ಸಿ ಹೆಚ್ಚುವರಿ ಬಸ್ ಸೌಲಭ್ಯ

08:15 PM Nov 25, 2019 | Hari Prasad |

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಮೊದಲ ದಿನ ಭಕ್ತ ಜನರ ಉತ್ಸಾಹವನ್ನು ಸಂಕೇತಿಸಿತ್ತು. ಭಕ್ತಜನರ ಪ್ರಯಾಣ ಸೌಕರ್ಯದ ಸಲುವಾಗಿ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮದ ಧರ್ಮಸ್ಥಳ ಡಿಪೋ ವಿಶೇಷ ಮುತುವರ್ಜಿವಹಿಸಿದ್ದು ವಿಶೇಷ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಡಿಪೋಎಂದಿನ 165 ಬಸ್ಸಿನ ವ್ಯವಸ್ಥೆಯನ್ನು ಹೊರತುಪಡಿಸಿ ಹೆಚ್ಚುವರಿಯಾಗಿ 30 ವಿಶೇಷ ಬಸ್ಸುಗಳ ಸೌಲಭ್ಯವನ್ನು ಕಲ್ಪಿಸಿಕೊಟ್ಟಿತ್ತು. ಇದು ಭಕ್ತ ಜನರಲ್ಲಿ ಹರುಷ ಮೂಡಿಸಿದ್ದು, ಶ್ರೀ ಕ್ಷೇತ್ರದಲ್ಲಿ ಉತ್ಸವದ ಸಂಭ್ರಮಕ್ಕೆ ಮತ್ತಷ್ಟು ಪೂರಕವಾಗಿದೆ.

Advertisement

ಶಿರಾಡಿ ಘಾಟಿಗೆ ಸಂಪರ್ಕ ಕಲ್ಪಿಸಲು ಡಿಪೋದಿಂದ 15 ಹೆಚ್ಚುವರಿ ವಿಶೇಷ ಬಸ್ಸುಗಳ ಸಂಚಾರವಿತ್ತು. ಇನ್ನುಳಿದ 15 ಬಸ್ಸುಗಳು ಸ್ಥಳೀಯರ ಅನುಕೂಲಕ್ಕೆ ಮೀಸಲಾಗಿದ್ದವು.
ಈ ಬಗ್ಗೆ ಧರ್ಮಸ್ಥಳ ಡಿಪ್ಪೋದ ಸಿಬ್ಬಂದಿ ವರ್ಗದ ಮುಖ್ಯಸ್ಥ ಜನಾರ್ದನ ಅವರು ವಿವರಗಳನ್ನು ನೀಡಿದರು. ‘ಪ್ರಯಾಣಿಕರ ನಿಬಿಡತೆಯನ್ನು ಪರಿಗಣಿಸಿ ಬಸ್ಸಿನ ವ್ಯವಸ್ಥೆಯನ್ನುಒದಗಿಸಲಾಗುವುದು. ಸಂಜೆ 7 ಗಂಟೆಯ ನಂತರ ಸಾರ್ವಜನಿಕ ಪ್ರಯಾಣದ ಸಂಖ್ಯೆ ಕಡಿಮೆಯಾಗುವುದರಿಂದ ಅಗತ್ಯತೆಗೆ ತಕ್ಕಷ್ಟು ಬಸ್ಸುಗಳನ್ನು ಒದಗಿಸುವುದರಲ್ಲಿ ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದರು.

ಒಂದು ಬಸ್ಸಿಗೆ ಒಮ್ಮೆಯ ಪ್ರಯಾಣಕ್ಕೆ ಕನಿಷ್ಟ 50 ಸೀಟುಗಳು ಭರ್ತಿಯಾಗಬೇಕು. ಒಂದು ಕಿ.ಮೀ.ಗೆ ಸುಮಾರು 38ರೂ. ವೆಚ್ಚವಾಗುವುದರಿಂದ ಎರಡು ಮೂರು ಪ್ರಯಾಣಿಕರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗುವುದಿಲ್ಲ ಎಂದರು.

ಉತ್ಸವದಎಲ್ಲಾ ದಿನಗಳಲ್ಲಿ ದಿಡುಪೆ, ಬೆಳಾಲು, ಶಿಶಿಲ, ಶಿಬಾಜೆ, ಪಟ್ರಮೆ, ಕೊಕ್ಕಡ, ನೆರಿಯ, ಗಂಡಿಬಾಗಿಲು ಮತ್ತು ಪುದುವೆಟ್ಟು ಹೀಗೆ ಅನೇಕ ಸ್ಥಳೀಯ ಗ್ರಾಮಗಳಿಗೆ ಎಂದಿನಂತೆ ನಿಗದಿತ ಸಮಯಕ್ಕೆ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ. ಚಾರ್ಮಾಡಿ ಘಾಟ್ ಬಂದ್ ಆಗಿರುವ ಕಾರಣ ಎಕ್ಸ್ ಪ್ರೆಸ್ ಬಸ್ಸುಗಳ ಸಂಚಾರ ಇಲ್ಲದಿರುವುದರಿಂದ ಚಾರ್ಮಾಡಿಯವರೆಗೂ ಸಾರ್ವಜನಿಕರಿಗೆ ಸ್ಥಳೀಯ ಬಸ್ಸಿನ ವ್ಯವಸ್ಥೆ ಇದೆ. ಶಿರಾಡಿ ಘಾಟಿಯ ಮೂಲಕ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ಗಳ ಸಂಚಾರ ವ್ಯವಸ್ಥೆಗೊಳಿಸಲಾಗಿದೆ.

ವರದಿ – ಚಿತ್ರಗಳು: ಅಖಿಲೇಶ

Advertisement
Advertisement

Udayavani is now on Telegram. Click here to join our channel and stay updated with the latest news.

Next